

ಬೆಂಗಳೂರು: ಸ್ಯಾಂಡಲ್ವುಡ್ನ ಅದ್ದೂರಿ ನಿರ್ವಣ-ತಾರಾಗಣ ಮತ್ತು ಬಹುನಿರೀಕ್ಷಿತ ಸಿನಿಮಾಗಳ ಅಭಿಮಾನಿಗಳ ಪಾಲಿಗೆ ಈ ಸಂಕ್ರಾಂತಿ ಒಂಥರ ಪೋಸ್ಟರ್ ಸಂಕ್ರಾಂತಿ. ಏಕೆಂದರೆ
ಈಗಾಗಲೇ ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳ ಕುತೂಹಲ ತಣಿಸಲು ಸಂಕ್ರಾಂತಿ ಸಂದರ್ಭ ಪೋಸ್ಟರ್- ಮೋಷನ್ ಪೋಸ್ಟರ್ ಬಿಡುಗಡೆ ಮಾಡಲು ‘ಕೋಟಿಗೊಬ್ಬ 3’, ‘ಭಜರಂಗಿ 2’, ‘ರಾಬರ್ಟ್’ ಚಿತ್ರತಂಡಗಳು ಸಜ್ಜಾಗಿವೆ.
ಕೋಟಿಗೊಬ್ಬ 3
‘ರಾಮ್ ಬಾಬು ಪ್ರೊಡಕ್ಷನ್ಸ್’ ಬ್ಯಾನರ್ನಲ್ಲಿ, ಸೂರಪ್ಪ ಬಾಬು ನಿರ್ವಣ, ಶಿವಕಾರ್ತಿಕ್ ನಿರ್ದೇಶನ ಹಾಗೂ ಕಿಚ್ಚ ಸುದೀಪ್ ಅಭಿನಯದಲ್ಲಿ ಮೂಡಿ ಬರುತ್ತಿರುವ ‘ಕೋಟಿಗೊಬ್ಬ 3’ ಸಿನಿಮಾದ ಮೋಷನ್ ಪೋಸ್ಟರ್ ಜ. 14ರ ಸಂಜೆ 6ಕ್ಕೆ ‘ಆನಂದ್ ಆಡಿಯೋ’ದ ಯೂ-ಟ್ಯೂಬ್ನಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿದ್ದು, ಒಂದೇ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದೆ. ಸದ್ಯ ಚಿತ್ರದ ಡಬ್ಬಿಂಗ್ ಹಾಗೂ ಕಂಪ್ಯೂಟರ್ ಗ್ರಾಫಿಕ್ಸ್ ಕೆಲಸಗಳು ನಡೆಯುತ್ತಿವೆ. ‘ಚಿತ್ರದ ರಿಲೀಸ್ ಬಗ್ಗೆ ನಾವು ಈಗಲೇ ಏನನ್ನೂ ಹೇಳುವುದಿಲ್ಲ. ತರಾತುರಿಯಲ್ಲಿ ನಮ್ಮ ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿದರೆ ಇತರ ಸಿನಿಮಾಗಳ ರಿಲೀಸ್ಗೆ
ಗೊಂದಲವಾಗಿ ತೊಂದರೆ ಆಗಬಹುದು. ಹೀಗಾಗಿ ಎಲ್ಲ ಸಿದ್ಧತೆ ಮುಗಿಸಿಕೊಂಡು ಶಿವರಾತ್ರಿ ಹಬ್ಬದಂದು ಬಿಡುಗಡೆ ದಿನಾಂಕ ಘೋಷಿಸುತ್ತೇವೆ’ ಎನ್ನುತ್ತಾರೆ ನಿರ್ವಪಕ ಸೂರಪ್ಪ ಬಾಬು. ಈ ಚಿತ್ರದಲ್ಲಿ ಸುದೀಪ್ ಜತೆ ಮಡೊನ್ನ ಸೆಬಾಸ್ಟಿಯನ್, ಶ್ರದ್ಧಾ ದಾಸ್, ಪಿ. ರವಿಶಂಕರ್, ಅಫ್ತಾಬ್ ಶಿವದಾಸಾನಿ, ನವಾಬ್ ಷಾ ಮುಂತಾದವರು ಅಭಿನಯಿಸಿದ್ದಾರೆ.
ರಾಬರ್ಟ್ ಸೆಕೆಂಡ್ ಲುಕ್
ಹೊಸ ವರ್ಷದಂದು ಫಸ್ಟ್ ಲುಕ್ ಬಿಟ್ಟು ಕುತೂಹಲ ಹೆಚ್ಚಿಸಿದ್ದ ‘ರಾಬರ್ಟ್’ ಚಿತ್ರದ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಈಗ ಸಂಕ್ರಾಂತಿಗೆ ಸೆಕೆಂಡ್ ಲುಕ್ ಮೋಷನ್ ಪೋಸ್ಟರ್ ಬಿಡಲು ಮುಂದಾಗಿ ದ್ದಾರೆ. ಉಮಾಪತಿ ಶ್ರೀನಿವಾಸ್ ಗೌಡ ನಿರ್ವಣ, ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅಭಿನಯದಲ್ಲಿ ಮೂಡಿಬರುತ್ತಿರುವ ‘ರಾಬರ್ಟ್’ ಸಿನಿಮಾದ ಸೆಕೆಂಡ್ ಲುಕ್ ಮೋಷನ್ ಪೋಸ್ಟರ್ ಜ. 15ರಂದು ಬಿಡುಗಡೆ ಆಗಲಿದೆ. ದರ್ಶನ್ ಜತೆ ಆಶಾ ಭಟ್, ಸೋನಲ್ ಮೊಂತೆರೊ, ಜಗಪತಿ ಬಾಬು, ವಿನೋದ್ ಪ್ರಭಾಕರ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ‘ಉಮಾಪತಿ ಫಿಲಮ್್ಸ’ ಬ್ಯಾನರ್ನಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾ ಏ. 9ಕ್ಕೆ ತೆರೆ ಕಾಣಲಿದೆ ಎನ್ನಲಾಗುತ್ತಿದೆ.
ದೃಶ್ಯದಲ್ಲೇ ಭಜರಂಗಿ 2 ಪೋಸ್ಟರ್
‘ಸೆಂಚುರಿ ಸ್ಟಾರ್’ ಶಿವರಾಜ್ಕುಮಾರ್ ಅಭಿನಯದ ‘ಭಜರಂಗಿ 2’ ಚಿತ್ರದಲ್ಲಿನ ಅವರ ಲುಕ್ ಇದುವರೆಗೂ ಎಲ್ಲಿಯೂ ಬಿಡುಗಡೆ ಆಗದ್ದರಿಂದ ಈ ಚಿತ್ರದ ಪೋಸ್ಟರ್ ಬಿಡುಗಡೆ ಕುತೂಹಲ ಹೆಚ್ಚಿಸಿದೆ. ‘ಜ. 14ರ ಸಂಜೆ 5ಕ್ಕೆ ಪೋಸ್ಟರ್ ಬಿಡುಗಡೆ ಆಗಲಿದೆ. ಚಿತ್ರದ ಒಂದು ದೃಶ್ಯವನ್ನೇ ಆಧಾರವಾಗಿಟ್ಟುಕೊಂಡು ವಿಶೇಷವಾದ ಪೋಸ್ಟರ್ ರೂಪಿಸಲಾಗಿದೆ.
ಪಾತ್ರಧಾರಿಗಳು ಕಂಡರೂ ಕಾಣದಂತೆ ಈ ಪೋಸ್ಟರ್ ರಚಿಸಲಾಗಿದೆ’ ಎನ್ನುವ ಮೂಲಕ ನಿರ್ದೇಶಕ ಎ.ಹರ್ಷ ಚಿತ್ರದ ಕುರಿತ ಕುತೂಹಲ ಕೆರಳಿಸಿದ್ದಾರೆ. ‘ಪೋಸ್ಟರ್ ರಿಲೀಸ್ ಮಾಡಿದ ವಾರದ ಬಳಿಕ ಶಿವಣ್ಣ ಸೇರಿ ಚಿತ್ರದ 7 ಪ್ರಮುಖ ಪಾತ್ರಗಳ ಫಸ್ಟ್ ಲುಕ್ ಒಂದೊಂದು ವಾರದ ಅಂತರದಲ್ಲಿ ಒಂದೊಂದಾಗಿ ಬಿಡಲಾಗುವುದು’ ಎಂದು ಅವರು ಹೇಳಿದ್ದಾರೆ. ‘ಜಯಣ್ಣ ಫಿಲಮ್್ಸ’ ಬ್ಯಾನರ್ನಲ್ಲಿ ಜಯಣ್ಣ-ಭೋಗೇಂದ್ರ ನಿರ್ವಣದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ಶಿವರಾಜ್ಕುಮಾರ್ಗೆ ಜೋಡಿಯಾಗಿ ಭಾವನಾ ನಟಿಸಿದ್ದಾರೆ.