ಯೂಟ್ಯೂಬ್​ನಲ್ಲಿ ನಾನು ಅವನಲ್ಲ ಅವಳು

Naanu Avanalla
Published on

"ನಾನು ಅವನಲ್ಲ ಅವಳು' ಚಿತ್ರದಲ್ಲಿನ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದರು. ಆದರೆ, ವಿಜಯ್​ ಅಭಿನಯ ಹೇಗಿತ್ತು ಎಂಬ ಬಹಳಷ್ಟು ಜನ ನೋಡುವುದಕ್ಕೆ ಸಾಧ್ಯವಾಗಲಿಲ್ಲ. ಪ್ರಶಸ್ತಿ ವಿಜೇತ ಚಿತ್ರಗಳು ಬಿಡುಗಡೆಯಾಗುವುದಿಲ್ಲ ಎಂಬ ಆರೋಪಕ್ಕೆ ಉತ್ತರವಾಗಿ, ರಾಜ್ಯದ್ಯಂತ ಕೆಲವು ಚಿತ್ರಮಂದಿರಗಳಲ್ಲಿ ಚಿತ್ರವೇನೋ ಬಿಡುಗಡೆ ಆಯಿತು. ಎಷ್ಟು ಜನ ಚಿತ್ರ ನೋಡಿದರೋ ಗೊತ್ತಿಲ್ಲ. ಆಗ ಮಿಸ್​ ಆದವರು, ಈಗ ಚಿತ್ರವನ್ನು ನೋಡಬಹುದಾಗಿದೆ.

ವಿಜಯ್​ ನಿಧನದ ನಂತರ "ನಾನು ಅವನಲ್ಲ ಅವಳು' ಚಿತ್ರವನ್ನು ನೋಡಲು ಅನುವು ಮಾಡಿಕೊಡಿ ಎಂದು ಹಲವರು ಚಿತ್ರತಂಡದವರಿಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಚಿತ್ರವನ್ನು ಯೂಟ್ಯೂಬ್​ನಲ್ಲಿ ಬಿಡುಗಡೆ ಮಾಡಲಾಗಿದೆ. ಅಷ್ಟೇ ಅಲ್ಲ, ಬಿಡುಗಡೆಯಾದ ಒಂದೇ ದಿನದಲ್ಲಿ ಒಂದು ಲಕ್ಷ ವೀಕ್ಷಣೆ ಪಡೆದಿದೆ. ಈ ಕುರಿತು ಮಾತನಾಡುವ ನಿರ್ದೇಶಕ ಬಿ.ಎಸ್​. ಲಿಂಗದೇವರು, "ಚಿತ್ರವನ್ನು ನೋಡುವುದಕ್ಕೆ ಅವಕಾಶ ಮಾಡಿಕೊಡಿ ಎಂದು ಕಳೆದ ಮೂರು ದಿನಗಳಿಂದ ನೂರಾರು ೋನ್​ಕಾಲ್​ಗಳು ಮತ್ತು ಮೆಸೇಜ್​ಗಳು ಬಂದಿವೆ.

ನಾನು ಕನ್ನಡದ ಪ್ರಮುಖ ಚಾನಲ್​ನವರನ್ನು ಸಂಪರ್ಕಿಸಲು ಪ್ರಯತ್ನ ಮಾಡಿದೆ. ಆದರೆ, ಸರಿಯಾದ ಪ್ರತಿಕ್ರಿಯೆ ಸಿಗಲಿಲ್ಲ. ಇಷ್ಟೆಲ್ಲ ಸುದ್ದಿಯಾದ ಚಿತ್ರವನ್ನು ಅವರು ಪ್ರದರ್ಶನ ಮಾಡುವುದಿಲ್ಲ ಎಂದರೆ, ಏನು ಹೇಳಬೇಕೋ ಗೊತ್ತಿಲ್ಲ. ೋನ್​ ಎತ್ತಿದರೆ ಮಾತನಾಡಬಹುದು. ಆದರೆ, ಸಂಪರ್ಕಕ್ಕೇ ಸಿಗುವುದಿಲ್ಲ. ಇಂತಹ ಸಂದರ್ಭದಲ್ಲಿ ಯಾವ ವ್ಯವಹಾರವೂ ಬೇಡ, ಮೊದಲು ಜನರಿಗೆ ತಲುಪಲಿ ಎಂಬ ಉದ್ದೇಶದಿಂದ ನಿರ್ಮಾಪಕ ರವಿ ಗರಣಿ, ಚಿತ್ರವನ್ನು ಯೂಟ್ಯೂಬ್​ಗೆ ಅಪ್​ಲೋಡ್​ ಮಾಡಿಸಿದ್ದಾರೆ. ಚಿತ್ರವನ್ನು ಯಾರು ಬೇಕಾದರೂ ಉಚಿತವಾಗಿ ನೋಡಬಹುದು' ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net