ಚಂದನ್​ ಶೆಟ್ಟಿಯನ್ನು ಬಿಟ್ಟು ಸೋಲೋ ಟ್ರಿಪ್ ಹೋದ ನಿವೇದಿತಾ; ಇಲ್ಲಿವೆ ನೋಡಿ ಫೋಟೋಗಳು…

Niveditha Gowda
Published on

ಬೆಂಗಳೂರು: ಸದಾ ಸುದ್ದಿಯಲ್ಲಿರುವ ನಿವೇದಿತಾ ಗೌಡ, ಪ್ರವಾಸಿಗರ ಸ್ವರ್ಗ ಎಂದು ಕರೆಸಿಕೊಳ್ಳುವ ಇಂಡೋನೇಷ್ಯಾ ದೇಶದ 'ಬಾಲಿ' ತೆರಳಿದ್ದಾರೆ. ತಾನು ಸೋಲೋ ಟ್ರಿಪ್ ಕೈಗೊಂಡಿರುವ ಬಗ್ಗೆ ಇತ್ತೀಚೆಗೆ ನಿವೇದಿತಾ ತಮ್ಮ ಇನ್ಸ್​​ಟಾಗ್ರಾಂನಲ್ಲಿ ರೀಲ್ಸ್​ ಮುಖಾಂತರ ಮಾಹಿತಿ ಹಂಚಿಕೊಂಡಿದ್ದರು. ಇದೀಗ ಬಾಲಿಯಲ್ಲಿ ತೆಗೆದಿರುವ ಫೋಟೋಗಳನ್ನು ಇದೀಗ ಹಂಚಿಕೊಂಡಿದ್ದಾರೆ. ನಿವೇದಿತಾ ಗೌಡ ಅಪ್ಲೋಡ್ ಮಾಡಿರುವ ಫೋಟೋಗಳನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ನಿವೇದಿತಾ ಬಗ್ಗೆ ಕ್ಯೂಟ್ ಕ್ಯೂಟ್ ಕಮೆಂಟ್ ಮಾಡುತ್ತಿದ್ದಾರೆ.

ನಿವೇದಿತಾ ಬಾಲಿಗೆ ಸೋಲೋ ಟ್ರಿಪ್ ಹೋಗುತ್ತಿರುವುದು ಗೊತ್ತಾಗುತ್ತಿದ್ದಂತೆ ಅನೇಕರು ಚಂದನ್ ಶೆಟ್ಟಿ ಎಲ್ಲಿ ಎಂದು ಪ್ರಶ್ನಿಸಿದ್ದರು. ಆದರೆ ನಿವೇದಿತಾ ಗೌಡ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೇ, ನಾನು ಮೊದಲ ಬಾರಿಗೆ ಸೋಲೋ ಪ್ರವಾಸ ಕೈಗೊಂಡಿದ್ದೇನೆ. ಈ ಬಗ್ಗೆ ನಾನು ಉತ್ಸಾಹದಿಂದ ಇದ್ದು, ಅಷ್ಟೇ ಕುತೂಹಲದಿಂದ ಇದ್ದೇನೆ ಎಂದು ಹೇಳಿಕೊಂಡಿದ್ದರು.

ತಮ್ಮ ಇನ್ಸ್​ಟಾಗ್ರಾಂನಲ್ಲಿ ಫೋಟೋಗಳನ್ನು ನಿವೇದಿತಾ ಹಂಚಿಕೊಂಡಿದ್ದು, ಗುಲಾಬಿ ಬಣ್ಣದ ಬಟ್ಟೆ ಧರಿಸಿ ಮಿಂಚುತ್ತಿದ್ದಾರೆ. ಅಲ್ಲದೇ, ತೆರೆದ ಪ್ರದೇಶದಲ್ಲಿರುವ ಜೋಕಾಲಿಯೊಂದರಲ್ಲಿ ಕುಳಿತುಕೊಂಡು ಎಂಜಾಯ್ ಮಾಡುತ್ತಿರುವ ರೀಲ್ಸ್​​ ಒಂದನ್ನು ಅಪ್ಲೋಡ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net