

ಅಶ್ವಿನಿ ರಾಮ್ ಪ್ರಸಾದ್ ಪುತ್ರನ ಚಿತ್ರದ ಪೋಸ್ಟರ್ ರಿಲೀಸ್ ‘ಘಾರ್ಗಾ..’ - ಹೀಗೆಂದರೇನು ಎಂದು ಅರ್ಥ ಕೇಳಿದರೆ ಹೇಳುವುದೇ ಕಷ್ಟ. ಏಕೆಂದರೆ ಇದು ನಿಘಂಟಿನಲ್ಲಿರದ ಪದ.
ಹೌದು.. ನಿಘಂಟಿನಲ್ಲಿರದ ಪದವನ್ನೇ ಟೈಟಲ್ ಮಾಡಿಕೊಂಡು ಸಿನಿಮಾ ಮಾಡಿದೆ ಈ ಚಿತ್ರತಂಡ. ‘ಈ ಸಿನಿಮಾದ ಹೆಸರು ನಿಘಂಟಿನಲ್ಲಿ ಸಿಗುವುದಿಲ್ಲ. ಶೀಷಿಕೆಯ ಅರ್ಥ ತಿಳಿದುಕೊಳ್ಳಬೇಕೆಂದರೆ ಚಿತ್ರವನ್ನು ನೋಡಲೇಬೇಕು’ ಎನ್ನುತ್ತಾರೆ ನಿರ್ದೇಶಕ ಎಂ. ಶಶಿಧರ್.
‘ಜೋಗಿ’ ಖ್ಯಾತಿಯ ನಿಮಾಪಕ, ‘ಅಶ್ವಿನಿ ರೆಕಾರ್ಡಿಂಗ್ ಕಂಪನಿ’ಯ ರೂವಾರಿ ಅಶ್ವಿನಿ ರಾಮ್್ರಸಾದ್ ಅವರ ಪುತ್ರ ಅರುಣ್ ರಾಮ್್ರಸಾದ್ ನಾಯಕನಾಗಿ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿರುವ ಈ ಚಿತ್ರದ ಪೋಸ್ಟರ್ ಬಿಡುಗಡೆ ಇತ್ತೀಚೆಗಷ್ಟೇ ಅದ್ದೂರಿಯಾಗಿ ನೆರವೇರಿತು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಶಶಿಧರ್, ‘ನಿರ್ವಪಕರ ಸಲಹೆಯಂತೆ ಕಥೆಯಲ್ಲಿ ಕೆಲವು ಬದಲಾವಣೆ ಮಾಡಿಕೊಂಡು ಈ ಸಿನಿಮಾ ಪೂರ್ಣಗೊಂಡಿದ್ದು, ಬಿಡುಗಡೆ ಹಂತಕ್ಕೆ ಬಂದಿದೆ. ಸಿನಿಮಾ ನಿರ್ವಣದಲ್ಲಿ ಎಲ್ಲಿಯೂ ರಾಜಿಯಾಗಿಲ್ಲ. ಸಾಹಸ ದೃಶ್ಯಗಳಿಗೆಂದೇ 5 ಕ್ಯಾಮರಾಗಳನ್ನು ಬಳಸಲಾಗಿದೆ’ ಎಂದರು.
‘ವಿಷಯ, ಗುಣಮಟ್ಟ ಚೆನ್ನಾಗಿದ್ದರೆ ಜನರು ಖಂಡಿತ ಬಂದು ಸಿನಿಮಾ ವೀಕ್ಷಿಸುತ್ತಾರೆ. ಹೊಸ ವಿಷಯವನ್ನು ವಿಭಿನ್ನವಾಗಿ ನಿರೂಪಣೆ ಮಾಡುವ ಮೂಲಕ ಈ ಸಿನಿಮಾ ಮಾಡಿದ್ದೇವೆ. ನನಗೆ ಸಿಕ್ಕ ಪ್ರೋತ್ಸಾಹ ಪುತ್ರನಿಗೂ ಸಿಗಲಿ’ ಎಂದು ನಿರ್ವಪಕ ಅಶ್ವಿನಿ ರಾಮ್್ರಸಾದ್ ಆಶಿಸಿದರು.
ಈ ಚಿತ್ರಕ್ಕಾಗಿ ನಾಯಕ ಅರುಣ್ ರಾಮ್್ರಸಾದ್ ನೀನಾಸಂ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದಾರೆ. ಮಾತ್ರವಲ್ಲದೆ ಕಳರಿಪಯಟ್ಟು ಕಲೆಯನ್ನೂ ಕಲಿತಿದ್ದಾರೆ. ಅರುಣ್ಗೆ ಜೋಡಿಯಾಗಿ ಬೆಂಗಳೂರು ಬೆಡಗಿ ರಾಘವಿ ಗೌಡ ನಾಯಕಿ ಆಗಿ ಅಭಿನಯಿಸಿದ್ದಾರೆ. ಮೊದಲ ಸಿನಿಮಾದಲ್ಲೇ ಅವರು ಚಿತ್ರದುದ್ದಕ್ಕೂ ಮೂಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಪಕ್ಕಾ ಸಸ್ಪೆನ್ಸ್ ಮಾದರಿಯ ಈ ಚಿತ್ರದಲ್ಲಿ ಅವರದ್ದು ಮಕ್ಕಳಿಗೆ ಭರತನಾಟ್ಯ ಕಲಿಸುವ ಹಳ್ಳಿ ಹುಡುಗಿಯ ಪಾತ್ರ.
‘ಮಗಧೀರ’ ಖ್ಯಾತಿಯ ದೇವ್ಗಿಲ್ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಸಾಯಿಕುಮಾರ್, ಅರುಣ್ ಸಾಗರ್, ರಾಹುಲ್ ದೇವ್, ರಾಘವೇಂದ್ರ ಸರವಣ, ಅವಿನಾಶ್ ರೈ ಮುಂತಾದವರು ಇತರ ಪಾತ್ರವರ್ಗದಲ್ಲಿ ಅಭಿನಯಿಸಿದ್ದಾರೆ. ಡಾ. ನಾಗೇಂದ್ರಪ್ರಸಾದ್ ಸಾಹಿತ್ಯದ 5 ಹಾಡುಗಳಿಗೆ ಗುರುಕಿರಣ್ ಸಂಗೀತ ಸಂಯೋಜಿಸಿದ್ದಾರೆ. ಗುರುಪ್ರಸಾದ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನವಿದೆ. ವಸಿಷ್ಠ ಸಿಂಹ, ಎ.ಪಿ. ಅರ್ಜುನ್, ಲಹರಿ ಸಂಸ್ಥೆಯ ಮನೋಹರ್ ನಾಯ್ಡು ಮುಂತಾದವರು ಉಪಸ್ಥಿತರಿದ್ದು ಶುಭಕೋರಿದರು.