'ಒಬ್ಸೆಷನ್'​ ಸಿನಿಮಾ ಅಬ್ಬರಕ್ಕೆ ಬಾಕ್ಸ್​ ಆಫೀಸ್ ಶೇಕ್; 26 ವರ್ಷದ ನಿರ್ದೇಶಕನ ಸಿನಿಮಾ​ ಗಳಿಸಿದ್ದೆಷ್ಟು ಗೊತ್ತಾ?..​Obsession Collection Movie

​Obsession Movie Box Office Collection
​Obsession Movie Box Office Collection
Published on
​Obsession Horror Movie Box Office Collection: ನಿರ್ದೇಶಕ ಕರ್ರಿ ಬಾರ್ಕರ್ ನಿರ್ದೇಶನದ ‘ಒಬ್ಸೆಷನ್’ ಸೈಕಾಲಾಜಿಕಲ್​​​ ಹಾರರ್ ಸಿನಿಮಾ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ  ಹೊಸ ದಾಖಲೆ ಬರೆದಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ವಿಶ್ವದಾದ್ಯಂತ ಬರೋಬ್ಬರಿ  1,960 ಕೋಟಿಗೂ ಹೆಚ್ಚು ರೂಪಾಯಿ ಗಳಿಕೆಯತ್ತ ಸಾಗಿದೆ.  ‘ಫೋಕಸ್ ಫೀಚರ್ಸ್’ಸಿನಿಮಾ ಸಂಸ್ಥೆಯ ಇತಿಹಾಸದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಸಾರ್ವಕಾಲಿಕ ನಂಬರ್ 1 ಸಿನಿಮಾ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.
7 ಕೋಟಿ ಬಜೆಟ್​​ನಲ್ಲಿ ನಿರ್ಮಾಣವಾದ, ಯೂಟ್ಯೂಬರ್​ ಕರ್ರಿ ಬಾರ್ಕರ್​ ನಿರ್ದೇಶನದ ಒಬ್ಸೆಷನ್ ಸಿನಿಮಾ ಈ ವರ್ಷದ ನಂಬರ್​1 ಸಿನಿಮಾವಾಗಿದೆ.  ಈ ಥ್ರಿಲ್ಲರ್​​, ಹಾರರ್​ ಸಿನಿಮಾ ಕತೆಯು ಜಾಗತಿಕವಾಗಿ 1,960 ಕೋಟಿಗೂ ಹೆಚ್ಚು ರೂಪಾಯಿಗೂ ಹೆಚ್ಚು  ಗಳಿಕೆ ಮಾಡುವ ಗಡಿಯತ್ತ ಸಾಗಿದೆ. 
ಬ್ಲಮ್​ ಹೌಸ್​ ಅಟಾಮಿಕ್​  ಮಾನ್​ ಸ್ಟರ್​ ಪ್ರೊಡಕ್ಷನ್ಸ್​​  ನಿರ್ಮಿಸಿರುವ  ‘ಒಬ್ಸೆಷನ್’   ಚಿತ್ರ  ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಸಿನಿಮಾ ನಿರ್ಮಾಣಕ್ಕೆ, ಅದನ್ನು ಗೆಲ್ಲಿಸೋಕೆ ಕೋಟಿ ಕೋಟಿ ಬೇಕಾಗಿಲ್ಲ ಕತೆಯ ಹಿನ್ನೆಲೆ ಮುಖ್ಯ ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ. ಫೋಕಸ್ ಫೀಚರ್ಸ್’ಸಿನಿಮಾ ಸಂಸ್ಥೆಯ ಇತಿಹಾಸದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಸಾರ್ವಕಾಲಿಕ ನಂಬರ್ 1 ಸಿನಿಮಾ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

20 ಕೋಟಿಗೂ ಹೆಚ್ಚು ಗಳಿಕೆ

​ಬಾಕ್ಸ್ ಆಫೀಸ್ ಟ್ರ್ಯಾಕರ್ ‘ಬಾಕ್ಸ್‌ಆಫೀಸ್ ಮೋಜೋ’ದ ಅಧಿಕೃತ ಮಾಹಿತಿ ಪ್ರಕಾರ, ಮೇ.15ರಂದು ರಿಲೀಸ್​ ಆದ ಥ್ರಿಲ್ಲರ್​ ಸಿನಿಮಾ 26 ದಿನಗಳಲ್ಲಿ ವಿಶ್ವಾದ್ಯಂತ  234 ಮಿಲಿಯನ್ ಡಾಲರ್ ಗಳಿಕೆ ಮಾಡಿದೆ ಎನ್ನಲಾಗಿದೆ. ಅಮೆರಿಕದ ದೇಶೀಯ ಮಾರುಕಟ್ಟೆಯೊಂದರಲ್ಲೇ ಈ ಸಿನಿಮಾ $161 ಮಿಲಿಯನ್ (15 ಕೋಟಿಗೂ ಹೆಚ್ಚು ರೂ.) ಬಾಚಿಕೊಂಡಿದೆ.
ಟೊರೊಂಟೊ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಫೋಕಸ್​​ ಫೀಚರ್ಸ್​​ ಸಂಸ್ಥೆಯು ಏಳು ಕೋಟಿ ಬಜೆಟ್​​ನಲ್ಲಿ ನಿರ್ಮಾಣವಾದ ನಿರ್ದೇಶಕ ಕರ್ರಿ ಬಾರ್ಕರ್ ಒಬ್ಸೆಷನ್​ ಸಿನಿಮಾವನ್ನು 15 ದಶ ಲಕ್ಷ ಡಾಲರ್​ ನೀಡಿ ಖರೀದಿ ಮಾಡಿತ್ತು. ಆದರೆ ಇಂದು ಈ ಸಿನಿಮಾಕ್ಕೆ ಜಾಗತಿಕವಾಗಿ ಇಷ್ಟೊಂದು ಮೆಚ್ಚುಗೆ ಸಿಗುತ್ತದೆ ಎನ್ನುವುದು ಯಾರಿಗೂ ತಿಳಿದಿರಲಿಲ್ಲ.

ಬ್ಲಾಕ್​ ಬಸ್ಟರ್​ ಸಿನಿಮಾಗಳನ್ನು ಹಿಂದಿಕ್ಕಿದ್ದ ಒಬ್ಸೆಷನ್

'ಡೌನ್ಟನ್ ಅಬ್ಬೆ’ ಹಾಗೂ 'ನೊಸ್ಫೆರಾಟು’, ಬರ್ನ್​​, ಆಫ್ಟರ್​ ರೀಡಿಂಗ್​, ಡಾಕ್ಟರ್​ ಅವರ ಎನ್ನುವ ಜಾಗತಿಕ ಒಡೆತನದ ಬಿಗ್​​ ಬಜೆಟ್​ ಸಿನಿಮಾಗಳ ಸಾರ್ವಕಾಲಿಕ ರೆಕಾರ್ಡ್​ನ್ನು ಒಬ್ಸೆಷನ್​ ಸಿನಿಮಾ ಮುರಿದಿದೆ.

ಯಾರೀ ನಿರ್ದೇಶಕ

 26 ವರ್ಷದ ಕರ್ರಿ ಬಾರ್ಕರ್ ಅಷ್ಟೇನು ಪರಿಚಯವಿಲ್ಲದ ನಿರ್ದೇಶಕ. ಹಾಸ್ಯ ನಟ, ಬರಹಗಾರ ಕೂಡ ಹೌದು. ಈ ಹಿಂದೆ ಯುಟ್ಯೂಬ್‌ನಲ್ಲಿ ಉಚಿತವಾಗಿ ಬಿಡುಗಡೆಯಾಗಿದ್ದ ‘ಮಿಲ್ಕ್ ಅಂಡ್ ಸೀರಿಯಲ್’ ಎಂಬ ಫೌಂಡ್-ಫೂಟೇಜ್ ಚಿತ್ರ, ‘ದಿ ಚೇರ್’  ಎಂಬ ಕಿರುಚಿತ್ರ ಹಾಗೂ ‘ದಟ್ಸ್ ಎ ಬ್ಯಾಡ್ ಐಡಿಯಾ’ ಎಂಬ ಸ್ಕೆಚ್ ಕಾಮಿಡಿ ಚಾನೆಲ್ ಮೂಲಕ ಗುರುತಿಸಿಕೊಂಡಿದ್ದರು.

ಒಬ್ಸೆಷನ್​ ಕತೆ ಏನು?

ಮ್ಯೂಸಿಕ್​ ಶಾಪ್​ನಲ್ಲಿ ಕೆಲಸ ಮಾಡುವ ಯುವಕ ನಿಕ್ಕಿ ಎನ್ನುವ ಯುವತಿಯನ್ನು ಪ್ರೀತಿಸುತ್ತಾನೆ. ಆಕೆಯು ತನ್ನನ್ನು ಪ್ರೀತಿಸುವಂತೆ ಒನ್​ ವಿಷ್​ ವಿಲೋ ಎನ್ನುವ ನಿಗೂಢ ವಸ್ತುಬಳಿ ಬೇಡಿಕೊಂಡು ಮುರಿಯುತ್ತಾನೆ, ಆದರೆ ಇದರಿಂದ ಮುಂದಾಗುವುದೇ ಹಿಂಸಾತ್ಮಕವಾದದ್ದು. ಯುವಕ ಇದ್ರಿಂದ ತಪ್ಪಿಸಿಕೊಳ್ಳೋದು ಹೇಗೆ ಎನ್ನುವುದೇ ಸಿನಿಮಾದ ಕತೆಯ ಹಂದರವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net