Mrunal Thakur: ತನ್ನ ಅಂದ ಚೆಂದದ ಜತೆಗೆ ವಿಭಿನ್ನ ಶೈಲಿಯ ಅಭಿನಯದ ಮೂಲಕ ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಸಿನಿಮಾಗಳಲ್ಲಿಯೂ ಛಾಪನ್ನು ಮೂಡಿಸಿರುವ ನಟಿ ಎಂದರೆ ಅದು ಮೃಣಾಲ್ ಠಾಕೂರ್ ಆಗಿದ್ದಾರೆ.
ಇತ್ತೀಚೆಗೆ ನಟಿ, ಕೆಲವೇ ದಿನಗಳಲ್ಲಿ ಬರಲಿರುವ ದೀಪಾವಳಿ ಹಬ್ಬದ ಪ್ರಯುಕ್ತ ಫೋಟೊಶೂಟ್ ನಡೆಸಿದ್ದಾರೆ. ಕಪ್ಪು ಬಣ್ಣದ ಡ್ರೆಸ್ ತೊಟ್ಟಿರುವ ನಟಿ, ಕೆಲ ಫೋಟೊಗಳನ್ನು ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.