

ಮುಂಬೈ: ಸೀತಾ ರಾಮಂ ಸಿನಿಮಾ ಮೂಲಕ ಸೀತಾ ಮಹಾಲಕ್ಷ್ಮೀಯಾಗಿ ಸಾಂಪ್ರದಾಯಿಕ ಪಾತ್ರದಲ್ಲಿ ಎಲ್ಲರ ಮನಸ್ಸು ಗೆದ್ದಿರುವ ನಟಿ ಮೃನಾಲ್ ಠಾಕೂರ್, ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಸೀತಾ ರಾಮಂ ಸಿನಿಮಾ ಯಶಸ್ಸಿನ ಬಳಿಕ ಮೃನಾಲ್ ಅವರ ಅದೃಷ್ಟವೇ ಬದಲಾಗಿದ್ದು, ನಾನಿ, ವಿಜಯ್ ದೇವರಕೊಂಡ ಸೇರಿದಂತೆ ಅನೇಕ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಸ್ಟಾರ್ ನಟಿಯರ ಸಾಲಿಗೆ ಮೃನಾಲ್ ಸೇರಿಕೊಂಡಿದ್ದಾರೆ.
ಬೆಳ್ಳಿ ಪರದೆಗೆ ಕಾಲಿಡುವ ಮುನ್ನ ಬಾಲಿವುಡ್ ಧಾರಾವಾಹಿಗಳ ಮೂಲಕ ಮೃನಾಲ್ ಹೆಚ್ಚು ಸದ್ದು ಮಾಡಿದ್ದರು. ತನ್ನ ಗ್ಲಾಮರ್ ಶೋ ಜೊತೆಗೆ ತನ್ನ ಅದ್ಭುತ ನಟನೆಯಿಂದ ಎಲ್ಲರ ಗಮನ ಸೆಳೆದರು. ಇದರಿಂದ ಬಾಲಿವುಡ್ನಲ್ಲಿ ಅವಕಾಶಗಳು ಸಿಕ್ಕವು. ಅಲ್ಲದೆ, ಮಲಯಾಳಂ ಹೀರೋ ದುಲ್ಕರ್ ಸಲ್ಮಾನ್ ಅವರೊಂದಿಗೆ ತೆಲುಗಿನಲ್ಲಿ ನಟಿಸಿದ ಮೊದಲ ಚಿತ್ರ ಸೀತಾ ರಾಮಂ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿತು. ಮೊದಲ ಚಿತ್ರದಲ್ಲೇ ಮೃನಾಲ್ ಪ್ರೇಕ್ಷಕರ ಹೃದಯವನ್ನು ಗೆದ್ದರು. ಸೀತೆಯ ಪಾತ್ರದಲ್ಲಿ ನಟಿಸಿ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದಾರೆ.
ಈ ಚಿತ್ರದ ಯಶಸ್ಸಿನ ಬಳಿಕ ಮೃನಾಲ್ ಅವರಿಗೆ ಆಫರ್‌ಗಳ ಸುರಿಮಳೆ ಹರಿದುಬರುತ್ತಿವೆ. ನಾನಿ ನಾಯಕನಾಗಿ ನಟಿಸಿರುವ ಹಾಯ್ ನನ್ನ ಚಿತ್ರದಲ್ಲಿ ಅವಕಾಶ ಸಿಕ್ಕಿತು. ಈ ಚಿತ್ರ ಸೂಪರ್ ಡೂಪರ್ ಹಿಟ್ ಆಯಿತು. ಇದಾದ ನಂತರ ವಿಜಯ್ ದೇವರಕೊಂಡ ಅಭಿನಯದ “ಫ್ಯಾಮಿಲಿ ಸ್ಟಾರ್” ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾ ಫ್ಲಾಪ್ ಆದ ಹಿನ್ನೆಲೆಯಲ್ಲಿ ಸಿನಿಮಾಗಳಿಂದ ಮೃನಾಲ್ ಕೊಂಚ ಬ್ರೇಕ್ ತೆಗೆದುಕೊಂಡಿದ್ದಾರೆ. ಆದಾಗ್ಯೂ, ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ ಮತ್ತು ಅಭಿಮಾನಿಗಳ ಜತೆ ನಿರಂತರ ಸಂಪರ್ಕದಲ್ಲಿ ಇರುತ್ತಾರೆ. ತನ್ನ ಮನಮೋಹಕ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿರುತ್ತಾರೆ.
ಇದೀಗ ಮೃನಾಲ್ ಅವರು ವ್ಯಕ್ತಿಯೊಬ್ಬರ ಜತೆಗಿರುವ ಫೋಟೋವನ್ನು ಇತ್ತೀಚೆಗಷ್ಟೇ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದರು. ಉತ್ತಮ ಸ್ನೇಹಿತ ಮತ್ತು ಅದ್ಭುತ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳು. ಈ ದಿನ ಪ್ರೀತಿ, ನಗು ಮತ್ತು ನಿಮ್ಮ ನೆಚ್ಚಿನ ವಿಷಯಗಳಿಂದಲೇ ತುಂಬಿರಲಿ. ನಿನ್ನ ಸ್ನೇಹ ಮತ್ತು ನೀನು ನನಗೆ ನೀಡಿದ ಬೆಂಬಲಕ್ಕೆ ನಾನು ಮನಸೋತಿದ್ದೇನೆ. ಮತ್ತೊಂದು ಅತ್ಯುತ್ತಮ ವರ್ಷ ನಿನ್ನದಾಗಲಿ. ಈ ವರ್ಷ ಸಂತೋಷ, ಯಶಸ್ಸು ಮತ್ತು ಸಂಭ್ರಮಿಸಲು ಮತ್ತಷ್ಟು ಕಾರಣಗಳು ನಿನ್ನ ಅರಸಿ ಬರಲಿ. ಈ ವಿಶೇಷ ದಿನದಲ್ಲಿ ನಿನಗೆ ಶುಭಕೋರುತ್ತೇನೆ ಮತ್ತು ಚೆನ್ನೈನಲ್ಲಿ ನಾಳೆ ಭೇಟಿಯಾಗೋಣ. ಸಂಭ್ರಮಾಚರಣೆ ಮಾಡಲು ಕಾಯಲಾಗದು ಎಂದು ಮೃನಾಲ್ ಬರೆದುಕೊಂಡಿದ್ದರು.
ಇದೀಗ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದನ್ನು ನೋಡಿದ ಅಭಿಮಾನಿಗಳು ಆ ಫೋಟೋದಲ್ಲಿರುವ ವ್ಯಕ್ತಿ ಯಾರೆಂದು ಕೇಳಲು ಆರಂಭಿಸಿದ್ದಾರೆ. ಮೃನಾಲ್ ಮತ್ತು ಆ ವ್ಯಕ್ತಿ ನಡುವಿನ ಸಂಬಂಧ ಏನೆಂದು ಕೇಳುತ್ತಿದ್ದಾರೆ. ಆಕೆಯ ಬರೆದಿರುವ ಮೆಸೇಜ್ ನೋಡಿ ಬಹುಶಃ ಮೃನಾಲ್ ಅವರ ಬಾಯ್ಫ್ರೆಂಡ್ ಇರಬಹುದೆಂದು ನೆಟ್ಟಿಗರು ಊಹಿಸಿದ್ದಾರೆ. ಇದಕ್ಕೆ ಮೃನಾಲ್ ಅವರೇ ಉತ್ತರ ಕೊಡಬೇಕಿದೆ. (ಏಜೆನ್ಸಿಸ್)