ಧನುಷ್​ಗೆ ನಿತ್ಯಾ ಮೆನನ್ ಜೋಡಿ

NITYA MENON
Published on

ಕಾಲಿವುಡ್ ನಟ ಧನುಷ್ ‘ಅಸುರನ್’ ಮತ್ತು ‘ಪಟ್ಟಾಸ್’ ಸಿನಿಮಾ ಸಕ್ಸಸ್ ಗುಂಗಿನಲ್ಲಿದ್ದಾರೆ. ಈ ಮಧ್ಯೆ ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ‘ಸುರುಳಿ’ ಚಿತ್ರದ ಶೂಟಿಂಗ್ ಮುಗಿಸಿದ್ದು, ಮಾರಿ ಸೆಲ್ವರಾಜ್ ಆಕ್ಷನ್-ಕಟ್ ಹೇಳಿರುವ ‘ಕರ್ಣನ್’ ಸಿನಿಮಾದಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ಹೀಗಿರುವಾಗಲೇ ಧನುಷ್ ನಾಯಕತ್ವದ 44ನೇ ಸಿನಿಮಾ ಸದ್ದಿಲ್ಲದೆ ಸೆಟ್ಟೇರಲು ಸಿದ್ಧತೆ ನಡೆಯುತ್ತಿದ್ದು, ಧನುಷ್​ಗೆ ಜೋಡಿಯಾಗಿ ನಿತ್ಯಾ ಮೆನನ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಸನ್ ಪಿಕ್ಚರ್ಸ್ ಬಂಡವಾಳ ಹೂಡಲಿದ್ದು, ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಮಿತ್ರನ್ ಜವಾಹರ್ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಅಂದಹಾಗೆ ಧನುಷ್ ಹಾಗೂ ಮಿತ್ರನ್ ಈ ಹಿಂದೆ

ಒಟ್ಟಿಗೆ ‘ಯಾರದಿ ನೀ ಮೋಹಿನಿ’, ‘ಕುಟ್ಟಿ’ ಸಿನಿಮಾ ಮಾಡಿದ್ದರು. ಇದೀಗ ಮತ್ತೆ ಧನುಷ್ 44ನೇ ಚಿತ್ರಕ್ಕೆ ಮಿತ್ರನ್ ಆಕ್ಷನ್-ಕಟ್ ಹೇಳಲು ಮುಂದಾಗಿದ್ದಾರೆ. ಇನ್ನು ಇತ್ತೀಚೆಗೆ ತಮಿಳಿನಲ್ಲಿ ತೆರೆಕಂಡ ‘ಸೈಕೋ’ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಿತ್ಯಾ ಕಾಣಿಸಿಕೊಂಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ಮಲಯಾಳಂನ ‘ಕೋಲಾಂಬಿ’ ಹಾಗೂ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಕುರಿತ ‘ದಿ ಐರನ್ ಲೇಡಿ’ ಬಯೋಪಿಕ್​ನಲ್ಲಿಯೂ ನಿತ್ಯಾ ಭಾಗಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net