ನೀನೇ ಬೇಕು ಅಮ್ಮ ಎನ್ನುವ ಹಾಡನ್ನು ಇದೇ ಸಿನಿಮಾಕ್ಕಾಗಿ ಡಾಲಿ ಧನಂಜಯ್ ಅವರು ಬರೆದಿದ್ದರು. ಈ ಬಗ್ಗೆ ಅವರು ಫೇಸ್ಬುಕ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.ಈ ಸಿನಿಮಾದ ಅಮ್ಮನ ಹಾಡು, ನೀನೆ ಬರೀಬೇಕು ಅಂದ ಪೂರ್ಣ. “ಟಗರುಪಲ್ಯ” ನಂತರ ಹಾಡು ಬರೆಯೋಕೆ ಆಗಿರಲಿಲ್ಲ. ಮನಸ್ಸು ಕ್ರಿಯೇಟಿವಿ ಝೋನ್ ಇಂದ ದೂರ ಆಗಿ , ನಿರ್ಮಾಣ, ವ್ಯವಹಾರಗಳಲ್ಲಿ, ಬದುಕಿನ ಗೋಜಲುಗಳಲ್ಲಿ, ಬೇರೆ ಖುಷಿಗಳಲ್ಲಿ ಕಳೆದು ಹೋಗಿತ್ತು. ಮತ್ತೆ ಬರೆಯೋಕೆ ಆಗತ್ತ ಅನ್ನೋ ಯೋಚನೆಲೆ ಶುರು ಮಾಡಿದೆ. ಸಿಂಪಲ್ ಆಗಿ ಏನೋ ಬರೆಯುವ ಪ್ರಯತ್ನ ಮಾಡಿದ್ದೇನೆ. ಅಮ್ಮನ ಬಗ್ಗೆ ಏನ್ ಬರೆದ್ರು, ಎಷ್ಟ್ ಬರೆದ್ರು ಕಮ್ಮಿನೆ. ಓದಿ, ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ ಎಂದು ಮೇ10ರ ತಾಯಂದಿರ ದಿನಕ್ಕಾಗಿ ಈ ಹಾಡನ್ನು ಹಂಚಿಕೊಂಡಿದ್ದರು, (ಏಜೆನ್ಸೀಸ್).