ನಟಿ ರಜಿನಿ ಚಾಂಡಿ ಸೆಕ್ಸಿ ಫೋಟೋಶೂಟ್​ @69; ಈ ವಯಸಲ್ಲಿ ಇದೆಲ್ಲ ಬೇಕಿತ್ತಾ? ಎಂದು ಟ್ರೋಲ್​ ಮಾಡಿದ ನೆಟ್ಟಿಗರು

RC F
Published on

ಬೆಂಗಳೂರು: ಸಾಮಾನ್ಯವಾಗಿ ಸಿನಿಮಾ ನಟ-ನಟಿಯರು ತಮ್ಮ ಫೋಟೋಗಳನ್ನು ಹಾಕಿಕೊಂಡಾಗ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತದೆ. ಕೆಲವೊಮ್ಮೆ ಟೀಕೆಗಳು ಬಂದರೂ ಅವುಗಳ ಪ್ರಮಾಣ ಕಡಿಮೆ ಇರುತ್ತದೆ. ಹಾಗೆಯೇ ನಟಿಯೊಬ್ಬರು ತಮ್ಮ ಫೋಟೋಶೂಟ್​ ಚಿತ್ರಗಳನ್ನು ಪೋಸ್ಟ್ ಮಾಡಿಕೊಂಡಿದ್ದಕ್ಕೆ ಟ್ರೋಲ್​ಗೆ ಒಳಗಾಗಿದ್ದಾರೆ.

ಬಿಗ್​ಬಾಸ್​ ಸ್ಪರ್ಧಿಯೂ ಆಗಿದ್ದ ಈ ನಟಿ, ತಮ್ಮ 69ನೇ ವಯಸ್ಸಿನಲ್ಲಿ ಹೀಗೊಂದು ಫೋಟೋಶೂಟ್​ ಮಾಡಿಸಿ ಫೋಟೋ ಹಾಕಿಕೊಂಡಿದ್ದಕ್ಕೆ ಟ್ರೋಲ್​ ಆಗಿದ್ದಾರೆ. ಕೇರಳ ಮೂಲದ ಫೋಟೋಗ್ರಾಫರ್ ಅತಿರಾ ಜಾಯ್​ ಅವರಿಂದ ಫೋಟೋಶೂಟ್ ಮಾಡಿಸಿಕೊಂಡಿದ್ದ ರಜಿನಿ, ಅವುಗಳಲ್ಲಿ ಕೆಲವು ಫೋಟೋಗಳನ್ನು ಇತ್ತೀಚೆಗೆ ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದರು.

ಈ ಫೋಟೋಗಳಿಗೆ ಒಂದಷ್ಟು ಮೆಚ್ಚುಗೆಯ ಕಮೆಂಟ್​ಗಳು ಬಂದಿದ್ದರೂ, ಅವರು ಯುವತಿಯಂತೆ ಉಡುಪು ತೊಟ್ಟು ತೆಗೆಸಿಕೊಂಡಿರುವ ಫೋಟೋಗಳಿಗೆ ಹಲವರು ಕೆಟ್ಟದಾಗಿ ಕಮೆಂಟ್ ಮಾಡಿ ಟ್ರೋಲ್​ ಮಾಡಿದ್ದರು. ನಾನು ಫೋಟೋಶೂಟ್​ ಮಾಡಿದಕ್ಕೆ ಕೆಲವರು ನೀತಿಗೆಟ್ಟವಳು ಎಂದು ಜರಿದಿದ್ದಾರೆ. ಇನ್ನು ಕೆಲವರು ಮನೆಯಲ್ಲಿ ಕೂತು ಸುಮ್ಮನೆ ಬೈಬಲ್ ಓದಿ. ಇದು ದೇವರನ್ನು ಪ್ರಾರ್ಥಿಸುವ ವಯಸ್ಸು, ನಿಮ್ಮ ದೇಹವನ್ನು ತೋರಿಸುವ ವಯಸ್ಸಲ್ಲ ಎಂದಿದ್ದರೆ, ಇನ್ನು ಕೆಲವರು ಹಳೇ ಆಟೋಗೆ ಹೋಲಿಸಿದ್ದು, ಎಷ್ಟು ಅಲಂಕರಿಸಿದರೂ ಅದು ಹಳೇದೇ ಎಂದು ಜರಿದಿದ್ದಾರೆ ಎಂಬುದಾಗಿ ರಜಿನಿ ಹೇಳಿಕೊಂಡಿದ್ದಾರೆ. ಕೆಲವರು ತಮ್ಮ ಮೇಲಿನ ಹೊಟ್ಟೆಯುರಿಗೆ ಹೀಗೆಲ್ಲ ಹೇಳಿದ್ದಾರೆ ಎಂಬುದಾಗಿಯೂ ರಜಿನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾವ ವಯಸ್ಸಲ್ಲಿ ಬೇಕಿದ್ದರೂ ಬದುಕನ್ನು ಆನಂದಿಸಬಹುದು ಎಂಬುದನ್ನು ತೋರಿಸಲೆಂದೇ ನಾನು ಹೀಗೆ ಫೋಟೋಶೂಟ್​ ಮಾಡಿಸಿಕೊಂಡಿದ್ದೆ. ಅದಾಗ್ಯೂ ಕೆಲವರು ನೆಗೆಟಿವ್ ಕಮೆಂಟ್ ಮಾಡಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

ಫೋಟೋಗಳಿಗೆ ಈ ಪ್ರೊಫೈಲ್ ಲಿಂಕ್ ಕ್ಲಿಕ್​ ಮಾಡಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net