ರೈತನಿಂದ ರೈತರಿಗಾಗಿ ಆದರ್ಶ ರೈತ; ಡಾ. ಅಮರನಾಥ್‌ಗೆ ಸೂಫಿಯಾ, ಖುಷಿ ನಾಯಕಿಯರು

adarsha raita
Published on

ಬೆಂಗಳೂರು: ರೈತರ ಕುರಿತ ಹಲವು ಸಿನಿಮಾಗಳು ಬಂದಿವೆ. ಆದರೆ, ರೈತ ಯಶಸ್ವಿಯಾಗಲು ಏನು ಮಾಡಬೇಕು? ಏನು ಮಾಡಬಾರದು? ಎಂದು ಹೇಳುವ ಕಥೆಯೊಂದು ಇದೀಗ ತೆರೆಗೆ ಬರಲು ರೆಡಿಯಾಗಿದೆ. ಹೆಸರು ‘ಆದರ್ಶ ರೈತ’.

ಇತ್ತೀಚೆಗಷ್ಟೆ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಯಿತು. ಡಾ. ಅಮರನಾಥ್ ರೆಡ್ಡಿ ನಾಯಕನಾಗಿದ್ದು, ‘ನಾನು ಕೃಷಿಕ ಕುಟುಂಬಕ್ಕೆ ಸೇರಿದವನು. ಕೃಷಿ ಮಾಡಿಕೊಂಡೇ ಅಪ್ಪ ನಮ್ಮನ್ನು ವಿದ್ಯಾವಂತರನ್ನಾಗಿ ಮಾಡಿದ್ದಾರೆ. ಮೊದಲಿಂದಲೂ ರೈತರ ಕುರಿತ ಸಿನಿಮಾ ಮಾಡುವಾಸೆ ಇತ್ತು. ಈ ಕಥೆ ಇಷ್ಟವಾದ ಕಾರಣ ನಟಿಸಿ, ನಿರ್ಮಿಸಿದ್ದೇನೆ’ ಎಂದು ಹೇಳಿಕೊಂಡರು. ತೆಲುಗು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕ, ನೃತ್ಯ ನಿರ್ದೇಶಕರಾಗಿ ಅನುಭವ ಪಡೆದಿರುವ ನಿರ್ದೇಶಕ ರಾಜೇಂದ್ರ ಕೊಣಿದೆಲಗೆ ಇದು ಮೊದಲ ಪ್ರಯತ್ನ. ‘ಒಬ್ಬ ರೈತ ಆದರ್ಶ ರೈತ ಹೇಗೆ ಆಗಬಲ್ಲ ಎಂಬುದೇ ಚಿತ್ರದ ಕಥಾಹಂದರ. ಸರ್ಕಾರ ನೀಡುವ ಸವಲತ್ತುಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಹಲವು ಉಪಯುಕ್ತ ಮಾಹಿತಿ ನೀಡಿದ್ದೇವೆ’ ಎಂದರು.

ಚಿತ್ರದಲ್ಲಿ ಅಮರನಾಥ್‌ಗೆ ಸೂಫಿಯಾ ಮತ್ತು ಖುಷಿ ಇಬ್ಬರು ನಾಯಕಿಯರು. ಉಳಿದಂತೆ ರೇಖಾ ದಾಸ್, ಸಿದ್ದಾರ್ಥ್, ಮೈಸೂರು ಸುಜಾತಾ, ಸಂಗೀತ ತಾರಾಗಣದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net