ಅನಿರೀಕ್ಷಿತ ಘಟನೆಗೆ ಹೆದರಿದ ಪ್ರಿಯಾಂಕಾ ಚೋಪ್ರಾ ಪತಿ! ಅಪಾಯದಲ್ಲಿದ್ದಾರಾ ನಿಕ್​ ಜೋನಸ್? Nick jonas

Nick jonas
Published on

ನ್ಯೂಯಾರ್ಕ್​: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ( Priyanka Chopra ) ಅವರ ಪತಿ ಹಾಗೂ ಅಮೆರಿಕನ್ ಪಾಪ್ ಗಾಯಕ ನಿಕ್ ಜೋನಸ್ ( Nick jonas ) ಅವರು ಅನಿರೀಕ್ಷಿತ ಘಟನೆಯಿಂದ ಆಘಾತಕ್ಕೆ ಒಳಗಾದ ಪ್ರಸಂಗ ನಡೆದಿದೆ.

ತನ್ನ ಸಹೋದರರಾದ ಜೋ ಮತ್ತು ಕೆವಿನ್ ಅವರೊಂದಿಗೆ ಜೆಕ್ ರಿಪಬ್ಲಿಕ್‌ನ ಪ್ರೇಗ್‌ನಲ್ಲಿ ನಿಕ್​ ಸಂಗೀತ ಕಾರ್ಯಕ್ರಮವನ್ನು ನಡೆಸುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಅವರ ಮೇಲೆ ಲೇಸರ್ ಬೆಳಕನ್ನು ಬೆಳಗಿಸಿದನು. ಇದರಿಂದ ಆತಂಕಕ್ಕೆ ಒಳಗಾದ ನಿಕ್ ಕಾರ್ಯಕ್ರಮವನ್ನು ಮಧ್ಯದಲ್ಲಿ ನಿಲ್ಲಿಸಿ ವೇದಿಕೆಯಿಂದ ನಿರ್ಗಮಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಈ ಘಟನೆಯ ಬಗ್ಗೆ ನಿಕ್ ಜೋನಾಸ್ ತಮ್ಮ ಭದ್ರತಾ ಸಿಬ್ಬಂದಿಗೆ ತಿಳಿಸಿದ್ದಾರೆ. ಕೂಡಲೇ ಭದ್ರತಾ ಸಿಬ್ಬಂದಿ, ನಿಕ್‌ಗೆ ಲೇಸರ್ ಹಿಡಿದ ವ್ಯಕ್ತಿಯನ್ನು ಗುರುತಿಸಿ, ಆತನನ್ನು ಕಾರ್ಯಕ್ರಮದಿಂದ ಹೊರ ಕಳುಹಿಸಿದರು. ನಿಕ್ ವೇದಿಕೆಯಿಂದ ಕೆಳಗೆ ಬಂದಾಗ, ಅವರ ಸಹೋದರರಾದ ಕೆವಿನ್ ಮತ್ತು ಜೋ ವೇದಿಕೆಯ ಮೇಲೆಯೇ ಇದ್ದರು. ಈ ಘಟನೆಯಿಂದ ಕೆಲಕಾಲ ಕಾರ್ಯಕ್ರಮ ಸ್ಥಗಿತಗೊಂಡಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ವೈರಲ್ ಆಗಿವೆ. ಇದನ್ನು ನೋಡಿದ ನೆಟ್ಟಿಗರು ನಿಕ್‌ಗೆ ಏನಾದರೂ ಅಪಾಯವಿದೆಯೇ? ಎಂದು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಅಂದಹಾಗೆ ಪ್ರಿಯಾಂಕಾ ಚೋಪ್ರಾ ಅವರು ಬಾಲಿವುಡ್​ನಲ್ಲಿ ಸ್ಟಾರ್​ ನಟಿಯಾಗಿದ್ದ ಸಂದರ್ಭದಲ್ಲಿ 2017ರಲ್ಲಿ 'ಬೇವಾಚ್' ಸಿನಿಮಾ ಮೂಲಕ ಹಾಲಿವುಡ್‌ಗೆ ಎಂಟ್ರಿ ಕೊಟ್ಟರು. ಆ ಸಮಯದಲ್ಲಿ ಪ್ರಿಯಾಂಕಾ, ನಿಕ್ ಅನ್ನು ಭೇಟಿಯಾದರು. ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಗಿ ಒಂದು ವರ್ಷ ಡೇಟಿಂಗ್ ನಡೆಸಿದರು. 2018ರಲ್ಲಿ ಎರಡೂ ಕುಟುಂಬಗಳ ಒಪ್ಪಿಗೆ ಮೇರೆಗೆ ಇಬ್ಬರು ಮದುವೆಯಾದರು.

ಮದುವೆಯ ನಂತರ ಪ್ರಿಯಾಂಕಾ ಅವರು ಮುಂಬೈಗೆ ವಿದಾಯ ಹೇಳಿ ಲಾಸ್ ಏಂಜಲೀಸ್​ನಲ್ಲಿ ನೆಲೆಸಿದ್ದಾರೆ. ಹಾಲಿವುಡ್‌ನಲ್ಲಿ ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಿಯಾಂಕಾ-ನಿಕ್ ಅವರ ಮಗಳು ಮಾಲ್ತಿ 2022. ಜನವರಿ 15ರಂದು ಜನಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net