

ಮುಂಬೈ: ಸೆಲೆಬ್ರಿಟಿಗಳು ಧರಿಸುವ ಬಟ್ಟೆ ನೋಡಿ ವಾವ್ ಎಂದು ಬಾಯಿ ತೆರೆಯುವವರಿರುತ್ತಾರೆ. ಆದರೆ ಅದೇ ಬಟ್ಟೆಯ ಬೆಲೆ ಕೇಳಿದರೆ ನೀವು ತಲೆ ತಿರುಗಿ ಬೀಳೋದು ಗ್ಯಾರಂಟಿ. ಸುಪ್ರಸಿದ್ಧ ಗಾಯಕಿ ನೇಹಾ ಕಕ್ಕರ್ ಅವರ ಈ ಒಂದು ಟೀ ಶರ್ಟ್ ಬೆಲೆಯಲ್ಲಿ ನೀವು ಏನೇನು ಖರೀದಿಸಬಹುದಿತ್ತು ಎನ್ನುವುದನ್ನು ಊಹಿಸಿಕೊಳ್ಳಿ..
ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನೇಹಾ ಕಕ್ಕರ್ ಅವರು ಕೆಲ ದಿನಗಳ ಹಿಂದೆ ಪತಿ ರೀಹನ್ಪ್ರೀತ್ನೊಂದಿಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಮುದ್ದಾದ ಜೋಡಿಯನ್ನು ಕಂಡೊಡನೆ ಜನರು ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದಿದ್ದಾರೆ. ಅಂದ ಹಾಗೆ ಆ ದಿನದಂದು ನೇಹಾ ಗುಸ್ಸಿ ಫ್ಯಾಷನ್ ಸಂಸ್ಥೆಯ ಕಡು ನೀಲಿ ಬಣ್ಣದ ಟೀ ಶರ್ಟ್ ಧರಿಸಿದ್ದರು. ಅದಕ್ಕೆ ಮ್ಯಾಚ್ ಆಗುವಂತೆ ಕಪ್ಪು ಪ್ಯಾಂಟ್ ಮತ್ತು ಬಿಳಿ ಬಣ್ಣದ ಸ್ಪೋರ್ಟ್ಸ್ ಶೂ ಧರಿಸಿದ್ದರು. ಅವರು ಧರಿಸಿದ್ದ ಆ ಸಿಂಪಲ್ ಟೀ ಶರ್ಟ್ನ ಬೆಲೆ ಬರೋಬ್ಬರಿ 590 ಡಾಲರ್. ಅಂದರೆ ಭಾರತೀಯ ರೂಪಾಯಿಗಳಲ್ಲಿ ಬರೋಬ್ಬರಿ 42 ಸಾವಿರ ರೂಪಾಯಿ.
ಏನೂ ವಿಶೇಷವಿಲ್ಲದ ಆ ಸಿಂಪಲ್ ಟೀ ಶರ್ಟ್ಗೆ 42 ಸಾವಿರ ರೂಪಾಯಿ ತೆತ್ತಿದ್ದೇಕೆ ಎನ್ನುವ ಪ್ರಶ್ನೆ ನಿಮ್ಮ ತಲೆಯಲ್ಲಿ ಬಂದಿರಬಹುದು. ಅದಕ್ಕೆಲ್ಲ ಕಾರಣ ಬ್ರ್ಯಾಂಡ್. ಬಾಲಿವುಡ್ ಮಂದಿಯ ಫೇವರಿಟ್ ಎನಿಸಿಕೊಂಡಿರುವ ಗುಸ್ಸಿ ಬ್ರ್ಯಾಂಡ್. ನಿಮಗೂ ಈ ಟೀ ಶರ್ಟ್ ಧರಿಸುವ ಆಸೆ ಏನಾದರೂ ಇತ್ತೆಂದರೆ ಗುಸ್ಸಿಯ ಅಧಿಕೃತ ಮಾರ್ಕೆಂಟಿಗ್ ಪೇಜ್ಗೆ ತೆರಳಿ ಟೀ ಶರ್ಟ್ ಆರ್ಡರ್ ಮಾಡಬಹುದು. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ