ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಹೋದರ ಕೋವಿಡ್​ಗೆ ಬಲಿ; ಕಿರಣ್​ ಜನ್ಯ ಇನ್ನಿಲ್ಲ...

Arjun F
Published on

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಮೇಲಿಂದ ಮೇಲೆ ಕೋವಿಡ್​ ಸಾವಿನ ಸುದ್ದಿಗಳು ಬಂದೆರಗುತ್ತಿದ್ದು, ಸಂಬಂಧಪಟ್ಟವರು, ಸಿನಿಮಾ ಕ್ಷೇತ್ರದವರನ್ನಷ್ಟೇ ಅಲ್ಲದೆ ಸಿನಿಪ್ರಿಯರನ್ನು ಕೂಡ ನೊಂದುಕೊಳ್ಳುವಂತೆ ಮಾಡುತ್ತಿದೆ. ಇಂದು ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಸಹೋದರ ಕೋವಿಡ್-19 ಸೋಂಕಿನಿಂದಾಗಿ ಮೃತಪಟ್ಟಿದ್ದು, ಚಿತ್ರರಂಗಕ್ಕೆ ಮತ್ತೊಂದು ಕರೊನಾ ಆಘಾತ ಉಂಟಾಗಿದೆ.

ಸಹೋದರ ಕಿರಣ್​ ಜನ್ಯ (49) ಕೋವಿಡ್ ಸೋಂಕಿಗೆ ಬಲಿಯಾದ್ದನ್ನು ಖುದ್ದು ಅರ್ಜುನ್ ಜನ್ಯ ಹೇಳಿಕೊಂಡಿದ್ದಾರೆ. ಕೋವಿಡ್​ನಿಂದಾಗಿ ನಾನು ಸಹೋದರನನ್ನು ಕಳೆದುಕೊಂಡಿದ್ದೇನೆ ಎಂಬ ಮಾಹಿತಿ ಹಂಚಿಕೊಂಡಿರುವ ಅರ್ಜುನ್, 'ಕಿರಣ್ ನೀನಿಲ್ಲದ ನನ್ನ ನೋವನ್ನು ಹೇಗೆ ವ್ಯಕ್ತಪಡಿಸಬೇಕು ಅಂತಲೇ ತಿಳಿಯುತ್ತಿಲ್ಲ. ನನ್ನ ಉಸಿರು ಇರುವವರೆಗೂ ನೀನು ನನ್ನ ಉಸಿರಿನಲ್ಲಿರುತ್ತಿ' ಎಂಬುದಾಗಿ ದುಃಖ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net