'ನೀನಾ ನಾನಾ'; ನವೀನ್ ಕೃಷ್ಣ ಹೊಸ ಹಾಡು

Naveen Krishna
Published on

ಬೆಂಗಳೂರು: ಕರೊನಾ ಕುರಿತು ಈಗಾಗಲೇ ಸಾಕಷ್ಟು ಹಾಡುಗಳು ಮೂಡಿಬಂದಿವೆ. ಬಗೆಬಗೆ ಸಾಹಿತ್ಯದ, ನಾನಾ ಪರಿಕಲ್ಪನೆಗಳ ಹಾಡುಗಳನ್ನು ಕೇಳಿದ್ದೇವೆ. ಇದೀಗ ಅವೆಲ್ಲದಕ್ಕಿಂತ ಕೊಂಚ ವಿಭಿನ್ನ ಪ್ರಯತ್ನ ಮಾಡಿದ್ದಾರೆ ನಟ-ನಿರ್ದೇಶಕ ನವೀನ್ ಕೃಷ್ಣ. ವಾದ್ಯಗಳ ಬಳಕೆ ಮಾಡಿಕೊಳ್ಳದೆ, ಕೇವಲ ಬಾಯಿಂದಲೇ ವಾದ್ಯದ ರೀತಿಯ ನಾದವನ್ನು ಹೊರಡಿಸಿ ಹಾಡನ್ನು ಸೃಷ್ಟಿಸಿದ್ದಾರೆ. ‘ಏನೇ ಮಾಡು ಕರೊನಾ, ನಡಿಯಬೇಕು ಜೀವನ, ನೋಡೇ ಬಿಡೋಣ, ಇನ್ನು ನಾನಾ ಇಲ್ಲ ನೀನಾ ...’ ಎಂಬ ಸಾಹಿತ್ಯವಿರುವ ಹಾಡು ಈಗಾಗಲೇ ಸಿದ್ಧವಾಗಿದ್ದು, ಸೆ. 25ಕ್ಕೆ ನವೀನ್ ಕೃಷ್ಣ ಯೂಟ್ಯೂಬ್ ಚಾನೆಲ್​ನಲ್ಲಿ ಬಿಡುಗಡೆ ಆಗಲಿದೆ. ಅಂದಹಾಗೆ, ಈ ಹಾಡಿಗೆ ಸಾಯಿ ಸುಕನ್ಯಾ ಎಂಬುವವರು ಸಾಹಿತ್ಯ ಬರೆದಿದ್ದು, ಸಂಗೀತ ಸಂಯೋಜನೆ ಮಾಡಿ, ಧ್ವನಿಯನ್ನು ನೀಡಿರುವುದು ನವೀನ್ ಕೃಷ್ಣ.

‘ಕನ್ನಡದಲ್ಲಿ ಈ ರೀತಿಯ ಪ್ರಯತ್ನ ಇದೇ ಮೊದಲೇನಲ್ಲ. ಈ ಹಿಂದೆ ಹಳೇ ಹಾಡಿಗೆ ಈ ಪ್ರಯೋಗ ಮಾಡಲಾಗಿತ್ತು. ನಾವಿಲ್ಲಿ, ಹೊಸ ಟ್ಯೂನ್​ಗೆ ಸಾಹಿತ್ಯ ಬರೆದು ಈ ಹಾಡು ಮಾಡಿದ್ದೇವೆ. ಮೂರೂವರೆ ನಿಮಿಷದ ಹಾಡು ಇದಾಗಿದೆ’ ಎನ್ನುತ್ತಾರೆ ನವೀನ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net