ಪುನೀತ ಪರ್ವದಲ್ಲಿ ತಾರೆಯರ ಸಂಗಮ

Gandhada gudi
Published on

ಬೆಂಗಳೂರು: ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಸಿನಿಮಾ ‘ಗಂಧದ ಗುಡಿ’. ಕೆಲವು ದಿನಗಳ ಹಿಂದಷ್ಟೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಯೂಟ್ಯೂಬ್​ನಲ್ಲಿ ಒಂದು ಕೋಟಿಗೂ ಅಧಿಕ ಬಾರಿ ವೀಕ್ಷಣೆಗೊಂಡು ವೈರಲ್ ಆಗಿದೆ. ಅಮೋಘವರ್ಷ ನಿರ್ದೇಶನದ ಈ ಚಿತ್ರವನ್ನು ಅಶ್ವಿನಿ ಪುನೀತ್ ರಾಜಕುಮಾರ್ ನಿರ್ವಿುಸಿದ್ದಾರೆ. ಚಿತ್ರದ ಪ್ರಿ-ರಿಲೀಸ್ ‘ಪುನೀತ ಪರ್ವ’ ಕಾರ್ಯಕ್ರಮವನ್ನು ಇದೇ 21ರಂದು ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಹಲವಾರು ತಾರೆಯರು ಭಾಗವಹಿಸುವ ನಿರೀಕ್ಷೆಯಿದೆ.

ಮೂಲಗಳ ಪ್ರಕಾರ ತಮಿಳು ನಟರಾದ ಕಮಲ್ ಹಾಸನ್, ಸೂರ್ಯ, ಪ್ರಭುದೇವ, ತೆಲುಗು ನಟರಾದ ನಂದಮೂರಿ ಬಾಲಕೃಷ್ಣ, ರಾಣಾ ದಗ್ಗುಬಾಟಿ, ಕನ್ನಡದ ಸ್ಟಾರ್​ಗಳಾದ ಯಶ್, ಕಿಚ್ಚ ಸುದೀಪ್, ಅನಂತ್ ನಾಗ್, ರಮ್ಯಾ, ರವಿಚಂದ್ರನ್, ಉಪೇಂದ್ರ, ಧ್ರುವ ಸರ್ಜಾ, ಗಣೇಶ್, ದೇವರಾಜ್, ಡಾಲಿ ಧನಂಜಯ, ದುನಿಯಾ ವಿಜಯ್, ಶ್ರೀಮುರಳಿ, ರಕ್ಷಿತ್ ಶೆಟ್ಟಿ, ರಮೇಶ್ ಅರವಿಂದ್, ಜಗ್ಗೇಶ್, ಸಾಯಿ ಕುಮಾರ್, ಶಶಿಕುಮಾರ್, ರಿಷಭ್ ಶೆಟ್ಟಿ, ಡಾರ್ಲಿಂಗ್ ಕೃಷ್ಣ, ಸೃಜನ್ ಲೋಕೇಶ್, ನಿಖಿಲ್ ಕುಮಾರಸ್ವಾಮಿ, ಶರಣ್, ನಿನಾಸಂ ಸತೀಶ್ ಸೇರಿದಂತೆ ಸ್ಯಾಂಡಲ್​ವುಡ್​ನ ಬಹುತೇಕ ಎಲ್ಲ ಕಲಾವಿದರು, ತಂತ್ರಜ್ಞರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ನೂರಾರು ಸಂಖ್ಯೆಯಲ್ಲಿ ಸೆಲೆಬ್ರಿಟಿಗಳು, ಸಾವಿರಾರು ಅಭಿಮಾನಿಗಳ ನಡುವೆ ‘ಪುನೀತ ಪರ್ವ’ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. 500 ವಿವಿಐಪಿ, 5000 ವಿಐಪಿ ಜತೆಗೆ ಇಪ್ಪತ್ತು ಸಾವಿರ ಜನ ಸಾರ್ವಜನಿಕರಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಈಗಾಗಲೇ ಅರಮನೆ ಮೈದಾನದಲ್ಲಿ ವೇದಿಕೆ ಸಿದ್ಧವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net