

ಫೆ. 24ಕ್ಕೆ ಬಿಡುಗಡೆಯಾಗಬೇಕಿದ್ದ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಚಿತ್ರವು ಕರೊನಾ ಭಯದಿಂದ ಮುಂದೂಡಲ್ಪಡುತ್ತಿದ್ದಂತೆ, ಅದರ ಮರುದಿನ ಇನ್ನೊಂದು ಪ್ಯಾನ್ ಇಂಡಿಯಾ ಚಿತ್ರದ ಬಿಡುಗಡೆಯ ಘೋಷಣೆಯಾಗಿದೆ. ಅದೇ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಗಂಗೂಬಾಯಿ ಕಥೈವಾಡಿ’.
ಎಲ್ಲ ಅಂದುಕೊಂಡಂತೆ ಆಗಿದ್ದರೆ, ಆಲಿಯಾ ಭಟ್ ಅಭಿನಯದ ‘ಗಂಗೂಬಾಯಿ ಕಥೈವಾಡಿ’ ಜ.6ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ, ಆ ಸಂದರ್ಭದಲ್ಲಿ ಕರೊನಾ ಕೇಸ್ಗಳ ಸಂಖ್ಯೆ ಹೆಚ್ಚಿದ್ದ ಕಾರಣ, ಚಿತ್ರವನ್ನು ಮುಂದೂಡಲಾಗಿತ್ತು.
ಈಗ ಫೆ. 25ರಂದು ಚಿತ್ರ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಈ ಚಿತ್ರದಲ್ಲಿ ಆಲಿಯಾ ಭಟ್ ಜತೆಗೆ ಅಜಯ್ ದೇವಗನ್, ಹ್ಯೂಮಾ ಖುರೇಷಿ ಮುಂತಾದವರು ನಟಿಸಿದ್ದಾರೆ. -ಏಜೆನ್ಸೀಸ್