ಕಾವ್ಯ ಮಾರನ್​ ಕೈಹಿಡಿಯುವ ಖುಷಿಯಲ್ಲಿ 450 ಕೋಟಿ ರೂ. ಚಿತ್ರಕ್ಕೆ ಕೈಕೊಟ್ಟ ಅನಿರುದ್ಧ್​! ಫ್ಯಾನ್ಸ್ ಶಾಕ್​ | Anirudh Ravichander

Anirudh Ravichander
ಕಾವ್ಯ ಮಾರನ್​ ಕೈಹಿಡಿಯುವ ಖುಷಿಯಲ್ಲಿ 450 ಕೋಟಿ ರೂ. ಚಿತ್ರಕ್ಕೆ ಕೈಕೊಟ್ಟ ಅನಿರುದ್ಧ್​! ಫ್ಯಾನ್ಸ್ ಶಾಕ್​ | Anirudh Ravichander
Published on: 

ಚೆನ್ನೈ: ದಕ್ಷಿಣ ಭಾರತ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸನ್​ರೈಸರ್ಸ್ ಹೈದರಾಬಾದ್ (SRH) ಐಪಿಎಲ್ ತಂಡದ ಮುಖ್ಯಸ್ಥೆ ಮತ್ತು ಸನ್​ ಪಿಕ್ಚರ್ಸ್​ ಮಾಲೀಕರ ಪುತ್ರಿ ಕಾವ್ಯಾ ಮಾರನ್ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮದುವೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಅನಿರುದ್ಧ್​ ಶಾಕಿಂಗ್ ನಿರ್ಧಾರವನ್ನು ಕೈಗೊಂಡಿದ್ದಾರೆ.

ನವೆಂಬರ್​ 11ರಂದು ಗ್ರೀಸ್‌ನ ಸುಂದರ ತಾಣದಲ್ಲಿ ಈ ಜೋಡಿಯ ವಿವಾಹ ಮಹೋತ್ಸವ ನಡೆಯಲಿದ್ದು, ಬಳಿಕ ನವೆಂಬರ್ 21 ರಂದು ತಮಿಳುನಾಡಿನ ಚೆನ್ನೈನ ಪಂಚತಾರಾ ಹೋಟೆಲ್ ಒಂದರಲ್ಲಿ ಅದ್ಧೂರಿ ರಿಸೆಪ್ಷನ್ ಆಯೋಜಿಸಲಾಗಿದೆ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ. ಇದೀಗ ಈ ರಿಸೆಪ್ಷನ್‌ನ ಆಹ್ವಾನ ಪತ್ರಿಕೆ ಹಾಗೂ ಅದರಲ್ಲಿರುವ ವಿವಿಐಪಿ ಅತಿಥಿಗಳ ಪಟ್ಟಿ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಗಣ್ಯಾತಿ ಗಣ್ಯರು ಎಂಟ್ರಿ!

ವರದಿಗಳ ಪ್ರಕಾರ, ಈ ರಿಸೆಪ್ಷನ್‌ಗೆ ದೇಶದ ಗಣ್ಯಾತಿಗಣ್ಯ ರಾಜಕಾರಣಿಗಳು ಹಾಗೂ ಸಿನಿರಂಗದ ಅಗ್ರಗಣ್ಯ ತಾರೆಯರಿಗೆ ಆಹ್ವಾನ ನೀಡಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೆಸರುಗಳು ಅತಿಥಿಗಳ ಪಟ್ಟಿಯಲ್ಲಿವೆ. ಇದಲ್ಲದೆ, ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್, ಮಾಜಿ ಸಿಎಂ ಎಂ.ಕೆ. ಸ್ಟಾಲಿನ್, ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರುಗಳಿಗೂ ಆಹ್ವಾನ ತಲುಪಿದೆ ಎನ್ನಲಾಗಿದೆ.

ಸ್ಟಾರ್​ ಹೀರೋ ಚಿತ್ರದಿಂದ ಎಕ್ಸಿಟ್​

ಕ್ರಿಕೆಟ್ ಹಾಗೂ ಸಿನಿರಂಗದ ಸೂಪರ್ ಸ್ಟಾರ್ ಜೋಡಿಯ ಈ ಕಲ್ಯಾಣ ಮಹೋತ್ಸವವು ಭಾರತೀಯ ರಾಜಕೀಯ ಮತ್ತು ಸಿನಿಮಾ ರಂಗದ ಪ್ರಮುಖ ಗಣ್ಯರ ಅಪರೂಪದ ಸಮಾಗಮಕ್ಕೆ ವೇದಿಕೆಯಾಗಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ. ಜೈಲರ್​, ಬೀಸ್ಟ್​, ಜನ ನಾಯಗನ್​, ಜೈಲರ್​ 2 ಚಿತ್ರಗಳಲ್ಲಿ ಮೈಜುಮ್​ ಎನಿಸುವ ಬಿಜಿಎಂ ಮತ್ತು ಹಾಡುಗಳನ್ನು ಕೊಟ್ಟಿರುವ ಅನಿರುದ್ಧ್​, ಅದಾಗಲೇ ಕೈಗೆತ್ತಿಕೊಂಡಿದ್ದ 450 ಕೋಟಿ ರೂ. ಬಿಗ್ ಬಜೆಟ್​ ಚಿತ್ರವೊಂದನ್ನು ಮದುವೆಯ ಕಾರಣಕ್ಕೆ ಬಿಟ್ಟು ಹೊರ ನಡೆದಿರುವುದು ಸದ್ಯ ಸಿನಿಪ್ರಿಯನ್ನು ಅಚ್ಚರಿಗೊಳಿಸಿದೆ.

Also Read
ರಕ್ತ ಹರಿದು ಉಸಿರು ಚೆಲ್ಲುವವರೆಗೂ ಕುಣಿಸುತ್ತಿತ್ತು ಈ ಕಾಯಿಲೆ! ಕೋವಿಡ್​ಗಿಂತಲೂ ಮಹಾಮಾರಿ 1518ರ ಈ ಡ್ಯಾನ್ಸಿಂಗ್​ ಪ್ಲೇಗ್ | Dancing plague
Anirudh Ravichander

ತಮಿಳು ಮತ್ತು ತೆಲುಗು ಮಾತ್ರವಲ್ಲದೆ, ಹಿಂದಿ ಭಾಷೆಯ ಬ್ಲಾಕ್‌ಬಸ್ಟರ್ ಚಲನಚಿತ್ರಗಳಿಗೂ ಸಂಗೀತ ಸಂಯೋಜಿಸುತ್ತಿರುವ ಅನಿರುದ್ಧ್,​ ಬಾಲಿವುಡ್​ನ ಕಿಂಗ್​ ಖಾನ್​, ನಟ ಶಾರುಖ್ ಖಾನ್ ಅವರ ಬಹುನಿರೀಕ್ಷಿತ ಹಿಂದಿ ಸಿನಿಮಾ 'ಕಿಂಗ್'ಗೆ ಸಂಗೀತ ಮಾಡಿಕೊಡುವುದಾಗಿ ಒಪ್ಪಿಕೊಂಡಿದ್ದರು. ಆದರೆ, ಕಾವ್ಯ ಮಾರನ್​ ಜತೆ ಮದುವೆ ಫಿಕ್ಸ್ ಆದ ಹಿನ್ನೆಲೆ ಅನಿರುದ್ಧ್, ಇದೀಗ ದೊಡ್ಡ ಪ್ರಾಜೆಕ್ಟ್​ನಿಂದ ಎಕ್ಸಿಟ್​ ಆಗಿದ್ದಾರೆ. ಇದು ಶಾರೂಖ್ ಮತ್ತು ಅನಿರುದ್ಧ್​ ಅಭಿಮಾನಿಗಳಿಗೆ ಶಾಕ್​ ನೀಡಿದೆ.

ಅನಿರುದ್ಧ್ ಅವರ ದಿಢೀರ್​ ಎಕ್ಸಿಟ್​ ಬೆನ್ನಲ್ಲೇ ಇದೀಗ ಸಚಿನ್-ಜಿಗರ್ ಜೋಡಿಯು 'ಕಿಂಗ್' ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲು ಮುಂದೆ ಬಂದಿದೆ ಎಂದು ಇತ್ತೀಚಿನ ಸಿನಿ ವರದಿಗಳು ತಿಳಿಸಿವೆ,(ಏಜೆನ್ಸೀಸ್).