Neetu Kapoor: ಬಾಲಿವುಡ್ನ ಹಿರಿಯ ಸ್ಟಾರ್ ನಟಿ ನೀತು ಕಪೂರ್, ಕೇವಲ 8 ವರ್ಷ ವಯಸ್ಸಿನಲ್ಲೇ ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟವರು. 21 ವರ್ಷಕ್ಕೆ, ಶಶಿ ಕಪೂರ್, ಅಮಿತಾಬ್ ಬಚ್ಚನ್, ಜೀತೇಂದ್ರ ಮತ್ತು ಶತ್ರುಘ್ನ ಸಿನ್ಹಾರಂತಹ ದಿಗ್ಗಜ ನಟರೊಂದಿಗೆ ಬಣ್ಣ ಹಚ್ಚಿದ ಬ್ಯೂಟಿ. ಮೆಗಾ, ಸೂಪರ್ಹಿಟ್ ಚಿತ್ರಗಳನ್ನು ನೀಡಿದ ನಟಿ, 2020ರಲ್ಲಿ ತಮ್ಮ ಪತಿ ರಿಷಿ ಕಪೂರ್ರನ್ನು ಕಳೆದುಕೊಂಡ ಬಳಿಕ ಅನುಭವಿಸಿದ ನರಕಯಾತನೆ ಬಗ್ಗೆ ಮುಕ್ತವಾಗಿ ಹಂಚಿಕೊಂಡಿದ್ದರು. ಅದರ ವಿವರವಾದ ಮಾಹಿತಿ ಇಲ್ಲಿದೆ ನೋಡಿ.