

ಬೆಂಗಳೂರು: ಈ ಸಿನಿಮಾದಲ್ಲಿ ಮದರ್ ಸೆಂಟಿಮೆಂಟ್ ಇದೆ, ಲವ್ ಎಲಿಮೆಂಟ್ ಇದೆ, ಒಳ್ಳೆಯ ಕಂಟೆಂಟ್ ಇದೆ.. ಎಂದು ಸಿನಿಮಾ ತಂಡದವರು ನಾನಾ ರೀತಿಯಲ್ಲಿ ಪ್ರೇಕ್ಷಕರಿಗೆ ಭರವಸೆ ಕೊಡುವುದು ಸರ್ವೆಸಾಮಾನ್ಯ. ಆದರೆ ಇಲ್ಲೊಂದು ಚಿತ್ರತಂಡ ಒಂದು ಹೆಜ್ಜೆ ಮುಂದೆ ಹೋಗಿ, ಈ ಸಿನಿಮಾ ನೋಡಿದವರಿಗೆ ಬರೋಬ್ಬರಿ ಒಂದು ಕೋಟಿ ರೂಪಾಯಿಯ ಗಿಫ್ಟ್ ಇದೆ ಎಂದು ಭರವಸೆ ನೀಡಿದೆ! ಅಂದಹಾಗೆ, ಇಂಥದ್ದೊಂದು ಭರವಸೆ ನೀಡಿರುವುದು ಬೇರಾರೂ ಅಲ್ಲ, ‘ಶ್ರೀಭರತ ಬಾಹುಬಲಿ’. ಅಂದರೆ ‘ಶ್ರೀಭರತ ಬಾಹುಬಲಿ’ ಚಿತ್ರತಂಡ ತಮ್ಮ ಸಿನಿಮಾ ನೋಡಿದ ಪ್ರೇಕ್ಷಕರಿಗೆ ಭರ್ಜರಿ ಬಹುಮಾನ ಕೊಡುವುದಾಗಿ ಹೇಳಿಕೊಂಡಿದೆ.
‘ಈ ಸಿನಿಮಾ ನೋಡುವ ಪ್ರೇಕ್ಷಕರಿಗೆ ಹತ್ತು ಕಾರು ಹಾಗೂ ಚಿನ್ನದ ಹತ್ತು ಒಡವೆಗಳನ್ನು ನೀಡಲಾಗುವುದು. ಮೊದಲ ಎರಡು ವಾರ ಚಿತ್ರ ವೀಕ್ಷಿಸಲು ಬರುವವರಿಗೆ ಒಂದು ಕೂಪನ್ ಕೊಡುತ್ತೇವೆ. 14ನೇ ದಿನದ ಬಳಿಕ ಲಕ್ಕಿಡಿಪ್ ಮೂಲಕ 20 ಪ್ರೇಕ್ಷಕರನ್ನು ಆರಿಸಿ ಅವರಿಗೆ ಇವುಗಳನ್ನು ಬಹುಮಾನವಾಗಿ ನೀಡಲಾಗುವುದು. ಈ ಇಪ್ಪತ್ತು ಬಹುಮಾನಗಳ ಒಟ್ಟು ಮೊತ್ತ ಒಂದು ಕೋಟಿ ರೂ. ಆಗಿರುತ್ತದೆ’ ಎಂದು ಚಿತ್ರದ ನಿರ್ವಪಕ ಶಿವಪ್ರಕಾಶ್ ಹೇಳಿದ್ದಾರೆ. ಮಹಿಳೆಯರು ಕೂಡ ಚಿತ್ರಮಂದಿರಗಳತ್ತ ಬರಲಿ, ತಮ್ಮ ಕುಟುಂಬವನ್ನೂ ಕರೆ ತರಲಿ ಎಂಬ ಕಾರಣಕ್ಕೆ ಹತ್ತು ಆಭರಣಗಳನ್ನು ಬಹುಮಾನವಾಗಿ ಇಟ್ಟಿದ್ದೇವೆ ಎಂದೂ ತಿಳಿಸಿದ್ದಾರೆ. ಐಶ್ವರ್ಯಾ ಫಿಲಮ್್ಸ ಪೊ›ಡಕ್ಷನ್ಸ್ ಬ್ಯಾನರ್ನಲ್ಲಿ ಶಿವಪ್ರಕಾಶ್ ನಿರ್ವಿುಸಿರುವ ಈ ಚೊಚ್ಚಲ ಸಿನಿಮಾಗೆ ಮಂಜು ಮಾಂಡವ್ಯ ನಿರ್ದೇಶನ ಮಾಡುವ ಮೂಲಕ ನಾಯಕನಾಗಿಯೂ ಅಭಿನಯಿಸಿದ್ದಾರೆ. ಭರತನಾಗಿ ಮಂಜು ಹಾಗೂ ಬಾಹುಬಲಿಯಾಗಿ ಚಿಕ್ಕಣ್ಣ ನಟಿಸಿದ್ದಾರೆ. ನಾಯಕಿಯರಾಗಿ ರೂಪದರ್ಶಿ ಸಾರಾ ಹರೀಶ್, ಸಾಫ್ಟ್ವೇರ್ ಕಂಪನಿಯ ಉದ್ಯೋಗಿ ಶ್ರೇಯಾ ಶೆಟ್ಟಿ ಅಭಿನಯಿಸಿದ್ದಾರೆ. ಚಿತ್ರ ಇದೇ ಜ.17ರಂದು ಬಿಡುಗಡೆ ಆಗಲಿದೆ.
ಆರಂಭದ ಎರಡು ವಾರ ಸಿನಿಮಾ ನೋಡುವ ಪ್ರೇಕ್ಷಕರಲ್ಲಿ 20 ಜನರನ್ನು ಲಕ್ಕಿಡಿಪ್ ಮೂಲಕ ಆರಿಸಿ, ಒಟ್ಟು 1 ಕೋಟಿ ರೂ. ಮೌಲ್ಯದ ಬಹುಮಾನ ನೀಡಲಾಗುವುದು. ಇತ್ತೀಚೆಗೆ ಜನರನ್ನು ಚಿತ್ರಮಂದಿರದತ್ತ ಸೆಳೆಯುವುದೇ ಸವಾಲಾಗಿದೆ. ಹೀಗಾಗಿ ಆ ನಿಟ್ಟಿನಲ್ಲಿ ಈ ವಿನೂತನ ಪ್ರಯೋಗ ಮಾಡಲಾಗುತ್ತಿದೆ. | ಶಿವಪ್ರಕಾಶ್ ನಿರ್ಮಾಪಕ