

ಬೆಂಗಳೂರು: ಸ್ಯಾಂಡಲ್ವುಡ್ಗೆ ಪರಭಾಷೆ ಸಿನಿಮಾ ನಟಿಯರ ಆಗಮನ ಹೊಸದೇನಲ್ಲ. ಆಗಾಗ ಬಂದು ಹೋಗುತ್ತಿರುತ್ತಾರೆ. ಇದೀಗ ಬಂಗಾಲಿ ಬೆಡಗಿಯ ಆಗಮನವಾಗುತ್ತಿದೆ. ಆ ನಟಿಯ ಹೆಸರು ನೈನಾ ಗಂಗೂಲಿ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹಾಟ್ ಅವತಾರದ ಮೂಲಕವೇ ಎಲ್ಲರನ್ನು ಸೆಳೆದಿರುವ ನೈನಾ, ಕನ್ನಡಕ್ಕೆ ಹೊಸಬರಾದರೂ ಚಿತ್ರರಂಗಕ್ಕೆ ಹಳಬರು. ತೆಲುಗಿನ ‘ವಾಂಗವೀಟಿ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಪಡೆದ ಅವರು, ಬಂಗಾಲಿ ಮತ್ತು ಹಿಂದಿ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಇದೀಗ ಆ ಪಯಣವನ್ನು ‘ಪ್ರಣಯಂ’ ಚಿತ್ರದ ಮೂಲಕ ಚಂದನವನಕ್ಕೂ ವಿಸ್ತರಿಸಿದ್ದಾರೆ.
‘ಬಿಚ್ಚುಗತಿ: ಚಾಪ್ಟರ್ 1 ದಳವಾಯಿ ದಂಗೆ’ ಮೂಲಕ ನಾಯಕನಾಗಿ ಬಡ್ತಿ ಪಡೆದಿದ್ದ ರಾಜವರ್ಧನ್, ಇದೀಗ ‘ಪ್ರಣಯಂ’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ‘ಪಲ್ಲಕ್ಕಿ’, ‘ಓ ಗುಲಾಬಿ’, ‘ಗಣಪ’ ಚಿತ್ರಗಳಿಗೆ ಬಂಡವಾಳ ಹೂಡಿದ್ದ ಪರಮೇಶ್ ಮತ್ತು ಪ್ರೇಮ್ ತಮ್ಮ ಪಿ 2ಪ್ರೊಡಕ್ಷನ್ಸ್ನಲ್ಲಿ ಈ ಚಿತ್ರವನ್ನು ನಿರ್ವಿುಸುತ್ತಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ. ರಾಮ್ೋಪಾಲ್ ವರ್ವ ಗರಡಿಯಲ್ಲಿ ಪಳಗಿರುವ ನೈನಾ, ‘ಬ್ಯೂಟಿಫುಲ್’ ಚಿತ್ರದಲ್ಲಿ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಲವ್ ಟ್ರಾ್ಯಕ್ಗೆ ಮರಳಿದ್ದಾರೆ. ‘ಪ್ರಣಯಂ’ ಮೂಲಕ ಚಾಲೆಂಜಿಂಗ್ ಪಾತ್ರವನ್ನು ನಿಭಾಯಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಮನೋಮೂರ್ತಿ ಸಂಗೀತ ಸಂಯೋಜಿಸಲಿದ್ದು, ನಾಗೇಶ್ ಆಚಾರ್ಯ ಛಾಯಾಗ್ರಹಣ ಮಾಡಲಿದ್ದಾರೆ.