ನಾನಿ ಜತೆ ಸಾಯಿ ಸಿನಿಮಾ

page 12 2
Published on

ಬೆಂಗಳೂರು: ಟಾಲಿವುಡ್​ನ ‘ನ್ಯಾಚುರಲ್ ಸ್ಟಾರ್’ ನಾನಿ ನಾಯಕತ್ವದಲ್ಲಿ ‘ಶ್ಯಾಮ್ ಸಿಂಗ ರಾಯ್’ ಸಿನಿಮಾ ಸೆಟ್ಟೇರಿದೆ. ಸದ್ಯಕ್ಕೆ ಚಿತ್ರೀಕರಣ ಪೂರ್ವ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಚಿತ್ರತಂಡ, ಪಾತ್ರವರ್ಗದ ಅಂತಿಮ ಹಂತದಲ್ಲಿದೆ. ಆ ಪೈಕಿ ನಾಯಕಿ ವಿಚಾರದಲ್ಲಿ ಇದೀಗ ಈ ತಂಡ ಸುದ್ದಿಯಲ್ಲಿದೆ.

ನಾನಿಗೆ ಜೋಡಿಯಾಗಿ ಸಾಯಿ ಪಲ್ಲವಿಯನ್ನು ಕರೆತರುವ ಪ್ಲಾನ್ ಹಾಕಿದೆ. ಅದರಂತೆ ಈಗಾಗಲೇ ಒಂದು ಹಂತದ ಮಾತುಕತೆ ನಡೆಸಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ. ಅಂದಹಾಗೆ, ‘ಶ್ಯಾಮ್ ಸಿಂಗ ರಾಯ್’ ಶೀರ್ಷಿಕೆಗೆ ತಕ್ಕಂತೆ ಚಿತ್ರದಲ್ಲಿ ಮೂವರು ನಾಯಕಿಯರು ಇರಲಿದ್ದಾರೆ. ಅದರಲ್ಲಿ ಸಾಯಿ ಮೊದಲಿಗರಾಗಿರಲಿದ್ದು, ಇನ್ನೂ ಇಬ್ಬರು ನಾಯಕಿಯರ ಹುಡುಕಾಟ ಮುಂದುವರಿದಿದೆ. 2017ರಲ್ಲಿ ‘ಮಿಡಲ್ ಕ್ಲಾಸ್ ಅಬ್ಬಾಯಿ’ ಚಿತ್ರದ ಮೂಲಕ ನಾನಿ ಮತ್ತು ಸಾಯಿ ಪಲ್ಲವಿ ಒಂದಾಗಿದ್ದರು. ಅಂದಿನ ಆ ಚಿತ್ರ ಹಿಟ್ ಪಟ್ಟಿ ಸೇರಿಕೊಂಡಿತ್ತು.

ಇದೀಗ ಆ ಜೋಡಿ ಮೂರು ವರ್ಷಗಳ ಬಳಿಕ ಮತ್ತೆ ಒಂದಾಗುವ ಸೂಚನೆ ಸಿಕ್ಕಿದೆ. ಕರೊನಾ ಹಿನ್ನೆಲೆಯಲ್ಲಿ ಆಗಸ್ಟ್ ವೇಳೆಗೆ ಚಿತ್ರೀಕರಣಕ್ಕೆ ಚಾಲನೆ ಸಿಕ್ಕರೆ, 2021ಕ್ಕೆ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ. ಟ್ಯಾಕ್ಸಿವಾಲಾ ಸಿನಿಮಾ ಖ್ಯಾತಿಯ ರಾಹುಲ್ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net