ನಂಬಿಕೆ ಇಲ್ಲದೆ ಪ್ರೀತಿ ಇಲ್ಲ ... ಹಳೆಯ ಲವರ್ಸ್​ ಕುರಿತು ನಯನತಾರಾ ಬಿಚ್ಚುಮಾತು

Nayanthara Final
Published on

ಬಹುಶಃ ದಕ್ಷಿಣ ಭಾರತದ ಚಿತ್ರರಂಗದಲ್ಲೇ ಪ್ರೀತಿಯ ವಿಷಯದಲ್ಲಿ ಅತೀ ಹೆಚ್ಚು ಸುದ್ದಿಯಾದವರೆಂದರೆ ಅದು ನಯನತಾರಾ ಇರಬೇಕು. ಹಲವು ವರ್ಷಗಳಿಂದ ನಯನತಾರಾ ಲವರ್ಸ್​ ಕುರಿತು ಕೇಳಿ ಬರುತ್ತಲೇ ಇದೆ.

ಮೊದಲು ನಟ ಸಿಂಬು ಜತೆಗೆ ನಯನತಾರಾ ಪ್ರೇಮಕಥೆ ಜೋರಾಗಿಯೇ ಇತ್ತು. ಆ ಪ್ರೇಮಕಥೆ ದುರಂತ ಅಂತ್ಯ ಕಂಡಿತು. ನಂತರ ಪ್ರಭುದೇವ ಮತ್ತು ನಯನತಾರಾ ಬಹಳ ಹತ್ತಿರವಾದರು. ಒಂದು ಹಂತದಲ್ಲಿ ಇಬ್ಬರೂ ಮದುವೆಯಾಗಿಯೇ ಬಿಡುತ್ತಾರೆ ಎನ್ನುವವರೆಗೂ ಹೋಯಿತು. ಅಷ್ಟರಲ್ಲಿ, ಕಾರಣಾಂತರಗಳಿಂದ ಇಬ್ಬರೂ ದೂರವಾದರು. ಅದಾದ ಮೇಲೆ ಇದೀಗ ನಿರ್ದೇಶಕ ವಿಘ್ನೇಶ್​ ಶಿವನ್‌ಗೆ ನಯನತಾರಾ ಬಹಳ ಹತ್ತಿರವಾಗಿದ್ದಾರೆ. ಇಬ್ಬರೂ ಸದ್ಯದಲ್ಲೇ ಮದುವೆಯಾಗುತ್ತಾರೆ ಎಂಬ ಗುಸುಗುಸು ಇದೆ.

ಹೀಗಿರುವಾಗಲೇ, ನಯನತಾರಾ ತಮ್ಮ ಹಿಂದಿನ ಲವ್ ಅಫೇರ್‌ಗಳ ಕುರಿತು ಮಾತಾಡಿದ್ದಾರೆ. ಸಿಂಬು ಮತ್ತು ಪ್ರಭುದೇವ ಅವರಿಂದ ದೂರವಾಗಿದ್ದೇಕೆ ಎಂದು ಸೂಕ್ಷ್ಮವಾಗಿ ಹೇಳಿದ್ದಾರೆ. ಯಾರ ಹೆಸರನ್ನೂ ಹೇಳದೆಯೇ, ಇಲ್ಲಿ ನಂಬಿಕೆ ಬಹಳ ಮುಖ್ಯ ಎಂದು ಹೇಳಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಪ್ರೀತಿಯಲ್ಲಿ ನಂಬಿಕೆ ಬಹಳ ಮುಖ್ಯ. ನಂಬಿಕೆ ಇಲ್ಲದಿದ್ದರೆ ಏನೂ ಇಲ್ಲ. ನನ್ನ ಹಿಂದಿನ ಸಂಬಂಧಗಳು ಮುರಿದು ಹೋಗುವುದಕ್ಕೆ ನಂಬಿಕೆ ಇಲ್ಲದಿರುವುದೇ ಮುಖ್ಯ ಕಾರಣ. ಯಾರನ್ನು ನಂಬುವುದಕ್ಕೆ ಸಾಧ್ಯವಿಲ್ಲವೋ, ಅವರ ಜತೆಗೆ ಬದುಕುವುದಕ್ಕಿಂತ, ಒಬ್ಬಂಟಿಯಾಗಿರುವುದು ಒಳ್ಳೆಯದು ಎಂದನಿಸಿ, ಆ ಸಂಬಂಧಗಳನ್ನು ಕಡಿದುಕೊಂಡೆ’ ಎಂದು ಹೇಳಿದ್ದಾರೆ ನಯನತಾರಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net