ಶೂಟಿಂಗ್ ಮಾಡುವಾಗ ಪ್ರಿಯಾಂಕಾ ಗಂಡನಿಗೆ ಗಾಯ …

Priyanka Chopra - Nick Jonas - Final
Published on

ಮುಂಬೈ: ಪ್ರಿಯಾಂಕಾ ಚೋಪ್ರಾ ಗಂಡ ನಿಕ್​ ಜೋನಾಸ್​ಗೆ ಏಟು ಬಿದ್ದಿದೆ.  ಶನಿವಾರ ರಾತ್ರಿ ಶೂಟಿಂಗ್​ನಲ್ಲಿ ಭಾಗವಹಿಸುವ ಸಂದರ್ಭದಲ್ಲಿ ಅವರಿಗೆ ಗಾಯವಾಗಿದ್ದು, ಅವರು ಸುಧಾರಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಬಂದಿದೆ.

ಅಮೇರಿಕಾದಲ್ಲಿರುವ ನಿಕ್​, ಶನಿವಾರ ರಾತ್ರಿ ಟಿವಿ ಕಾರ್ಯಕ್ರಮವೊಂದರ ಚಿತ್ರೀಕರಣದಲ್ಲಿ ಭಾಗವಹಿಸಿದ್ದರಂತೆ. ತಕ್ಷಣವೇ ಒಂದು ಆಂಬ್ಯುಲೆನ್ಸ್​ ಕರೆದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಒಂದಿಷ್ಟು ಚಿಕಿತ್ಸೆಯ ನಂತರ ಭಾನುವಾರ ಅವರನ್ನು ಮನೆಗೆ ಕಳಿಸಲಾಗಿದೆ.

ಈ ವಿಷಯವನ್ನು ನಿಕ್​ ಆಗಲೀ, ಪ್ರಿಯಾಂಕಾ ಆಗಲೀ ದೊಡ್ಡದು ಮಾಡುವುದಕ್ಕೆ ಹೋಗಿಲ್ಲ. ಹಾಗೆಯೇ, ನಿಕ್​ ಯಾವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಅದರಲ್ಲಿ ನಿಕ್​ ಅವರ ಪಾತ್ರವೇನು ಎಂಬುದನ್ನು ಹೇಳಿಕೊಳ್ಳುವುದಕ್ಕೆ ಹೋಗಿಲ್ಲ. ಏನೂ ಆಗಿಯೇ ಇಲ್ಲ ಎನ್ನುವಂತೆ ಇದ್ದುಬಿಟ್ಟಿದ್ದಾರೆ. ಆದರೂ ಅದು ಹೇಗೋ ದೊಡ್ಡ ಸುದ್ದಿಯಾಗಿದೆ.

ಶೂಟಿಂಗ್ ಸಮಯದಲ್ಲಿ ನಿಕ್​ ಏಟು ಮಾಡಿಕೊಳ್ಳುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ, 2018ರಲ್ಲೂ ಒಮ್ಮೆ ನಿಕ್​ ಶೂಟಿಂಗ್​ ಸಮಯದಲ್ಲಿ ಗಾಯಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net