

Vijay Sethupathi : ತಮ್ಮ ವಿರುದ್ಧ ಕೇಳಿಬಂದಿರುವ ಕಾಸ್ಟಿಂಗ್ ಕೌಚ್ನಂತಹ ಗಂಭೀರ ಆರೋಪಕ್ಕೆ ತಮಿಳು ಚಿತ್ರರಂಗದ ಸೂಪರ್ಸ್ಟಾರ್ ವಿಜಯ್ ಸೇತುಪತಿ ಕೊನೆಗೂ ಪ್ರತಿಕ್ರಿಯೆ ನೀಡಿದ್ದಾರೆ.
ರಮ್ಯಾ ಮೋಹನ್ ಹೆಸರಿನ ಎಕ್ಸ್ ಖಾತೆಯ ಮೂಲಕ ವಿಜಯ್ ಸೇತುಪತಿ ಅವರ ಮೇಲೆ ಕಾಸ್ಟಿಂಗ್ ಕೌಚ್ ಆರೋಪ ಹೊರಿಸಲಾಗಿತ್ತು. ಕಾಲಿವುಡ್ನಲ್ಲಿ ಡ್ರಗ್ ಮತ್ತು ಕಾಸ್ಟಿಂಗ್ ಕೌಚ್ ಸಂಸ್ಕೃತಿ ತಮಾಷೆಯಲ್ಲ. ನನಗೆ ತಿಳಿದಿರುವ ಒಬ್ಬ ಹುಡುಗಿಯನ್ನು ಆಕೆಗೆ ಎಂದಿಗೂ ಪರಿಚಯವಿಲ್ಲದ ಜಗತ್ತಿಗೆ ಬಲವಂತವಾಗಿ ಎಳೆಯಲಾಯಿತು. ಆಕೆ ಈಗ ಪುನರ್ವಸತಿಯಲ್ಲಿದ್ದಾಳೆ. ಸಿನಿಮಾ ವಲಯದಲ್ಲಿ ಡ್ರಗ್ಸ್, ವಂಚನೆ ಮತ್ತು ಶೋಷಣೆ ಸಾಮಾನ್ಯವಾಗಿದೆ. ವಿಜಯ್ ಸೇತುಪತಿ ಕ್ಯಾರವಾನ್ ಫೇವರ್ಸ್ಗಾಗಿ 2 ಲಕ್ಷ ರೂ. ಆಮಿಷ ಒಡ್ಡಿದರು. ಅಲ್ಲದೆ, ಆಕೆಯನ್ನು ವರ್ಷಗಳ ಕಾಲ ಬಳಸಿಕೊಂಡರು. ಇದು ಕೇವಲ ಕಥೆಯಲ್ಲ. ಇಷ್ಟೆಲ್ಲ ಆದರೂ ಮಾಧ್ಯಮಗಳು ಅಂತಹ ಪುರುಷರನ್ನು ಸಂತರಂತೆ ಪೂಜಿಸುತ್ತವೆ. ಸಿನಿಮಾ ವಲಯದಲ್ಲಿ ಡ್ರಗ್-ಸೆಕ್ಸ್ ಸಂಬಂಧ ಇರುವುದು ನಿಜ. ಇದು ತಮಾಷೆಯಲ್ಲ ಎಂದು ಮಹಿಳೆ ಬರೆದಿದ್ದರು.
ಯಾವಾಗ ರಮ್ಯಾ ಮೋಹನ್ ಮಾಡಿದ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತೋ ಅನೇಕ ಜನರು ಕಾಮೆಂಟ್ಗಳ ಸುರಿಮಳೆಗೈದರು. ಘಟನೆ ವಿವಾದ ಸ್ವರೂಪ ಪಡೆದ ಬೆನ್ನಲ್ಲೇ ರಮ್ಯಾ ಅವರು ಪೋಸ್ಟ್ ಅನ್ನು ಡಿಲೀಟ್ ಮಾಡಿದರು. ಅಲ್ಲದೆ, ರಮ್ಯಾ ಮತ್ತೊಂದು ಪೋಸ್ಟ್ ಮಾಡಿ, ತಮ್ಮ ಪೋಸ್ಟ್ ಇಷ್ಟೊಂದು ಗಮನ ಸೆಳೆಯುತ್ತದೆ ಎಂದು ತಿಳಿದಿರಲಿಲ್ಲ ಮತ್ತು ಹುಡುಗಿಯ ಉತ್ತಮ ಜೀವನ ಮತ್ತು ಗೌಪ್ಯತೆಯನ್ನು ಗೌರವಿಸಿ ಪೋಸ್ಟ್ ಡಿಲೀಟ್ ಮಾಡಿದ್ದೇನೆ ಎಂದು ಹೇಳಿಕೆ ನೀಡಿದರು.
ವಿಜಯ್ ವಿರುದ್ಧ ಗಂಭೀರ ಆರೋಪ ಕೇಳಿಬಂದ ಬೆನ್ನಲ್ಲೇ ತಮಿಳು ಚಿತ್ರರಂಗದಲ್ಲಿ ಭಾರೀ ಕೋಲಾಹಲ ಸೃಷ್ಟಿಯಾಯಿತು. ಈ ಬಗ್ಗೆ ಸಾಕಷ್ಟು ಮಂದಿ ವಿಜಯ್ ಅವರ ಪ್ರತಿಕ್ರಿಯೆಗಾಗಿ ಕಾದು ಕುಳಿತಿದ್ದರು. ಕೊನೆಗೂ ಪ್ರತಿಕ್ರಿಯೆ ನೀಡಿರುವ ಅವರು ಈ ಆರೋಪಗಳು ಸುಳ್ಳು ಮತ್ತು ಆಧಾರರಹಿತವಾಗಿದ್ದು ಎಂದಿದ್ದಾರೆ.
ತಮನ್ನು ತಾವು ಗಮನ ಸೆಳೆಯಲು ಇಂತಹ ಕೆಲಸಗಳನ್ನು ಮಾಡುತ್ತಿದ್ದಾರೆ. ನನ್ನ ಬಗ್ಗೆ ಗೊತ್ತಿರುವವರು ಇದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಇಂತಹ ಆರೋಪಗಳು ನಮ್ಮ ಕುಟುಂಬ ಮತ್ತು ಸ್ನೇಹಿತರನ್ನು ಅಸಮಾಧಾನಗೊಳಿಸಿವೆ. ಆರೋಪಗಳನ್ನು ಮಾಡುವ ವ್ಯಕ್ತಿಯ ಗುರಿ ತಾತ್ಕಾಲಿಕ ಖ್ಯಾತಿಯಾಗಿದೆ ಎಂದು ವಿಜಯ್ ಸೇತುಪತಿ ಹೇಳಿದ್ದಾರೆ. ಅಲ್ಲದೆ, ಈ ಆರೋಪಗಳ ಸಂಬಂಧ ಸೈಬರ್ ಸೆಲ್ನಲ್ಲಿ ದೂರು ಕೂಡ ದಾಖಲಿಸಿದ್ದೇನೆ ಎಂದು ಮಾಧ್ಯಮಗಳಿಗೆ ನೀಡಿದ ಸ್ಪಷ್ಟನೆಯಲ್ಲಿ ತಿಳಿಸಿದ್ದಾರೆ.
ಕಳೆದ ಏಳು ವರ್ಷಗಳಲ್ಲಿ ಇದೇ ರೀತಿಯ ಅಪಪ್ರಚಾರಗಳನ್ನು ಎದುರಿಸುತ್ತಿದ್ದೇನೆ. ಇಂತಹ ಆರೋಪಗಳು ಇದೇ ಮೊದಲಲ್ಲ. ಇಂತಹ ಆರೋಪಗಳು ನನ್ನ ಮೇಲೆ ಪರಿಣಾಮ ಬೀರಿಲ್ಲ ಮತ್ತು ಎಂದಿಗೂ ಪರಿಣಾಮ ಬೀರುವುದಿಲ್ಲ ಎಂದು ವಿಜಯ್ ಸೇತುಪತಿ ಪ್ರತಿಪಾದಿಸಿದರು. (ಏಜೆನ್ಸೀಸ್)