

ಹೈದರಾಬಾದ್: ಟಾಲಿವುಡ್ ನಟ ವಿಕ್ಟರಿ ವೆಂಕಟೇಶ್ ತಮ್ಮ ವೃತ್ತಿಜೀವನದ 75ನೇ ಚಿತ್ರದಲ್ಲಿ ನಟಿಸುವುದಕ್ಕೆ ರೆಡಿಯಾಗುತ್ತಿದ್ದಾರೆ. ಶೈಲೇಶ್ ಕೊಲಾನು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ 'ಸೈಂಧವ್' ಎಂಬ ಹೆಸರಿಡಲಾಗಿದ್ದು, ಇತ್ತೀಚೆಗೆ ಚಿತ್ರದ ಮೊದಲ ಪೋಸ್ಟರ್ ಬಿಡುಡೆಯಾಗಿದೆ.
ಈ ಮಧ್ಯೆ, ಬಾಲಿವುಡ್ನ ಜನಪ್ರಿಯ ನಟ ನವಾಜುದ್ದೀನ್ ಸಿದ್ದೀಕಿ, ಈ ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದು ಅವರ ಮೊದಲ ತೆಲುಗು ಚಿತ್ರ. ಇದಕ್ಕೂ ಮುನ್ನ ನವಾಜುದ್ದೀನಿ, ರಜನಿಕಾಂತ್ ಅಭಿನಯದ 'ಪೆಟ್ಟ' ಎಂಬ ತಮಿಳು ಚಿತ್ರದಲ್ಲಿ ನಟಿಸಿದ್ದರು. ಈಗ 'ಸೈಂಧವ್' ಮೂಲಕ ಅವರು ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
'ಸೈಂಧವ್' ಚಿತ್ರದಲ್ಲಿ ನವಾಜುದ್ದೀನ್ ಪಾತ್ರವೇನು ಎಂದು ಅವರಾಗಲೀ, ಚಿತ್ರತಂಡದವರಾಗಲೀ ಬಹಿರಂಗಗೊಳಿಸಿಲ್ಲ. ಆದರೆ, ಚಿತ್ರತಂಡದವರು ಅವರನ್ನು ಸೋಷಿಯಲ್ ಮೀಡಿಯಾ ಮೂಲಕ ಬರಮಾಡಿಕೊಳ್ಳುವ ಮೂಲಕ ಚಿತ್ರದಲ್ಲಿ ಅವರು ನಟಿಸುತ್ತಿರುವುದನ್ನು ಖಚಿತಪಡಿಸಿದ್ದಾರೆ.
ಈ ಚಿತ್ರವನ್ನು ನಿಹಾರಿಕಾ ಎಂಟರ್ಟೈನ್ಮೆಂಟ್ಸ್ ಸಂಸ್ಥೆಯು ನಿರ್ಮಿಸುತ್ತಿ್ದು. ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ದೊಡ್ಡ ಬಜೆಟ್ನಲ್ಲಿ ನಿರ್ಮಾಣವಾಗುತ್ತಿದೆ. ಸಂತೋಷ್ ನಾರಾಯಣನ್ ಸಂಗೀತ ಮತ್ತು ಮಣಿಕಂಠನ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
'ಸೈಂಧವ್' ಅಲ್ಲದೆ 'ಅದ್ಭುತ್', 'ಟಿಕು ವೆಡ್ಸ್ ಶೇರು', 'ನೂರಾನಿ ಚೆಹರಾ', 'ಬೋಲೇ ಚೂಡಿಯಾನ್', 'ಅಫ್ವಾ', 'ಸಂಗೀನ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.