

ಬಾಲಿವುಡ್ ನಟ ನವಾಜುದ್ದಿನ್ ಸಿದ್ದಿಕಿ ನೈಜ ನಟನೆಯಿಂದಲೇ ಹೆಸರುವಾಸಿಯಾದವರು. ಹಲವಾರು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿ ರಂಜಿಸಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ನವಾಜ್ ಹೆಣ್ಣಿನ ವೇಷ ಧರಿಸಿದ್ದಾರೆ. ಅದು ‘ಹಡ್ಡಿ’ ಚಿತ್ರಕ್ಕಾಗಿ.
ಹೌದು, ಅಕ್ಷತ್ ಅಜಯ್ ಶರ್ಮಾ ನಿರ್ದೇಶನದ ರಿವೇಂಜ್ ಡ್ರಾಮಾ ‘ಹಡ್ಡಿ’ ಚಿತ್ರದಲ್ಲಿ ನವಾಜ್ ವಿಭಿನ್ನ ಲುಕ್ನಲ್ಲಿ ಮಿಂಚಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಅದರಲ್ಲಿ ಪಕ್ಕದಲ್ಲಿ ರಕ್ತಸಿಕ್ಕ ರಾಡ್ ಇಟ್ಟು, ಸೋಫಾ ಮೇಲೆ ಕುಳಿತ ಗೌನ್ಧಾರಿ ನವಾಜ್ ಗಂಭೀರ ಲುಕ್ ನೆಟ್ಟಿಗರ ಗಮನ ಸೆಳೆದಿದೆ.
ಹಲವರು ನವಾಜ್ ಹೊಸ ಲುಕ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಕೆಲವರು ನವಾಜ್ ಪೋಸ್ಟರ್ನಲ್ಲಿ ಥೇಟ್ ಬಾಲಿವುಡ್ ನಟಿ ಅರ್ಚನಾ ಪುರಾಣ್ ಸಿಂಗ್ ಅವರನ್ನು ಹೋಲುತ್ತಾರೆ ಎಂದು ಕಾಲೆಳೆದಿದ್ದಾರೆ. ‘ಹಡ್ಡಿ’ ಹೊರತುಪಡಿಸಿ ನವಾಜುದ್ದಿನ್ ಸಿದ್ದಿಕಿ ‘ಹೋಲಿ ಕೌ’, ‘ಟೀಕು ವೆಡ್ಸ್ ಶೇರು’, ‘ಅದ್ಭುತ್’ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. -ಏಜೆನ್ಸೀಸ್