ಪ್ರಿಯಾಂಕಾ ಬರ್ತ್​ಡೇಗೆ ಪತಿ ಕೊಟ್ಟ ಗಿಫ್ಟ್ ಏನು ಗೊತ್ತಾ? ಅಮೆರಿಕದಿಂದ ಬಂದ ದುಬಾರಿ ಉಡುಗೊರೆ ಕಂಡು ಪಿಗ್ಗಿ ಹೇಳಿದ್ದೇನು?

priyanka
Published on

ಲಂಡನ್: ನಟಿ ಪ್ರಿಯಾಂಕಾ ಚೋಪ್ರಾ ಜುಲೈ 18ರಂದು ತಮ್ಮ 39ನೇ ವರ್ಷದ ಜನ್ಮ ದಿನವನ್ನು ಆಚರಿಸಿಕೊಂಡಿದ್ದಾರೆ. ಆ ವಿಶೇಷ ದಿನದಂದು ಬಾಲಿವುಡ್​ನ ಹಲವು ಸೆಲೆಬ್ರಿಟಿಗಳು ನಟಿಗೆ ಶುಭ ಹಾರೈಸಿದ್ದಾರೆ. ವಿಶೇಷವೆಂದರೆ ಆಕೆಯ ಪತಿ ನಿಕ್ ಜೊನಸ್ ಹೆಂಡತಿಗಾಗಿ ಅಮೆರಿಕದಿಂದ ಲಂಡನ್​ಗೆ ವಿಶೇಷ ಗಿಫ್ಟ್ ಒಂದನ್ನು ಕಳುಹಿಸಿಕೊಟ್ಟಿದ್ದಾರಂತೆ. ಆ ಗಿಫ್ಟ್ ಕಂಡ ಪಿಗ್ಗಿ ಸಂತೋಷದಿಂದ ಕುಣಿದಾಡಿದ್ದಾರಂತೆ.


ಲಂಡನ್​ನಲ್ಲಿರುವ ಪ್ರಿಯಾಂಕಾಗೆ ಆಕೆಯ ಪತಿ ಅಮೆರಿಕದಿಂದ 1982 ಚಟೌ ಮೌಟನ್ ರೋಥ್‌ಚೈಲ್ಡ್ ರೆಡ್ ವೈನ್ ಬಾಟೆಲ್​ನ್ನು ಕಳುಹಿಸಿಕೊಟ್ಟಿದ್ದಾರೆ. ಅಂದ ಹಾಗೆ ಈ ವೈನ್​ ಅತ್ಯಂತ ದುಬಾರಿ ವೈನ್ ಅಂತೆ. ಕೇವಲ 750 ಮಿಲೀ ವೈನ್​ಗೆ ಸರಿಸುಮಾರು 1.31 ಲಕ್ಷ ರೂಪಾಯಿ ಬೆಲೆಯಂತೆ!


ಗಂಡ ಕಳುಹಿಸಿಕೊಟ್ಟಿರುವ ವೈನ್ ಬಾಟಲ್​ನ ಫೋಟೋವನ್ನು ನಟಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಬೇರೆಲ್ಲ ಗಿಫ್ಟ್​ಗಳಿಗಿಂತ ನನಗೆ ಈ ಗಿಫ್ಟ್ ಅತ್ಯಂತ ಸ್ಪೆಷಲ್ ಎಂದು ಹೇಳಿಕೊಂಡಿದ್ದಾರೆ.


ಪ್ರಿಯಾಂಕಾ ಮತ್ತು ನಿಕ್ ಡೇಟ್ ಮಾಡಲು ಆರಂಭಿಸಿದಾಗಿನಿಂದಲೂ ನಿಕ್ ತಮ್ಮ ಪ್ರೀತಿಯ ಗರ್ಲ್​ಫ್ರೆಂಡ್​ಗೆ ದುಬಾರಿ ಗಿಫ್ಟ್​ಗಳನ್ನು ಕೊಡುತ್ತಲೇ ಬಂದಿದ್ದಾರೆ. ಈ ಹಿಂದೆ ಪಿಗ್ಗಿ ಎಂಗೇಜ್ಮೆಂಟ್ ರಿಂಗ್ ಖರೀದಿಸಬೇಕೆಂದು ನಿಕ್ ಪೂರ್ತಿ ಟಿಫಾನಿ ಅಂಗಡಿಯನ್ನೇ ಆಕೆಗಾಗಿ ಕ್ಲೋಸ್ ಮಾಡಿಸಿದ್ದರು. ಈ ವಿಚಾರ ಸಾಕಷ್ಟು ಚರ್ಚೆಯೂ ಆಗಿತ್ತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net