‘ನೋಡು ಶಿವ’; ಭಗವಾನ್​ಗಿಷ್ಟ ಈ ಶಿವ!

Bhagawan
Published on

ಬೆಂಗಳೂರು: ‘ಇಂಥ ಕಲರ್​ಫುಲ್ ಹಾಡುಗಳನ್ನು ಚಿತ್ರೀಕರಿಸಲು ನಮ್ಮಿಂದ ಆಗಲಿಲ್ಲ. ಆ ಕೊರಗು ‘ನೋಡು ಶಿವ’ನನ್ನು ನೋಡಿದ ಮೇಲೆ ನನ್ನನ್ನೂ ಕಾಡುತ್ತಿದೆ’- ಹೀಗೆ ಹೊಸಬರ ಆಲ್ಬಂ ಹಾಡನ್ನು ನೋಡಿ ಹೇಳಿಕೊಂಡರು ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್. ಎಂ.ಕೆ ಆರ್ಟ್ಸ್ ಬ್ಯಾನರ್​ನಲ್ಲಿ ಮೋನಿಕಾ ಕಲ್ಲೂರಿ ನಿರ್ವಿುಸಿರುವ ‘ನೋಡು ಶಿವ’ ಹಾಡು ಇತ್ತೀಚೆಗಷ್ಟೇ ಬಿಡುಗಡೆ ಆಗಿದೆ. ಚಂದನ್ ಶೆಟ್ಟಿ ಸಂಗೀತ ಸಂಯೋಜಿಸಿ ಧ್ವನಿ ನೀಡಿರುವ ಈ ಹಾಡಿನಲ್ಲಿ ಕಿರುತೆರೆ ನಟಿ ಮೇಘಾ ಶೆಟ್ಟಿ ಗ್ಲಾಮರಸ್ ಅವತಾರದಲ್ಲಿ ಕಾಣಿಸಿಕೊಂಡರೆ, ಸುಮಿತ್ ಹಾಡಿಗೆ ಸಾಹಿತ್ಯ ಬರೆದು ನಟಿಸಿದ್ದಾರೆ.

ಇದೇ ಸಮಾರಂಭಕ್ಕೆ ಹಿರಿಯ ನಿರ್ದೇಶಕ ಭಗವಾನ್ ಮತ್ತು ನಿರ್ವಪಕ ರಾಕ್​ಲೈನ್ ವೆಂಕಟೇಶ್ ಆಗಮಿಸಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ. 60 ನೃತ್ಯ ಕಲಾವಿದರು, 150 ಸಹ ನೃತ್ಯಗಾರರನ್ನು ಬಳಸಿಕೊಂಡು ಭಜರಂಗಿ ಮೋಹನ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಕರುಣಾಕರ್ ಛಾಯಾಗ್ರಹಣವಿದ್ದು, ಆನಂದ್ ಆಡಿಯೋದಲ್ಲಿ ಹಾಡು ಲಭ್ಯವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net