ಭಾರತದಲ್ಲಿ ಸಿನಿಪ್ರಿಯರು ಸದ್ಯ ಏಪ್ರಿಲ್ ತಿಂಗಳಿಗೋಸ್ಕರ ಚಾತಕ ಪಕ್ಷಿಗಳಂತೆ ಕಾದು ಕುಳಿತ್ತಿದ್ದಾರೆ. ಕಾರಣ, ಏಪ್ರಿಲ್ನಲ್ಲಿ ಸಿನಿಪ್ರಿಯರಿಗೆ ಮಸ್ತ್ ಮನರಂಜನೆ ಸಿಗಲಿದೆ. ಹೌದು, ಹಲವು ಬಿಗ್ ಬಜೆಟ್ಪ್ಯಾ,ನ್ ಇಂಡಿಯಾ ಚಿತ್ರಗಳು ಒಟ್ಟೊಟ್ಟಿಗೆ ತೆರೆಗಪ್ಪಳಿಸಲಿವೆ. ಹಾಗೆ ರಿಲೀಸ್ ಆಗುವ ಸಿನಿಮಾಗಳ ಪೈಕಿ, ನಟ ರಾಕಿಂಗ್ ಸ್ಟಾರ್ ಯಶ್ ಅವರು ಅಭಿನಯಿಸಿರುವ ‘ಕೆಜಿಎಫ್: ಚಾಪ್ಟರ್ 2’ ಮತ್ತು ತಮಿಳು ನಟ ದಳಪತಿ ವಿಜಯ್ ಅಭಿನಯದ ‘ಬೀಸ್ಟ್’ ಚಿತ್ರಗಳು ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿವೆ. ಇನ್ನು, ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿರುವ ಈ ಸಿನಿಮಾಗಳು ಕೇವಲ ಒಂದೇ ದಿನದ ಅಂತರದಲ್ಲಿ ರಿಲೀಸ್ ಆಗಲಿವೆ. ಹಾಗಾಗಿ, ಈ ಎರಡೂ ಚಿತ್ರಗಳ ನಡುವೆ ಸಿಕ್ಕಾಪಟ್ಟೆ ಕಾಂಪಿಟಿಷನ್ ಇರಲಿದೆ ಎಂದು ಊಹಿಸಲಾಗಿತ್ತು.