ಅಪ್ಪನಂತೆ ಮಕ್ಕಳು... ದುಬೈನಲ್ಲಿ ಹುಡುಗಿಯ ಜತೆಗಿರುವ ನಾಗಾರ್ಜುನ ಫೋಟೋ ವೈರಲ್! ವಾಸ್ತವ ಏನು?

Published on
ಈಗಾಗಲೇ, ನಟ ಅಕ್ಕಿನೇನಿ ನಾಗಾರ್ಜುನ ಅವರ ಕುಟುಂಬದಲ್ಲಿ ಒಂದು ಬಿರುಗಾಳಿ ಬೀಸಿತ್ತು. ಹೌದು, ಅವರ ಮಗ ನಟ ನಾಗಚೈತನ್ಯ ಹಾಗೂ ಪತ್ನಿ ನಟಿ ಸಮಂತಾಳ 11 ವರ್ಷದ ವಿವಾಹ ಸಂಬಂಧ ಮುರಿದು ಬಿದ್ದಿದೆ. ಇದು, ನಟ ನಾಗಾರ್ಜುನ ಅವರ ಕುಟುಂಬಕ್ಕೆ ತೀವ್ರ ನೋವು ತಂದಿತ್ತು. ಇದಕ್ಕೂ ಮುನ್ನ ನಟ ನಾಗಾರ್ಜುನ ಅವರ ಎರಡನೇ ಪುತ್ರ ನಟ ಅಖಿಲ್ ಅಕ್ಕಿನೇನಿ ಅವರ ಎಂಗೇಜ್​ಮೆಂಟ್ ಕೂಡಾ ಮುರಿದು ಬಿತ್ತು.
ಈ ನೋವುಗಳಿಂದ ಹೊರ ಬರಲು ನಾಗಾರ್ಜುನ ಅವರ ಮುಂಬರುವ ಸಿನಿಮಾ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಆದರೆ, ಇತ್ತೀಚೆಗೆ ನಾಗಾರ್ಜುನ ಅವರು ದುಬೈನಲ್ಲಿ ಒಂದು ಹುಡಗಿಯ ಜತೆಗೆ ಇರುವ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು, ಹಲವರು ನಟ ನಾಗಾರ್ಜುನ ಅವರು ಯಾರೋ ಹುಡುಗಿಯ ಜತೆಗೆ ಸುತ್ತಾಡುತ್ತಿದ್ದಾರೆ ಅಂತ ಅಭಿಮಾನಿಗಳು, ನೆಟ್ಟಿಗರು ಉಹಿಸಿಕೊಳ್ಳಲು ಆರಂಭಿಸಿದರು. ಕೆಲವರಂತೂ ಅಪ್ಪನಂತೆ ಮಕ್ಕಳು ಎಂಬ ಕಾಮೆಂಟ್​ಗಳನ್ನು ಮಾಡಲು ಆರಂಭಿಸಿದರು.
ಆದರೆ, ವಾಸ್ತವದಲ್ಲಿ ನಟ ನಾಗಾರ್ಜುನ ಅವರು ‘ಘೋಸ್ಟ್’ ಚಿತ್ರದ ಶೂಟಿಂಗ್​ನಲ್ಲಿ ಬ್ಯೂಸಿಯಾಗಿದ್ದಾರೆ. ಇನ್ನು, ಅವರ ಜತೆ ಇರೋದು ಆ ಸಿನಿಮಾದ ಹೀರೋಯಿನ್ ನಟಿ ಸೋನಲ್ ಚೌಹಾಣ್ ಎಂಬ ಮಾಹಿತಿ ಇದೆ. ನಿರ್ದೇಶಕ ಪ್ರವೀಣ್ ಅವರು ‘ಘೋಸ್ಟ್’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇನ್ನು, ಚಿತ್ರದ ಶೂಟಿಂಗ್ ದುಬೈನಲ್ಲಿ ನಡೆಯುತ್ತಿದೆ. ಸಿನಿಮಾದ ಶೂಟಿಂಗ್ ಸೆಟ್​ನಲ್ಲಿರುವಾಗ ಇವರಿಬ್ಬರ ಫೋಟೋಗಳು ವೈರಲ್​ ಆಗಿವೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net