ಹುಟ್ಟುಹಬ್ಬದ ಸಂಭ್ರಮ ಬೇಡ; ಅಭಿಮಾನಿಗಳಿಗೆ ಸುದೀಪ್​ ಮನವಿ

Ullasa-3
Published on

ಬೆಂಗಳೂರು: ಕರೊನಾ ಹಾವಳಿಯಿಂದಾಗಿ ಹಲವು ಸ್ಟಾರ್ ನಟರು ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿಲ್ಲ.

ಸುದೀಪ್ ಸಹ ಇದೇ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದು, ಅಭಿಮಾನಿಗಳ ಆರೋಗ್ಯದ ದೃಷ್ಟಿಯಿಂದ ಸೆ.2ರಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ತೀರ್ವನಿಸಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾ ಮೂಲಕ ಸಂದೇಶ ಕಳಿಸಿರುವ ಅವರು, ಈ ಬಾರಿ ಹುಟ್ಟುಹಬ್ಬದ ಸಂಭ್ರಮ ಬೇಡ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲ, ಅಭಿಮಾನಿಗಳೆಲ್ಲಾ ಸುರಕ್ಷಿತವಾಗಿ ತಾವು ಇದ್ದಲ್ಲೇ ಶುಭಹಾರೈಸಿ ಎಂದು ಮನವಿ ಮಾಡಿದ್ದಾರೆ. ಸಾಧ್ಯವಿದ್ದರೆ, ಅಭಿಮಾನಿಗಳು ಇರುವ ಜಾಗದಲ್ಲೇ ಅಗತ್ಯವಿರುವವರಿಗೆ ಸಹಾಯ ಮಾಡುವುದಕ್ಕೆ ಕರೆ ನೀಡಿದ್ದಾರೆ. ಮುಂದೊಂದು ದಿನ ಇವೆಲ್ಲಾ ಮುಗಿದ ನಂತರ ಖಂಡಿತ ಭೇಟಿಯಾಗುವುದಾಗಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net