ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಜತೆಗೆ ನೇಹಾ ಶೆಟ್ಟಿ

Neha Shetty
Published on

ಬೆಂಗಳೂರು: ಕನ್ನಡದಲ್ಲಿ ‘ಮುಂಗಾರು ಮಳೆ 2’ ಸಿನಿಮಾ ಮಾಡಿ, ಅದಾದ ಬಳಿಕ ತೆಲುಗಿನಲ್ಲಿಯೂ ಖಾತೆ ತೆರೆದ ಮಂಗಳೂರು ಬೆಡಗಿ ನೇಹಾ ಶೆಟ್ಟಿ, ಇದೀಗ ಬಹುದಿನಗಳ ಬಳಿಕ ಮತ್ತೊಂದು ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ.

ಅಕ್ಕಿನೇನಿ ನಾಗಾರ್ಜುನ್ ಅವರ ಕಿರಿಯ ಮಗ ಅಖಿಲ್ ಸದ್ಯ ‘ಮೋಸ್ಟ್ ಎಲಿಜಿಬಲ್ ಬ್ಯಾಚುಲರ್’ ಎಂಬ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಹೀಗಿರುವಾಗಲೇ ಇದೇ ತಂಡಕ್ಕೆ ನೇಹಾ ಶೆಟ್ಟಿ ಎಂಟ್ರಿಕೊಟ್ಟಿದ್ದಾರೆ. ‘ಮೋಸ್ಟ್ ಎಲಿಜಿಬಲ್ ಬ್ಯಾಚುಲರ್’ ಚಿತ್ರದಲ್ಲಿ ಅಖಿಲ್​ಗೆ ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ.

ಪುರಿ ಜಗನ್ನಾಥ್ ನಿರ್ದೇಶನದ ‘ಮೆಹಬೂಬ’ ಸಿನಿಮಾ ಮೂಲಕ ಟಾಲಿವುಡ್ ಪ್ರವೇಶಿಸಿದ್ದ ನೇಹಾ ಶೆಟ್ಟಿ, ಇದೀಗ ಮತ್ತೊಂದು ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ‘ಬೊಮ್ಮಿರಿಲ್ಲು’ ಸಿನಿಮಾ ಖ್ಯಾತಿಯ ನಿರ್ದೇಶಕ ಭಾಸ್ಕರ್ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಬನ್ನಿ ವಾಸ್, ವಾಸು ವರ್ವ ಈ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net