ಮೃತ ನಟ ಸುಶಾಂತ್​ ಸಿಂಗ್​ ರಜಪೂತ್​ ಮನೆಯ ಕೆಲಸದವನು ಅರೆಸ್ಟ್​...!

Sushant Singh
Published on

ಮುಂಬೈ: ನಟ ಸುಶಾಂತ್​ ಸಿಂಗ್ ಸಾವಿನ ಪ್ರಕರಣದಲ್ಲಿ ಮಾದಕ ವಸ್ತು ಥಳುಕು ಹಾಕಿಕೊಂಡಿದ್ದು, ಎನ್​ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ವಿಚಾರಣೆಯನ್ನು ತೀವ್ರಗೊಳಿಸಿದೆ. ಈಗಾಗಲೇ ರಿಯಾ ಚಕ್ರವರ್ತಿಯ ಸೋದರ ಶೋಯಿಕ್​, ಸುಶಾಂತ್​ ಅವರ ಮಾಜಿ ವ್ಯವಸ್ಥಾಪಕ ಸ್ಯಾಮ್ಯುಯೆಲ್​ ಮಿರಾಂಡಾ ಅವರನ್ನು ವಶಕ್ಕೆ ಪಡೆದುಕೊಂಡಿದೆ.

ಹಾಗೇ ಇಂದಿನ ಮಹತ್ವದ ಬೆಳವಣಿಗೆಯಲ್ಲಿ ಸುಶಾಂತ್​ ಸಿಂಗ್​ ಅವರ ಮನೆಯಲ್ಲಿದ್ದ ಸಹಾಯಕ ದೀಪೇಶ್​ ಸಾವಂತ್​ನನ್ನು ಎನ್​ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಇದನ್ನೂ ಓದಿ:ವೈದ್ಯ ವೃತ್ತಿ ಬಿಟ್ಟು ಆಟೋ ಚಾಲಕರಾದ್ರು​: ಐಎಎಸ್​ ಅಧಿಕಾರಿಗಳ ದುರಾಡಳಿತದಿಂದ ನೊಂದ ಜೀವ!

ಮನೆ ಕೆಲಸದವನಾಗಿದ್ದ ದೀಪೇಶ್​ ಸಾವಂತ್​, ಸುಶಾಂತ್​ ಸಿಂಗ್​ ವಾಸವಾಗಿದ್ದ ಡೂಪ್ಲೆಕ್ಸ್​​ನಲ್ಲಿ ಕೆಳಗಿನ ಫ್ಲೋರ್​​ನಲ್ಲಿ ವಾಸವಾಗಿದ್ದ. ಜೂ.14ರಂದು ಸುಶಾಂತ್​ ಮೃತದೇಹ ಪತ್ತೆಯಾಗಿದೆ. ಆ ಸಮಯದಲ್ಲಿ ಸಿದ್ದಾರ್ಥ್​ ಪಿಠಾಣಿ, ಕೇಶವ್​ ಬ್ಯಾಚ್ನರ್​ ಮತ್ತು ನೀರಜ್​ ಜತೆ ಈ ದೀಪೇಶ್​ ಸಾವಂತ್ ಕೂಡ ಇದ್ದ ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ದೀಪೇಶ್​​ನನ್ನು ಶುಕ್ರವಾರ ಸಂಜೆಯಿಂದ ವಿಚಾರಣೆಗೆ ಒಳಪಡಿಸಲಾಗಿತ್ತು. ಮಹತ್ವದ ಮಾಹಿತಿಗಳು ಹೊರಬಿದ್ದ ಹಿನ್ನೆಲೆಯಲ್ಲಿ ಈತನನ್ನೂ ಬಂಧಿಸಲಾಗಿದೆ. ಭಾನುವಾರ ಬೆಳಗ್ಗೆ 11ಗಂಟೆಗೆ ಕೋರ್ಟ್​ಗೆ ಹಾಜರುಪಡಿಸಲಾಗುವುದು ಎಂದು ಎನ್​ಸಿಬಿ ಡೆಪ್ಯೂಟಿ ಡೈರೆಕ್ಟರ್​ ಕೆಪಿಎಸ್ ಮಲ್ಹೋತ್ರಾ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net