2020 ಹೊಸವರ್ಷ: ಗೋಲ್ಡನ್ ಲೈಫಿಗೆ ಸೂಪರ್ ಐಡಿಯಾ ಕೊಟ್ಟಿದ್ದಾರೆ ರಮೇಶ್ ಅರವಿಂದ್

ramesh aravind 1 JAN 20
Published on
ಒಂದೊಳ್ಳೆ ಲೈಫು, ಚಿಕ್ಕದಾದ್ರೂ ಚೊಕ್ಕ ಕೆಲಸ. ಅದ್ದೂರಿ ಅಲ್ಲದಿದ್ರೂ ಗೌರವವಾಗಿ ಬದುಕಿ, ಸ್ವಲ್ಪ ಉಳಿಸಿ ಕೂಡಿಡುವಷ್ಟು
ಆದಾಯ…. ಇಂತಹ ಸಣ್ಣ ಸಣ್ಣ ಕನಸುಗಳನ್ನು ಹೊತ್ತ ಎಷ್ಟೋ ಜೀವಗಳು ಇವುಗಳ ನನಸಿನ ಬಗ್ಗೆ ಪ್ರತಿನಿತ್ಯ ಕನವರಿಸುತ್ತಿರುತ್ತವೆ. ತೋಳಲ್ಲಿ ಶಕ್ತಿ ಇದ್ದರೂ ಏನು ಮಾಡಬೇಕೆಂಬ ಗೊಂದಲ, ಗೋಜಲು. ಏನು ಮಾಡಿದರೆ ಅದೇನು ಆಗುವುದೋ ಎಂಬ ಭಯ, ದುಗುಡ. ಈ ಆತಂಕ, ಭಯವನ್ನು ಗಂಟು ಮೂಟೆ ಕಟ್ಟಿ ಪಕ್ಕಕ್ಕಿಟ್ಟು ಮುನ್ನಡೆದ ಅದೆಷ್ಟೋ ಮಂದಿ ಕೇವಲ ಆತ್ಮವಿಶ್ವಾಸ ಎಂಬ ಬಂಡವಾಳ ಹೂಡಿ ಕೋಟಿ ಕೋಟಿ ಗಳಿಸುತ್ತಿದ್ದಾರೆ. ಇಂತಹ ಹಲವು ಸ್ಪೂರ್ತಿದಾಯಕರ ಜತೆಗೆ ವಿಜಯವಾಣಿಯ ಅಪಾರ ಓದುಗರು ನ್ಯಾಯಮಾರ್ಗದಿಂದ ದುಡಿಮೆ ದುಪ್ಪಟ್ಟು ಮಾಡುವ ಬಗ್ಗೆ ತಮ್ಮ ಅನುಭವ, ಸಲಹೆಗಳನ್ನು ಧಾರೆ ಎರೆದಿದ್ದಾರೆ. ಹೊಸ ವರ್ಷದ ದಿನ ನೀವು ಓದುವ ಈ ಆತ್ಮವಿಶ್ವಾಸದ ಸೂತ್ರಗಳು ನಿಮ್ಮ ಜೀವನಕ್ಕೆ ಹೊಸ ದಾರಿಯಾಗಲಿ ಎಂಬುದು ವಿಜಯವಾಣಿ ಆಶಯ, ಕಳಕಳಿ.
ರೆಕ್ಕೆಗಳೆರಡು ಬಲಿತಿರಲಿ

ಪ್ರತಿಕ್ಷಣ ಬದಲಾಗುವ ದುನಿಯಾದಲ್ಲಿ ಎತ್ತರಕ್ಕೆ ಹಾರಲು ಬೇಕಾಗಿರುವುದು 2 ರೆಕ್ಕೆಗಳು. ಮೊದಲನೆಯದು ಸೈಕಾಲಜಿ.

ಅದರೆ ನಮಗೆ ಸಂಬಂಧಪಟ್ಟವರು.. ಹೆಂಡತಿ, ಮಕ್ಕಳು, ಸ್ನೇಹಿತರು, ಬಾಸ್. ಇವರ ಜತೆ ಅವರವರ ಸೈಕಾಲಜಿಗಳನ್ನು ಅರ್ಥ ಮಾಡಿಕೊಳ್ಳಬೇಕು. 2ನೆಯ ರೆಕ್ಕೆ ಟೆಕ್ನಾಲಜಿ. ಅಂದರೆ ನಿಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಟೆಕ್ನಾಲಜಿಕಲ್ ಬೆಳವಣಿಗೆಗಳು ಯಾವುವು, ಅವುಗಳನ್ನು ಎಷ್ಟು ಬೇಗ ಅರ್ಥ ಮಾಡಿಕೊಳ್ಳುತ್ತೀರಿ ಎಂಬುದು ಮುಖ್ಯ. ನಿಮ್ಮ ಕ್ಷೇತ್ರದ ತಾಂತ್ರಿಕ ಆವಿಷ್ಕಾರ ಏನೇನು ಎಂಬುದನ್ನು ಬೇಗ ಗ್ರಹಿಸಿಕೊಂಡು ಅರ್ಥಪೂರ್ಣವಾಗಿ ನಿಮ್ಮ ಕೆಲಸಗಳಲ್ಲಿ ಅಳವಡಿಸಿಕೊಂಡು ಯಶಸ್ಸು ಪಡೆಯಿರಿ.

| ರಮೇಶ್ ಅರವಿಂದ್ ನಟ-ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net