ಪ್ರಚಾರಕ್ಕೂ ಮಿತಿ ಇರಲಿ! ವೇದಿಕೆ ಮೇಲೆಯೇ ಸೀರೆ ಬಿಚ್ಚಿದ ನೇಹಾ ಶೆಟ್ಟಿ ವಿರುದ್ಧ ನೆಟ್ಟಿಗರು ಗರಂ

Neha Shetty
Published on

ಹೈದರಾಬಾದ್​: ಸಿನಿಮಾ ಮಾರುಕಟ್ಟೆ ವಿಸ್ತಾರವಾದಂತೆ ಸಿನಿಮಾಗಳ ಪ್ರಚಾರದ ತಂತ್ರವೂ ಕೂಡ ಬದಲಾಗಿದೆ. ಪ್ರತಿಯೊಬ್ಬರು ತಮ್ಮಯಾದ ಶೈಲಿಯಲ್ಲಿ ಜನರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ. ಇತ್ತೀಚೆಗೆ ಎಲ್ಲ ಸಿನಿಮಾಗಳು ಎಲ್ಲ ಭಾಷೆಗಳಲ್ಲಿ ಡಬ್​ ಆಗುತ್ತಿರುವುದಿಂದ ಯಾವ ಸಿನಿಮಾ ನೋಡಬೇಕೆಂಬ ಗೊಂದಲ ಪ್ರೇಕ್ಷಕರಲ್ಲೇ ಮೂಡಿದೆ. ಅಷ್ಟೊಂದು ಸಿನಿಮಾಗಳು ಪ್ರತಿವಾರ ಬಿಡುಗಡೆಯಾಗುತ್ತಿವೆ. ಹೀಗಾಗಿ ಜನರನ್ನು ಸೆಳೆಯಲು ಸಿನಿತಂಡಗಳು ವಿನೂತನ ಪ್ರಯತ್ನಗಳನ್ನು ಮಾಡುತ್ತಿವೆ. ಆದರೆ, ಕೆಲವೊಮ್ಮೆ ಇಂತಹ ಪ್ರಯತ್ನ ವಿವಾದಕ್ಕೂ ಕಾರಣವಾಗುತ್ತವೆ ಮತ್ತು ಟ್ರೋಲಿಗೂ ಗುರಿಯಾಗುತ್ತದೆ.

ಮೊನ್ನೆಯಷ್ಟೇ ವಿಜಯ್​ ದೇವರಕೊಂಡ ಅವರು ಸ್ವಾತಂತ್ರ್ಯ ದಿನದಂದು "ಖುಷಿ" ಸಿನಿಮಾದ ಸಂಗಿತ ಸಂಜೆ ಕಾರ್ಯಕ್ರಮದಲ್ಲಿ ಶರ್ಟ್​ ಬಿಚ್ಚಿ ಸಮಂತಾ ಜತೆ ಡಾನ್ಸ್​ ಮಾಡಿದ್ದು, ಟ್ರೋಲ್​ ಆಗಿತ್ತು. ಇದೀಗ ಕನ್ನಡತಿ ನೇಹಾ ಶೆಟ್ಟಿ ವೇದಿಕೆ ಮೇಲೆಯೇ ಸೀರೆ ಬಿಚ್ಚುವ ಮೂಲಕ ಟ್ರೋಲ್​ ಆಗಿದ್ದಾರೆ.

ನಟ ವಿಶ್ವಾಕ್​ ಸೇನ್​ ಮತ್ತು ನೇಹಾ ಶೆಟ್ಟಿ ಗ್ಯಾಂಗ್ಸ್​ ಆಫ್​ ಗೋದಾವರಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಪ್ರಚಾರದ ವೇಳೆ ಇಬ್ಬರು ತಮ್ಮ ಮಿತಿಗಳನ್ನು ಮೀರಿದ್ದಾರೆ. ಸಿನಿಮಾದ ಮೊದಲ ಹಾಡು ಸುತ್ತಮ್ಲ ಸುಸಿ ಬಿಡುಗಡೆಯಾಗಿದ್ದು, ಎಲ್ಲರ ಗಮನ ಸೆಳೆದಿದೆ. ಈ ಹಾಡಿಗೆ ಯುವನ್​ ಶಂಕರ್​ ರಾಜಾ ಮ್ಯೂಸಿಕ್​ ನೀಡಿದ್ದಾರೆ. ನಿನ್ನೆಯಷ್ಟೇ ಈ ಹಾಡು ಬಿಡುಗಡೆಯಾಗಿದೆ. ಈ ವೇಳೆ ವಿಶ್ವಾಕ್​ ಸೇನ್​ ಮತ್ತು ನೇಹಾ ಶೆಟ್ಟಿ ವೇದಿಕೆ ಮೇಲೆ ಮಾಡಿದ ಮೋಡಿ ಟಾಲಿವುಡ್​ನಲ್ಲಿ ಬಿಸಿ ಬಿಸಿ ಚರ್ಚೆಯಾಗಿದ್ದು, ಟ್ರೋಲಿಗೂ ಗುರಿಯಾಗಿದೆ.

ಬಿಡುಗಡೆಯಾದ ಹಾಡಿನಲ್ಲಿ ಹುಕ್​ ಸ್ಟೆಪ್ಸ್​ ಸಹ ಇದೆ. ಇದಕ್ಕೆ ನೇಹಾ ಮತ್ತು ವಿಶ್ವಾಕ್​ ವೇದಿಕೆ ಮೇಲೆಯೇ ಹೆಜ್ಜೆ ಹಾಕಿದರು. ಈ ವೇಳೆ ನೇಹಾ ತಮ್ಮ ಸೀರೆಯ ಒಂದು ಎಳೆಯನ್ನು ಬಿಚ್ಚಿ ವಿಶ್ವಾಕ್ ಮೇಲೆ ಹಾಕಿ ಹುಕ್​ ಸ್ಟೆಪ್ಸ್​ ಮಾಡಿದ್ದರು. ಇದೀಗ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೇಹಾ ಶೆಟ್ಟಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಎಲ್ಲದಕ್ಕೂ ಒಂದು ಮಿತಿ ಇರುತ್ತದೆ ವೇದಿಕೆ ಮೇಲೆ ಈ ರೀತಿ ನಡೆದುಕೊಳ್ಳಬಾರದು ಎಂದು ಒಂದು ವರ್ಗದ ಜನ ಸಾಮಾಜಿಕ ಜಾಲತಾಣದಲ್ಲಿ ಟೀಕಾ ಪ್ರಹಾರ ನಡೆಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net