ಜೀ ಕನ್ನಡದಲ್ಲಿ ‘ನಾವು ನಮ್ಮವರು’ ಹೊಸ ರಿಯಾಲಿಟಿ ಶೋ: ಕಿರುತೆರೆಯಲ್ಲಿ ರಂಜಿಸಲಿದ್ದಾರೆ ತಾರಾ, ಶರಣ್, ಅಮೂಲ್ಯ

zee
Published on

ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಧಾರಾವಾಹಿ, ರಿಯಾಲಿಟಿ ಹಾಗೂ ಗೇಮ್ ಶೋಗಳ ಮೂಲಕ ಜೀ ಕನ್ನಡ ವಾಹಿನಿಯು ಪ್ರೇಕ್ಷಕರ ಮನಗೆದ್ದಿದೆ. ‘ವೀಕೆಂಡ್ ವಿತ್ ರಮೇಶ್’, ‘ಡ್ರಾಮಾ ಜೂನಿಯರ್ಸ್’ ‘ಸರಿಗಮಪ’, ‘ಕಾಮಿಡಿ ಕಿಲಾಡಿಗಳು’ ‘ಡಾನ್ಸ್ ಕರ್ನಾಟಕ ಡಾನ್ಸ್’ ಸೇರಿ ಹಲವು ರಿಯಾಲಿಟಿ ಶೋ ಮೂಲಕ ಫ್ಯಾಮಿಲಿ ಆಡಿಯನ್ಸ್ ಹಿಡಿದಿಟ್ಟುಕೊಳ್ಳುವಲ್ಲಿ ವಾಹಿನಿ ಯಶಸ್ವಿಯಾಗಿದೆ. ಇದೀಗ ಮತ್ತೊಂದು ಹೊಸ ಫ್ಯಾಮಿಲಿ ರಿಯಾಲಿಟಿ ಶೋ ಪರಿಚಯಿಸುವ ಮೂಲಕ ಮತ್ತಷ್ಟು ಹತ್ತಿರವಾಗಲು ‘ಜೀ ಕನ್ನಡ’ ಮುಂದಾಗುತ್ತಿದೆ. ಇದೇ ಆಗಸ್ಟ್ 2ರಿಂದ ‘ಜೀ ಕನ್ನಡ’ದಲ್ಲಿ ‘ನಾವು ನಮ್ಮವರು’ ಎಂಬ ಹೊಸ ಫ್ಯಾಮಿಲಿ ರಿಯಾಲಿಟಿ ಶೋ ಆರಂಭವಾಗುತ್ತಿದೆ. ಸೆಲೆಬ್ರಿಟಿಗಳು ತಮ್ಮ ಕುಟುಂಬದವರ ಜತೆ ಹೇಗೆ ಇರುತ್ತಾರೆ ಎಂಬುದನ್ನು ತಿಳಿಯಪಡಿಸುವುದೇ ಈ ಶೋನ ಉದ್ದೇಶ. ಸಖತ್ ನ್ ಜತೆಗೆ ಟ್ವಿಸ್ಟ್-ಟರ್ನ್‌ನೊಂದಿಗೆ ಮನರಂಜನೆ ಇರಲಿದೆ. ನಿರಂಜನ್ ದೇಶಪಾಂಡೆ ಈ ಶೋನ ನಿರೂಪಣೆ ಮಾಡಲಿದ್ದು, ನಟ ಶರಣ್, ನಟಿಯರಾದ ತಾರಾ ಅನುರಾಧಾ ಹಾಗೂ ಅಮೂಲ್ಯ ತೀರ್ಪುಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಈಗಾಗಲೇ ಕಿರುತೆರೆ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿರುವ ಜೋಡಿಗಳಾದ ರಜತ್-ಅಕ್ಷತಾ, ಸುಜಯ್-ಸಿಂಚನಾ, ಪ್ರಿಯಾ ಕೇಸರಿ-ಶಿವರಾಂ, ಅಲ್ಲು ರಘು-ಸುಶ್ಮಿತಾ, ಮಲ್ಲಯ್ಯ-ನೀಲಮ್ಮ, ಮೋಹನ್ ಕುಮಾರ್-ಪಲ್ಲವಿ, ವಿಶಾಲ್ ಹೆಗ್ಡೆ-ಪ್ರಿಯಾ, ಶಿಲ್ಪಿ-ಶೈಲೇಶ್, ಸಮೀರ್ ಆಚಾರ್ಯ-ಶ್ರಾವಣಿ ಇವರು ಕುಟುಂಬದ ಜತೆ ಸೇರಿ ಸ್ಪರ್ಧಿಸಲಿದ್ದಾರೆ. ಸಂಬಂಧಗಳ ಬೇರನ್ನು ಗಟ್ಟಿ ಮಾಡುವ ಈ ‘ನಾವು ನಮ್ಮವರು’ ರಿಯಾಲಿಟಿ ಶೋ ಇದೇ ಆಗಸ್ಟ್ 2ರಿಂದ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9ಗಂಟೆಗೆ ‘ಜೀ ಕನ್ನಡ’ದಲ್ಲಿ ಪ್ರಸಾರವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net