ಮದುವೆ ನಂತರವೂ ದುಪ್ಪಟ್ಟಾಯ್ತು ನಯನತಾರಾ ಸಂಭಾವನೆ: ಮತ್ತೆ ಟಾಪ್​ 1 ನಟಿ ಎನಿಸಿಕೊಳ್ಳಲಿದ್ದಾರಾ ಲೇಡಿ ಸೂಪರ್​ಸ್ಟಾರ್​?

Nayanatara1
Published on

ಚೆನ್ನೈ: ತಮ್ಮ ಮದುವೆಯಿಂದಾಗಿ ಭಾರೀ ಗಮನ ಸೆಳೆದಿದ್ದ ನಯನತಾರ ಇದೀಗ ಮತ್ತೊಂದು ಸುದ್ದಿಯಿಂದ ಚರ್ಚೆಯಲ್ಲಿದ್ದಾರೆ. ಲೇಡಿ ಸೂಪರ್​ಸ್ಟಾರ್​ ಎಂದೇ ಕರೆಸಿಕೊಂಡಿರುವ ನಯನತಾರ ಮದುವೆ ನಂತರವೂ ಬಹುಬೇಡಿಕೆಯ ನಟಿಯಾಗಿ ಕಾಯ್ದುಕೊಂಡಿದ್ದಾರೆ.

ಮದುವೆ ಬಳಿಕ ಮುಂದಿನ ಸಿನಿಮಾದಲ್ಲಿ ತೊಡಗಿಸಿಕೊಂಡಿರುವ ನಯನಾ ಈಗಾಗಲೇ ಜವಾನ್​ ಚಿತ್ರದ ಶೂಟಿಂಗ್​ನಲ್ಲಿ ಭಾಗಿಯಾಗಿದ್ದಾರೆ. ಸದ್ಯ ತಮ್ಮ ಮುಂದಿನ ಸಿನಿಮಾಗಾಗಿ ಪಡೆದುಕೊಳ್ಳುತ್ತಿರುವ ಸಂಭಾವನೆ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.

ಹಲವು ಟಾಪ್​ ನಟಿಯರನ್ನೂ ಹಿಂದಿಕ್ಕಿರುವ ನಯನತಾರಾ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎನಿಸಿಕೊಂಡಿದ್ದರು. ಮದುವೆಯಾದ ಬಳಿಕ ಇವರ ಸಂಭಾವನೆ ಇಳಿಯಬಹುದು ಎಂದೇ ಭಾವಿಸಲಾಗಿತ್ತು. ಆದರೆ ಈಗ ಇದು ಹುಸಿಯಾಗಿದೆ.

ಸದ್ಯ ಮುಂಬರುವ ಚಿತ್ರಕ್ಕಾಗಿ ನಯನತಾರ 10 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರಂತೆ. ಈ ಹಿಂದೆ 5 ಅಥವಾ 6 ಕೋಟಿ ಪಡೆಯುತ್ತಿದ್ದ ಸಂಭಾವನೆ ಈಗ ದುಪ್ಪಟ್ಟಾಗಿದೆ. ಒಂದು ವೇಳೆ ಈ ಸಂಭಾವನೆ ಪಡೆದಿದ್ದಲ್ಲಿ ನಟಿ ನಯನತಾರಾ ಅತಿ ಹೆಚ್ಚು ಸಂಭಾವನೆ ಪಡೆದ ದಕ್ಷಿಣ ಭಾರತದ ಏಕೈಕ ನಟಿ ಎನಿಸಿಕೊಳ್ಳಲಿದ್ದಾರೆ.

ಪ್ರಸ್ತುತ ಸೌತ್ ನಟಿಯರಲ್ಲಿ ಹೆಚ್ಚೆಂದರೆ 5 ಕೋಟಿಯ ತನಕ ಸಂಭಾವನೆಯನ್ನು ಪಡೆಯುವಲ್ಲಿ ರಶ್ಮಿಕಾ ಮಂದಣ್ಣ ಮತ್ತು ಪೂಜಾ ಹೆಗ್ಡೆ ಇದ್ದಾರೆ. ಸದ್ಯ ಮುಂದಿನ ಸಿನಿಮಾಕ್ಕಾಗಿ ನಯನತಾರ ಹೆಚ್ಚಿನ ಸಂಭಾವನೆಯನ್ನು ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net