

ಮುಂಬೈ: ಸೆಕ್ಸ್ ರಾಕೆಟ್ ದಂಧೆಯಲ್ಲಿ ಮುಂಬೈ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ನಟಿ ಹಾಗೂ ಕಾಸ್ಟಿಂಗ್ ನಿರ್ದೇಶಕಿ ಆರತಿ ಮಿತ್ತಲ್ ಕುರಿತು ಹಲವು ಆಸಕ್ತಿಕರ ಸಂಗತಿಗಳು ತನಿಖೆಯಿಂದ ಹೊರ ಬೀಳುತ್ತಿದೆ.
ಈ ಆರತಿ ಮಿತ್ತಲ್ ಬಾಲಿವುಡ್ ಅಂಗಳದಲ್ಲಿ ತುಂಬಾ ಪ್ರಭಾವ ಹೊಂದಿದ್ದಾಳೆ. ಅಪ್ನಾಪಾನ್ ಸರಣಿಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿರುವ ಆರತಿ, ಆರ್. ಮಾಧವನ್ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಳು. ಆದರೆ, ಇದೀಗ ವೇಶ್ಯಾವಾಟಿಕೆ ಪ್ರಕರಣದಲ್ಲಿ ಮುಂಬೈ ಪೊಲೀಸರ ಕೈಗೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ.
ಬಾಲಿವುಡ್ ಪರಿಚಯವೇ ಲಾಭ ಆರತಿ, ಬಾಲಿವುಡ್ ದಿಗ್ಗಜರ ರಹಸ್ಯ ಚಟುವಟಿಕೆಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದಳು. ವಿರಾಮದ ಅಗತ್ಯವಿರುವ ಬಾಲಿವುಡ್ ದಿಗ್ಗಜರು ಹಾಗೂ ಉದ್ಯಮಿಗಳಿಗೆ ಮಾಡೆಲ್‌ಗಳನ್ನು ಪೂರೈಸಲು ಬಾಲಿವುಡ್ ಅನ್ನು ಲಾಭದಾಯಕವಾಗಿ ಬಳಸಿಕೊಳ್ಳುತ್ತಿದ್ದಳು. ಈ ತಿಂಗಳ 11ರಂದೇ ಆರತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಆದಾಗ್ಯೂ ಈ ಸುದ್ದಿ ತಡವಾಗಿ ಬೆಳಕಿಗೆ ಬಂದಿತು. ಇದೀಗ ಈ ವಿಚಾರ ಬಾಲಿವುಡ್ ಅಂಗಳದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಇದನ್ನೂ ಓದಿ: ಶ್ರೀಲಂಕಾದಿಂದ ಚೀನಾಕ್ಕೆ 1 ಲಕ್ಷ ಕೋತಿಗಳು ರಫ್ತು ; ಮಂಗಗಳು ಯಾಕೆ ಬೇಕು ಗೊತ್ತಾ?
ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆರತಿ ಸ್ಥಳೀಯ ಮಾಧ್ಯಮ ವರದಿಯ ಪ್ರಕಾರ ಪೊಲೀಸರು ಗ್ರಾಹಕರ ಸೋಗಿನಲ್ಲಿ ಆರತಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದರು. ಪೋಲೀಸ್ ಪೇದೆಯೊಬ್ಬರು ಗ್ರಾಹಕರಂತೆ ಆರತಿ ಬಳಿ ತೆರಳಿ ತನ್ನ ಇಬ್ಬರು ಸ್ನೇಹಿತರಿಗಾಗಿ ಇಬ್ಬರು ಹುಡುಗಿಯರನ್ನು ಕೇಳಿದರು. ಅದಕ್ಕೆ ಆರತಿ ಸಮ್ಮತಿಸಿ 60,000 ರೂ. ಬೇಡಿಕೆ ಇಟ್ಟಿದ್ದಳು. ಅಷ್ಟೇ ಅಲ್ಲದೆ, ಪೇದೆಯ ಫೋನ್ಗೆ ಇಬ್ಬರು ಮಹಿಳೆಯರ ಫೋಟೋಗಳನ್ನು ಆರತಿ ಕಳುಹಿಸಿದಳು ಮತ್ತು ಇಬ್ಬರು ಮಾಡೆಲ್‌ಗಳನ್ನು ಜುಹು ಅಥವಾ ಗೋರೆಗಾಂವ್ ಮೂಲದ ಹೋಟೆಲ್‌ಗಳಿಗೆ ಕಳುಹಿಸಲಾಗುವುದು ಎಂದು ತಿಳಿಸಿದಳು. ಇದಾದ ಬಳಿಕ ಪೊಲೀಸರು ಗೋರೆಗಾಂವ್‌ನ ಹೋಟೆಲ್‌ನಲ್ಲಿ ಎರಡು ಕೊಠಡಿಗಳನ್ನು ಕಾಯ್ದಿರಿಸಿದರು ಮತ್ತು ಆರತಿ ಮಾಡೆಲ್‌ಗಳೊಂದಿಗೆ ಬಂದಾಗ, ಅವಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದರು. ಒಳ್ಳೆಯ ಕೆಲಸ ಮತ್ತು ಹಣದ ಭರವಸೆ ನೀಡುವುದಾಗಿ ನಮ್ಮ ಮನವೊಲಿಸಿ ನಮ್ಮನ್ನು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಸಿವಂತೆ ಮಾಡಿದರು ಎಂದು ಮಾಡೆಲ್ಗಳಿಬ್ಬರು ಆರತಿ ವಿರುದ್ಧ ಆರೋಪ ಮಾಡಿದ್ದಾರೆ. ಮಾನವ ಕಳ್ಳಸಾಗಣೆಗೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಆರತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಜೋಳಿಗೆ ಹಿಡಿದಿರುವ ಸೊಗಡು ಹೆಗಲ ಮೇಲೆ 29.14 ಕೋಟಿ ಸಾಲ ! ವಯಸ್ಕರ ಚಿತ್ರದಲ್ಲಿ ನಟನೆ ಇನ್ಸ್ಟಾಗ್ರಾಂನಲ್ಲಿ ಒಂದು ಲಕ್ಷಕ್ಕೂ ಅಧಿಕ ಫಾಲೋವರ್ಸ್ನೊಂದಿಗೆ ಆರತಿ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಪ್ರಸಿದ್ಧಿಯನ್ನು ಪಡೆದಿದ್ದಾಳೆ. ಬಾಲಿವುಡ್ ತಾರೆಯಾಗಿ ಹೊರಹೊಮ್ಮಲು ಬೇಕಾದ ಎಲ್ಲ ಸಂಪತ್ತು ಆಕೆಯ ಬಳಿಯಿತ್ತು. ಆದರೆ, ಅದೃಷ್ಟ ಕೈಕೊಟ್ಟಿದ್ದು, ಇದೀಗ ಕಂಬಿ ಹಿಂದೆ ದಿನಗಳನ್ನು ಎಣಿಸುತ್ತಿದ್ದಾಳೆ. ಹಿಂದೊಮ್ಮೆ ಆರತಿ ವಯಸ್ಕರ ಚಿತ್ರಣದಲ್ಲೂ ನಟಿಸಿದ್ದಾಳೆ. ಆ ಬಗ್ಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಆರತಿ ಪಶ್ಚಾತಾಪವನ್ನು ಸಹ ವ್ಯಕ್ತಪಡಿಸಿದ್ದರು.
ಆರತಿ ಅವರು ನಟಿ ರಾಜಶ್ರೀ ಠಾಕೂರ್ ಅವರೊಂದಿಗೆ ‘ಅಪ್ನಾಪನ್’ ಶೋನಲ್ಲಿ ಕೆಲಸ ಮಾಡಿದ್ದಾರೆ. ಅವರು ಇತ್ತೀಚೆಗೆ ‘ನಾ ಉಮ್ರಾ ಕಿ ಸೀಮಾ ಹೋ’ ಸೆಟ್‌ನಿಂದ ವೀಡಿಯೊವನ್ನು ಹಂಚಿಕೊಂಡಿದ್ದರು. ಇದಲ್ಲದೆ, ಕೆಲವು ದಿನಗಳ ಹಿಂದೆ ಅವರು ನಟ ಆರ್ ಮಾಧವನ್ ಅವರೊಂದಿಗೆ ಚಿತ್ರದ ಚಿತ್ರೀಕರಣದಲ್ಲಿರುವುದಾಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದರು. (ಏಜೆನ್ಸೀಸ್)