Premada Oorali Review : ಸಂಕೀರ್ಣ ಸಂಬಂಧಗಳ ಸುಂದರ ಸುಮಧುರ ದೃಶ್ಯಕಾವ್ಯ

"ಕಲ್ಲು ನೆಟ್ರೆ ಸಮಾಧಿ ಆಯ್ತದೆ. ಗಿಡ ನೆಟ್ರೆ ಉಸಿರಾಯ್ತದೆ. ಮರವಾಗಿ ಬೆಳ್ದು ಹಣ್ಣು, ನೆರಳು ಕೊಡ್ತದೆ, ನನ್ನ ಉಸಿರಲ್ಲಿ ಉಸಿರಾಗಿರ್ತದೆ' ಅಂತ ಪತ್ನಿಯ ಸಮಾಧಿ ಸ್ಥಳದಲ್ಲಿ ಗಿಡ ನೆಡುತ್ತಾ ಹೇಳುತ್ತಾನೆ ನಾಗಣ್ಣ (ರು). ಮತ್ತೊಮ್ಮೆ ಮದುವೆಯಾಗದೇ ಮಗ ಸಂತುನೇ (ಶ್ರೀರಾಮ್​) ಪ್ರಪಂಚ ಎಂದು ಬದುಕುವ ಭಾವಜೀವಿ ಆತ.
ಪ್ರೇಮದ ಊರಲಿ ಚಿತ್ರದ ವಿಮರ್ಶೆ
ಪ್ರೇಮದ ಊರಲಿ ಚಿತ್ರದ ವಿಮರ್ಶೆ
Published on: 

| ಹರ್ಷವರ್ಧನ್​ ಬ್ಯಾಡನೂರು

ಚಿತ್ರ: ಪ್ರೇಮದ ಊರಲಿ

ನಿರ್ದೇಶನ: ಮನೋಜ್​ ಕುಮಾರ್​

ತಾರಾಗಣ: ಶ್ರೀರಾಮ್​, ರಂಗಾಯಣ ರು, ರಮಿಕ ಶಿವು, ತಪಸ್ವಿನಿ ಪೂಣಚ್ಚ, ಇಳಾ ವಿಟ್ಲ ಮತ್ತಿತರರು

"ಕಲ್ಲು ನೆಟ್ರೆ ಸಮಾಧಿ ಆಯ್ತದೆ. ಗಿಡ ನೆಟ್ರೆ ಉಸಿರಾಯ್ತದೆ. ಮರವಾಗಿ ಬೆಳ್ದು ಹಣ್ಣು, ನೆರಳು ಕೊಡ್ತದೆ, ನನ್ನ ಉಸಿರಲ್ಲಿ ಉಸಿರಾಗಿರ್ತದೆ' ಅಂತ ಪತ್ನಿಯ ಸಮಾಧಿ ಸ್ಥಳದಲ್ಲಿ ಗಿಡ ನೆಡುತ್ತಾ ಹೇಳುತ್ತಾನೆ ನಾಗಣ್ಣ (ರು). ಮತ್ತೊಮ್ಮೆ ಮದುವೆಯಾಗದೇ ಮಗ ಸಂತುನೇ (ಶ್ರೀರಾಮ್​) ಪ್ರಪಂಚ ಎಂದು ಬದುಕುವ ಭಾವಜೀವಿ ಆತ. ಸಂತುಗೂ ಅಪ್ಪನೇ ಪ್ರಪಂಚ. ಓದು ತಲೆಗೆ ಹತ್ತದ ಕಾರಣ, ಊರಲ್ಲಿ ವ್ಯವಸಾಯ ಮಾಡಿಕೊಂಡಿರುವ ಸಂತು ವಯಸ್ಸು 30 ಮುಟ್ಟಿದರೂ, ಮದುವೆಯಾಗಿರುವುದಿಲ್ಲ. ಸೊಸೆಯಾದರೂ ಶಿತಳಾಗಿರಲಿ ಅಂತ ಓದಿಕೊಂಡ ಹುಡುಗಿಗಾಗಿ ನಾಗಣ್ಣ ಹುಡುಕಾಟ ನಡೆಸಿರುತ್ತಾನೆ. ಆದರೆ, 74 ಹುಡುಗಿಯರನ್ನು ನೋಡಿದರೂ "ಫೀಲಿಂಗೇ ಬತ್ತಿಲ್ಲ' ಅಂತ ಸಂತು ಯಾರನ್ನೂ ಒಪ್ಪಲ್ಲ. ಆತನ ಜತೆ ಚಿಕ್ಕ ವಯಸ್ಸಿನಿಂದಲೂ ಜಗಳ ಆಡಿಕೊಂಡು ಬೆಳೆದ ಹುಡುಗಿ ವಸಂತ (ರಮಿಕ). ಗಂಡುಮಕ್ಕಳಂತೆ ಅಂಗಿ-ಲುಂಗಿ ತೊಟ್ಟ ಲವಲವಿಕೆಯ ಮಾತಿನ ಮಲ್ಲಿ, ಬಜಾರಿ. ಆಕೆಗೆ ಸಂತು ಮೇಲೆ ಪ್ರೀತಿ ಚಿಗುರುತ್ತದೆ. ಇತ್ತ "ಫೀಲಿಂಗ್​' ಹುಡುಕಿಕೊಂಡು ಹೊರಟ ಸಂತುಗೆ ಅಮೆರಿಕದಲ್ಲಿ ಓದಿಕೊಂಡು ಬಂದ ರುಕ್ಮಿಣಿ (ತಪಸ್ವಿನಿ) ಮೇಲೆ ಲವ್ವಾಗುತ್ತದೆ. ಮುಂದೆ? "ಪ್ರೇಮದ ಊರಲಿ' ನೋಡಿ.

ಪ್ರೇಮದ ಊರಲಿ ಚಿತ್ರದ ವಿಮರ್ಶೆ
ಪ್ರೇಮದ ಊರಲಿ ಚಿತ್ರದ ವಿಮರ್ಶೆ

ಈ ತ್ರಿಕೋನ ಪ್ರೇಮಕಥೆಯಲ್ಲಿ ಫ್ಲ್ಯಾಶ್​ಬ್ಯಾಕ್​ ಇದೆ, ಅಪ್ಪ&ಮಗನ ಸೆಂಟಿಮೆಂಟ್​, ಪ್ರೀತಿ, ಗೆಳೆತನ, ನಂಬಿಕೆ, ಸೇಡು, ನೋವು, ಸಸ್ಪೆನ್ಸ್​, ಆ್ಯಕ್ಷನ್​, ತ್ಯಾಗ, ಕಾಮಿಡಿ, ಟ್ರಾ$್ಯಜಿಡಿ, ಅನಮಾನದಿಂದ ಆಗುವ ಅನಾಹುತ, ಟ್ವಿಸ್ಟ್​ಗಳು...! ಹೀಗೆ ನಳನಳಿಸುವ ಹಸಿರಿನ ನಡುವೆ ಳಳಿಸುವ ಮುತ್ತಿನಂತ ಕಥೆಯನ್ನು ಹೆಕ್ಕಿ ತಂದು ಅದಕ್ಕೊಂದು ಅಂದದ ರೂಪ ಕೊಟ್ಟು ಜನರ ಮುಂದಿಟ್ಟಿದ್ದಾರೆ ನಿರ್ದೇಶಕ ಮನೋಜ್​ ಕುಮಾರ್​. "ಕೆಲವು ಸೋಲುಗಳಲ್ಲೂ ಗೆಲುವಿರುತ್ತದೆ. ಆ ಗೆಲುವು ಅದೇ ಆಟದಲ್ಲಿ ಸಿಗಬೇಕು ಅಂತಿಲ್ಲ ಅಷ್ಟೇ', "ನಂಬಿಕೆ ಎದೆಯಲ್ಲಿರಬೇಕು, ಕೇಳೋ ಕಿವಿಯಲ್ಲಲ್ಲ' ಎಂಬಂತ ಹಲವು ಅರ್ಥಪೂರ್ಣ ಸಂಭಾಷಣೆಗಳು ಚಿತ್ರದಾದ್ಯಂತ ಸೆಳೆಯುತ್ತವೆ. ಅದರಲ್ಲೂ ರಂಗಾಯಣ ರು ಮತ್ತು ರಮಿಕ ಶಿವು ನಟನೆ ಚಿತ್ರದ ಹೈಲೈಟ್​. ಶ್ರೀರಾಮ್​, ತಪಸ್ವಿನಿ, ಉಮಾಶ್ರೀರನ್ನು ನೆನಪಿಸುವ ಅತ್ತೆಮ್ಮ ಇಳಾ ವಿಟ್ಲ ಕೂಡ ಪಾತ್ರಗಳನ್ನು ಜೀವಿಸಿದ್ದಾರೆ. ಜತೆಗೆ ಸುನಾದ್​ ಗೌತಮ್​ ಸಂಗೀತ ಮತ್ತು ರಾಜ್​ಕಾಂತ್​ ಛಾಯಾಗ್ರಹಣ "ಪ್ರೇಮದೂರಿನ' ಸೊಬಗನ್ನು ಮತ್ತಷ್ಟು ಹೆಚ್ಚಿಸಿದೆ. "ಭುಜದ ಮೇಲೆ ಹೊತ್ತ ದೊರೆಯೊ', "ಏರುಪೇರಿನ ಹೃದಯ' ಮತ್ತು ಟೈಟಲ್​ ಸಾಂಗ್​ ನೆನಪಲ್ಲುಳಿಯುತ್ತವೆ. ಸಿನಿಮಾ ನೋಡಿದ ಬಳಿಕ ಪಾತ್ರಗಳು, ಸಂಭಾಷಣೆ, ಸಂಗೀತ ಮತ್ತು ದೃಶ್ಯ ಎಲ್ಲವೂ ಮನಸ್ಸಿಗಿಳಿಯುತ್ತವೆ, ದೀರ್ಘ ಸಮಯದವರೆಗೆ ಉಳಿಯುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net