

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜೆ.ಜಯಲಲಿತಾ ಅವರ ಜೀವನ ಆಧರಿತ ಚಿತ್ರ ತಲೈವಿಯ ಫಸ್ಟ್ ಲುಕ್ ಅನ್ನು ಬಾಲಿವುಡ್ ಖ್ಯಾತ ತಾರೆ ಕಂಗನಾ ರನೌತ್ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಜಯಲಲಿತಾ ಅವರ 72ನೇ ಹುಟ್ಟು ಹಬ್ಬದ ಅಂಗವಾಗಿ ಹೊಸ ಲುಕ್ನಲ್ಲಿ ತಲೈವಿ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ಗೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜಯಲಲಿತಾ ಅವರ ಪಾತ್ರಕ್ಕೆ ಕಂಗನಾ ಬಣ್ಣ ಹಚ್ಚಿದ್ದಾರೆ. ಜಯಲಲಿತಾ ಅವರನ್ನು ಹೋಲುವಂತೆ ಕಂಗನಾ ಅವರಿಗೆ ಕಲಾವಿದ ಜೇಸನ್ ಕೊಲ್ಲಿನ್ಸ್ ಮೇಕ್ಪ್ ಮಾಡಿದ್ದಾರೆ.
ಚಿತ್ರದಲ್ಲಿ ಜಯಲಲಿತಾ ಅವರ ಯೌವ್ವನದ ದಿನಗಳು ಹಾಗೂ ನಂತರ ರಾಜಕೀಯ ಪ್ರವೇಶದ ದಿನಗಳ ಹೋಲಿಕೆ ಮಾಡಲಾಗಿದೆ.
ತಲೈವಿ ಚಿತ್ರವನ್ನು ವಿನಯ್ ನಿರ್ದೇಶ ಮಾಡುತ್ತಿದ್ದು, ವಿಷ್ಣು ವರ್ಧನ್ ಇದುರೈ ಮತ್ತು ಶೈಲೇಶ್ ಆರ್ ಸಿಂಗ್ ಹಣ ಹೂಡಿಕೆ ಮಾಡಿದ್ದಾರೆ. ಜಯಲಲಿತಾ ಅವರ ರಾಜಕೀಯ ಗುರು ಎಂ ಜಿ ರಾಮಚಂದ್ರನ್ ಅವರ ಪಾತ್ರದಲ್ಲಿ ಅರವಿಂದ್ ಸ್ವಾಮಿ ನಟಿಸುತ್ತಿದ್ದಾರೆ.
ತಲೈವಿ ಚಿತ್ರ ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ 2021 ಜೂನ್ನಲ್ಲಿ ಬಿಡುಗೆಯಾಗಲಿದೆ. (ಏಜೆನ್ಸೀಸ್)