ಸಂತ್ರಸ್ತೆಯನ್ನು ದೂಷಿಸುವುದು ಕುಶಲತೆ...ಶಿವಾಜಿ ಹೇಳಿಕೆಗೆ ನಿಧಿ ಅಗರ್ವಾಲ್​ ಖಡಕ್​ ರಿಯಾಕ್ಷನ್​! Nidhhi Agerwal

ಚಿತ್ರ Instagram
ಚಿತ್ರ Instagram
Published on

ಪ್ರಮುಖ ಮುಖ್ಯಾಂಶಗಳು

  • ಹೈದರಾಬಾದ್‌ನ ಲೂಲು ಮಾಲ್‌ ತೆರಳಿದ್ದ ನಟಿ ನಿಧಿ ಅಗರ್ವಾಲ್ ಮೇಲೆ ಅಭಿಮಾನಿಗಳ ಗುಂಪು ಅಶಿಸ್ತು ತೋರಿಸಿದೆ
  • ಈ ಕಾರ್ಯಕ್ರಮಕ್ಕೆ ನಟಿ ನಿಧಿ, ಆಫ್-ಶೋಲ್ಡರ್ ಡ್ರೆಸ್ ಧರಿಸಿ ಆಗಮಿಸಿದ್ದರು
  • ನಿರ್ಗಮನದ ವೇಳೆ ಬೌನ್ಸರ್‌ಗಳ ಸಹಾಯದ ಹೊರತಾಗಿಯೂ ಜನರ ತಳ್ಳಾಟದಿಂದ ನಿಧಿ ನಡುಗುತ್ತಾ ನಿಂತಿದ್ದರು
  • ಆಕೆ ತುಂಬಾ ಒಳ್ಳೆಯ ಹುಡುಗಿ ಆದರೆ ದೊಡ್ಡ ಗುಂಪು ಅವಳ ಮೇಲೆ ಬಿದ್ದಿತು: ಶಿವಾಜಿ
Nidhhi Agerwal: ಕಳೆದ ವಾರ ಪ್ರಭಾಸ್ ನಟನೆಯ 'ದಿ ರಾಜಾ ಸಾಬ್' ಚಿತ್ರದ 'ಸಹನಾ ಸಹನಾ' ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೈದರಾಬಾದ್‌ನ ಲೂಲು ಮಾಲ್‌ ತೆರಳಿದ್ದ ನಟಿ ನಿಧಿ ಅಗರ್ವಾಲ್ ಮೇಲೆ ಅಭಿಮಾನಿಗಳ ಗುಂಪು ಅಶಿಸ್ತು ತೋರಿ, ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿ ಕಿರುಕುಳ ನೀಡಿದ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಇದು ಸೆಲೆಬ್ರಿಟಿ ಸುರಕ್ಷತೆ ಬಗ್ಗೆ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಈ ಕಾರ್ಯಕ್ರಮಕ್ಕೆ ನಟಿ ನಿಧಿ, ಆಫ್-ಶೋಲ್ಡರ್ ಡ್ರೆಸ್ ಧರಿಸಿ ಆಗಮಿಸಿದ್ದರು. ನಿರ್ಗಮನದ ವೇಳೆ ಬೌನ್ಸರ್‌ಗಳ ಸಹಾಯದ ಹೊರತಾಗಿಯೂ ಜನರ ತಳ್ಳಾಟದಿಂದ ನಿಧಿ ನಡುಗುತ್ತಾ ದುಪಟ್ಟಾ ಹಿಡಿದುಕೊಂಡು ಕಾರಿನತ್ತ ತಲುಪಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಾದ್ಯಂತ ಹರಿಡಿದ್ದು, ಪರ-ವಿರೋಧ ಚರ್ಚೆಗಳು ನಡೆದಿವೆ.
ಈ ಘಟನೆಯ ಬಗ್ಗೆ ಮಾತನಾಡಿದ ನಟ ಶಿವಾಜಿ, ಮಹಿಳೆಯರ ಉಡುಗೆ ತೊಡುಗೆಗಳ ಕುರಿತಾಗಿ ನೀಡಿದ ಹೇಳಿಕೆಗಳು ತೀವ್ರ ಟೀಕೆಗೆ ಗುರಿಯಾಗಿದ್ದು, ಈ ಹೇಳಿಕೆಯು ಇತ್ತೀಚಿನ ನಿಧಿ ಅಗರ್ವಾಲ್ ಕಾರ್ಯಕ್ರಮದಿಂದ ಪ್ರಭಾವಿತವಾಗಿದೆ ಎಂದು ಅನೇಕರು ಉಲ್ಲೇಖಿಸಿದ್ದಾರೆ.

ನಿಧಿ ಒಳ್ಳೆಯ ಹುಡುಗಿ, ಆದರೆ ಗುಂಪು ಆಕೆಯ ಮೇಲೆ ಬಿದ್ದಿತು: ಶಿವಾಜಿ

ಪತ್ರಿಕಾಗೋಷ್ಟಿಯಲ್ಲಿ ನಿಧಿಯನ್ನು ಉಲ್ಲೇಖಿಸಿ ಮಾತನಾಡಿದ ಶಿವಾಜಿ, ಅವರು ಆಫ್-ಶೋಲ್ಡರ್ ಡ್ರೆಸ್ ಧರಿಸಿದ್ದರು, ಆಕೆ ತುಂಬಾ ಒಳ್ಳೆಯ ಹುಡುಗಿ ಆದರೆ ದೊಡ್ಡ ಗುಂಪು ಅವಳ ಮೇಲೆ ಬಿದ್ದಿತು. ಅವಳ ಮುಖ ನೋಡಿ ಮುಜುಗರವಾಯಿತು. ಈ ವೇಳೆ ಏನಾದರೂ ಬಟ್ಟೆ ಸ್ಲಿಪ್​ ಆಗಿದ್ದರೆ ಏನಾಗುತ್ತಿತ್ತು? ಸಾರ್ವಜನಿಕ ಪ್ರದೇಶಗಳಲ್ಲಿ ಮಹಿಳೆಯರು ಸರಿಯಾದ ಬಟ್ಟೆಗಳನ್ನು ಧರಿಸಬೇಕು ಎಂದು ಸಲಹೆ ನೀಡಿದರು.

ಶಿವಾಜಿ ಹೇಳಿಕೆ ನೀಡಿದ ಬೆನ್ನಲ್ಲೇ ಮೌನ ಮುರಿದ ನಿಧಿ!

ಶಿವಾಜಿ ಹೇಳಿಕೆಗೆ ಎರಡ್ಮೂರು ದಿನಗಳ ಬಳಿಕ ಮೌನ ಮುರಿದಿರುವ ನಿಧಿ, ಸಂತ್ರಸ್ತೆಯನ್ನು ದೂಷಿಸುವುದು ಕುಶಲತೆ ಎಂಬ ಶೀರ್ಷಿಕೆಯೊಂದಿಗೆ ತಮ್ಮ ಚಿತ್ರವನ್ನು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

'ದಂಡೋರ' ಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮದಲ್ಲಿ ಶಿವಾಜಿ ಹೇಳಿದ್ದೇನು!

'ದಂಡೋರ' ಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮದಲ್ಲಿ ಶಿವಾಜಿ ಮಾತನಾಡಿ, ನಾಯಕಿಯರು ಗ್ಲಾಮರ್ ಹೆಸರಿನಲ್ಲಿ ಎಲ್ಲೆ ಮೀರಬಾರದು. ಎಲ್ಲಾ ನಾಯಕಿಯರು ದೇಹದ ಭಾಗಗಳನ್ನು ಕಾಣುವಂತೆ ಉಡುಪುಗಳನ್ನು ಧರಿಸಬೇಡಿ ಎಂದು ನಾನು ವಿನಂತಿಸುತ್ತೇನೆ. ದಯವಿಟ್ಟು ದೇಹವನ್ನು ಸಂಪೂರ್ಣವಾಗಿ ಮುಚ್ಚುವ ಸೀರೆ ಅಥವಾ ಉಡುಪುಗಳನ್ನು ಧರಿಸಿ. ನಿಜವಾದ ಸೌಂದರ್ಯವು ಸೀರೆ ಅಥವಾ ಹೊದಿಕೆಯ ಬಟ್ಟೆಗಳಲ್ಲಿದೆ ಎಂದು ಅವರು ಹೇಳಿದರು.
ಮಹಿಳೆ ಪ್ರಕೃತಿಯಂತಿದ್ದಾಳೆ. ಪ್ರಕೃತಿ ಸುಂದರವಾಗಿದ್ದಾಗ, ನಾವು ಅದನ್ನು ಗೌರವಿಸುತ್ತೇವೆ. ಮಹಿಳೆ ನನ್ನ ತಾಯಿಯಂತೆ, ನಾನು ಅವರನ್ನು ನನ್ನ ಹೃದಯಕ್ಕೆ ಹತ್ತಿರವಾಗಿರಿಸುತ್ತೇನೆ. ಸ್ವಾತಂತ್ರ್ಯ ಅಮೂಲ್ಯ - ಅದನ್ನು ಕಳೆದುಕೊಳ್ಳಬೇಡಿ. ನಿಮ್ಮ ನಡವಳಿಕೆಯ ಆಧಾರದ ಮೇಲೆ ಜನರು ನಿಮ್ಮನ್ನು ಗೌರವಿಸುತ್ತಾರೆ. ಗ್ಲಾಮರ್ ಮಿತಿಗಳನ್ನು ಹೊಂದಿರಬೇಕು. ಒಂದು ನಿರ್ದಿಷ್ಟ ಗೆರೆಯನ್ನು ದಾಟಬಾರದು ಎಂದು ಹೇಳಿದರು (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net