ಇಂದು ಪೂಜೆಯ ಗುಂಗಿನಲ್ಲಿ ಬರ್ತಡೇ ಬಾಯ್​ ಪ್ರೇಮ್, ಸರಳ ಆಚರಣೆಗೆ ನಿರ್ಧಾರ

page 10 2
Published on

ಬೆಂಗಳೂರು: ಇಂದು ಪ್ರೇಮ್ ಹುಟ್ಟುಹಬ್ಬ. ಕಳೆದ ಕೆಲವು ವರ್ಷಗಳಿಂದ ತಮ್ಮ ಹುಟ್ಟುಹಬ್ಬವನ್ನು ಫ್ಯಾಮಿಲಿ, ಫ್ಯಾನ್ಸ್ ಮತ್ತು ಫ್ರೆಂಡ್ಸ್ ಜತೆಗೆ ಆಚರಿಸಿಕೊಳ್ಳುತ್ತಿದ್ದರು ಪ್ರೇಮ್ ಆದರೆ, ಈ ಬಾರಿ ಲಾಕ್​ಡೌನ್​ನಿಂದಾಗಿ ಫ್ಯಾನ್ಸ್ ಮತ್ತು ಫ್ರೆಂಡ್ಸ್​ಗೂ ನೋ ಎಂದಿದ್ದಾರೆ. ಬರೀ ಫ್ಯಾಮಿಲಿಯ ಜತೆಗೆ ಸರಳವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಕ್ಕೆ ತೀರ್ಮಾನಿಸಿದ್ದಾರೆ.

ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಅವರು, ‘ಕರೊನಾದಿಂದಾಗಿ ಈ ಬಾರಿ ನೋ ಸೆಲೆಬ್ರೇಷನ್. ಕೇಕ್ ಕಟ್ ಮಾಡುವುದು ಸಹ ಬೇಡ ಎಂದು ನಿರ್ಧರಿಸಿದ್ದೇನೆ. ಇನ್ನು ಪ್ರತಿ ವರ್ಷ ಸ್ನೇಹಿತರು ಮತ್ತು ಅಭಿಮಾನಿಗಳು ಬಂದು ಶುಭ ಹಾರೈಸುತ್ತಿದ್ದರು. ಈ ಬಾರಿ ಲಾಕ್​ಡೌನ್​ನಿಂದ ಅವರು ಸಹ ಬರುವ ಹಾಗಿಲ್ಲ. ಹಾಗಾಗಿ ನಾನೇ ಶನಿವಾರ ಸಂಜೆ ಐದಕ್ಕೆ ಇನ್​ಸ್ಟಾಗ್ರಾಮ್​ ನಲ್ಲಿ ಲೈವ್ ಬರುತ್ತಿದ್ದೀನಿ. ಯಾರು ಬೇಕಾದರೂ ಲೈವ್ ಬಂದು ಶುಭ ಹಾರೈಸುವುದರ ಜತೆಗೆ, ಮಾತನಾಡಬಹುದು’ ಎನ್ನುತ್ತಾರೆ ಪ್ರೇಮ್.

ಈ ಕುರಿತು ಅವರು ಟ್ವಿಟರ್​ನಲ್ಲಿ ತಮ್ಮ ಅಭಿಮಾನಿಗಳು ಮತ್ತು ಸ್ನೇಹಿತರಿಗೆ ಮನವಿಯನ್ನೂ ಮಾಡಿದ್ದಾರೆ. ಲೈವ್​ನಲ್ಲೇ ಭೇಟಿಯಾಗೋಣ ಎಂಬ ಸಂದೇಶ ವನ್ನು ಅವರು ಎಲ್ಲರಿಗೂ ಕಳಿಸಿದ್ದಾರೆ. ‘ಪ್ರೇಮಂ ಪೂಜ್ಯಂ’ ಬಗ್ಗೆ ಮಾತನಾಡುವ ಅವರು, ‘ಒಂಬತ್ತು ಶೇಡ್​ಗಳು, 14 ಹಾಡುಗಳಿರುವ ಚಿತ್ರ ಅದು. ನನ್ನ ಮಟ್ಟಿಗೆ ಅದೊಂದು ವಿಶೇಷ ಚಿತ್ರ. ನನ್ನ ಹಾರ್ಟ್ ಆಂಡ್ ಸೌಲ್, ಆ ಚಿತ್ರಕ್ಕೇ ಅರ್ಪಿಸಿದ್ದೇನೆ’ ಎನ್ನುತ್ತಾರೆ ಪ್ರೇಮ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net