

ಬಾಲಿವುಡ್ನಲ್ಲೀಗ ಮದುವೆ ಸೀಸನ್ ಶುರುವಾಗಿದೆ. ಇತ್ತೀಚೆಗಷ್ಟೇ, ರಾಜಕುಮಾರ್ ರಾವ್ ಮತ್ತು ಪತ್ರಲೇಖಾ ಮದುವೆಯಾಗಿದೆ. ಡಿಸೆಂಬರ್ನಲ್ಲಿ ಕತ್ರಿನಾ-ವಿಕ್ಕಿ ಮದುವೆಗೆ ಈಗಾಗಲೇ ದಿನಾಂಕ ನಿಕ್ಕಿಯಾಗಿದೆ. ಡಿಸೆಂಬರ್ನಲ್ಲೇ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆ ನಡೆಯಲಿದೆ ಎಂದು ಹೇಳಲಾಗಿದೆ.
ಹೀಗಿರುವಾಗಲೇ, ಬಾಲಿವುಡ್ನ ಹಾಟ್ ಬೆಡಗಿ ಮತ್ತು ‘ಕೆಜಿಎಫ್’ ಚಿತ್ರದ ಹಿಂದಿ ಅವತರಣಿಕೆಯ ಒಂದು ಹಾಡಿನಲ್ಲಿ ಕಾಣಿಸಿಕೊಂಡು ಸಾಕಷ್ಟು ಸುದ್ದಿಯಾದ ಮೌನಿ ರಾಯ್ ಸಹ ಸಪ್ತಪದಿ ತುಳಿಯಲು ಸಿದ್ಧರಾಗಿದ್ದಾರೆ. ಬಹುಕಾಲದ ಗೆಳೆಯ ಸೂರಜ್ ನಂಬಿಯಾರ್ ಅವರನ್ನು ಮೌನಿ ವರಿಸಲಿದ್ದಾರೆ. ಇವರಿಬ್ಬರು ಈ ವರ್ಷ ಮದುವೆಯಾಗಾಗುತ್ತಾರೆ ಎಂಬ ಸುದ್ದಿ ಕಳೆದ ಫೆಬ್ರವರಿಯಿಂದ ಕೇಳಿಬರುತ್ತಲೇ ಇತ್ತು. ಈ ಈ ವಿಷಯವಾಗಿ ಮಹತ್ವದ ವಿಷಯವೊಂದು ಕೇಳಿಬರುತ್ತಿದೆ.
ಹಾಗಾದರೆ, ಈ ಜೋಡಿಯ ಮದುವೆ ಯಾವಾಗ? ಸದ್ಯದ ಪ್ಲಾನ್ ಪ್ರಕಾರ 2022ರ ಜನವರಿ 26 ಮತ್ತು 27ಕ್ಕೆ ಮದುವೆ ನಡೆಯಲಿದೆಯಂತೆ. -ಏಜೆನ್ಸೀಸ್