ಲಾಕ್​ಡೌನ್​ನಲ್ಲಿ ಕೋಟೆ ಹಾಸ್ಯ

Nagaraj Kote
Published on

ಬೆಂಗಳೂರು: ಲಾಕ್​ಡೌನ್​ ಹೊತ್ತಿನಲ್ಲಿ ಹಿರಿಯ ಕಲಾವಿದ ನಾಗರಾಜ್​ ಕೋಟೆ ಒಂದೇ ನಿಮಿಷದಲ್ಲಿ ಹಾಸ್ಯದ ರಸಾಯನವನ್ನು ಉಣಬಡಿಸುತ್ತಿದ್ದಾರೆ. "ಲಾಕ್​ಡೌನ್​ ಕಾಮಿಡಿ' ಹೆಸರಿನಲ್ಲಿ ಕಾಮಿಡಿ ಕಚಗುಳಿ ಇಡುತ್ತಿದ್ದು, ಕರೊನಾ ಸಮಯದಲ್ಲಿನ ಒಂದಷ್ಟು ಟನೆಗಳನ್ನೇ ಆಧಾರವಾಗಿಸಿ ಕೊಂಡು, ಆ ಸನ್ನಿವೇಶಗಳಿಗೆ ಹಾಸ್ಯದ ಲೇಪನ ಮಾಡಿ ನಗಿಸುವ ಕಾಯಕಕ್ಕೆ ಕೈ ಹಾಕಿದ್ದಾರೆ.

ಲಾಕ್​ಡೌನ್​ ಘೋಷಣೆ ಆದ ದಿನದಿಂದ ಇಲ್ಲಿಯವರೆಗೂ ಪ್ರತಿನಿತ್ಯ ಒಂದು ನಿಮಿಷದ ವಿಡಿಯೋ ತುಣುಕನ್ನು ನಾಗರಾಜ್​ ಕೋಟೆ ೇಸ್​ಬುಕ್​ ಮತ್ತು ಯೂಟ್ಯೂಬ್​ಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈಗಾಗಲೇ 25ಕ್ಕೂ ಅಧಿಕ ವಿಡಿಯೋಗಳನ್ನು ಹಂಚಿಕೊಂಡಿದ್ದು, ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಹಾಸ್ಯ ಸೇವೆಯ ಬಗ್ಗೆ ಹೇಳಿಕೊಳ್ಳುವ ನಾಗರಾಜ್​ ಕೋಟೆ, "ಇಂಥ ಸಮಯದಲ್ಲಿ ಇದೊಂದು ಕಠಿಣ ಕೆಲಸ. ಕೆಲವರು ಆಹಾರ ಹಂಚುತ್ತಿದ್ದಾರೆ. ಇನ್ನು ಕೆಲವರು ಆಕ್ಸಿಜನ್​ ಪೂರೈಸುತ್ತಿದ್ದಾರೆ.

ನಾನು ಹಾಸ್ಯ ಕಲಾವಿದ ಆಗಿರುವುದರಿಂದ ನಗಿಸುವ ಕೆಲಸ ಮಾಡುತ್ತಿದ್ದೇನೆ. ಕರೊನಾದಿಂದ ಮಾನಸಿಕವಾಗಿ ಕುಗ್ಗಿದವರಿಗೆ ಹಾಸ್ಯದ ಮೂಲಕ ನಗು ಉಕ್ಕಿಸುವ ಕೆಲಸ ಮಾಡುತ್ತಿದ್ದೇವೆ' ಎಂದು ಮಾಹಿತಿ ನೀಡುತ್ತಿದ್ದಾರೆ. ಅಂದಹಾಗೆ, ನಾಗರಾಜ್​ ಅವರ ಲಾಕ್​ಡೌನ್​ ಕಾಮಿಡಿಗೆ ಅವರ ಪುತ್ರ ನಿಶಾಂತ್​ ಕೋಟೆ ಛಾಯಾಗ್ರಹಣ ಮಾಡಿದರೆ, ಯಶ್​ವಂತ್​ ಕೋಟೆ, ಅಭಿಷೇಕ್​, ಅನಿತಾ, ಐಶ್ವರ್ಯಾ ಮುಂತಾದವರು ಅಭಿನಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net