ಹೊಸಬರ 'ಅಲೆಗಳಿಲ್ಲದ ಸಾಗರ'; ನಿರ್ದೇಶಕ ಸಾಗರ್​

Sagara
Published on

ಬೆಂಗಳೂರು: ಸಿನಿಮಾ ಕನಸು ಹೊತ್ತು ಹೊಸ ಹೊಸ ಪ್ರತಿಭೆಗಳು ಚಿತ್ರರಂಗಕ್ಕೆ ಬರುತ್ತಿರುತ್ತಾರೆ. ಹಾಗೆ ಹೊಸಬರೇ ಸೇರಿಕೊಂಡು ‘ಅಲೆಗಳಿಲ್ಲದ ಸಾಗರ’ ಎಂಬ ಚಿತ್ರ ಮಾಡುತ್ತಿದ್ದು, ಇತ್ತೀಚೆಗಷ್ಟೆ ಈ ಸಿನಿಮಾ ಸೆಟ್ಟೇರಿದೆ. ಚಿತ್ರವನ್ನು ಕನ್ನಡದ ಜತೆ ಹಿಂದಿ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಬಿಡುಗಡೆ ಮಾಡುವ ಆಲೋಚನೆ ಇದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಸಾಗರ್ ನಿರ್ದೇಶಿಸುತ್ತಿದ್ದಾರೆ.

ಜತೆಗೆ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಗಂಡ ಹೆಂಡತಿ ನಡುವಿನ ಬಾಂಧವ್ಯ ಹಾಗೂ ಸಮಾಜದಲ್ಲಿ ನಡೆಯುತ್ತಿರುವ ಕೆಲವು ನೈಜ ಘಟನೆಗಳನ್ನು ಹೆಕ್ಕಿ ಕಥೆ ಮಾಡಿಕೊಂಡಿದ್ದಾರೆ ನಿರ್ದೇಶಕ ಸಾಗರ್. ಮೋಹನ್ ನಾಯಕನಾಗಿ ಚಿತ್ರರಂಗಕ್ಕೆ ಡೆಬ್ಯೂ ಮಾಡುತ್ತಿದ್ದು, ನಾಯಕಿಯರಾಗಿ ಅಶ್ವಿನಿ ಶೆಟ್ಟಿ, ಶಾನ್ವಿ ಗೌಡಗೂ ಇದು ಚೊಚ್ಚಲ ಪ್ರಯತ್ನ. ಉಳಿದಂತೆ ರಂಗಯಾದವ್ ಮಂಡ್ಯ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಐದು ಜನರ ಸುತ್ತ ಚಿತ್ರದ ಕಥೆ ಸುತ್ತುತ್ತದೆ. ಚಿತ್ರಕ್ಕೆ ಸಂಜೀವ್ ರಾವ್ ಸಾಹಿತ್ಯ, ರಾಘು ಎ. ರೂಗಿ ಸಂಗೀತ, ನವೀನ್ ಸಂಕಲನ, ಸ್ಟಾರ್ ನಾಗಿ ನೃತ್ಯ ಸಂಯೋಜನೆ, ಅಶೋಕ್ ಸಾಹಸ ನಿರ್ದೇಶನವಿದೆ. ಸಾಗರ್ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕರುಣಾಕರ್ ರಾವಣ್ ಮತ್ತು ನಿರಂಜನಮೂರ್ತಿ ಜಂಟಿಯಾಗಿ ಈ ಚಿತ್ರವನ್ನು ನಿರ್ವಿುಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net