ಅಮ್ಮನೇ ಸ್ಪೂರ್ತಿ

Asha Bhatt
Published on

ಇಂದು ಅಮ್ಮಂದಿರ ದಿನ. ತಾಯ್ತನವನ್ನು ಸಂಭ್ರಮಿಸುವ ದಿನ. ಇದಕ್ಕೆ ಚಂದನವನದ ತಾರೆಯರು ಹೊರತಲ್ಲ. ಹಾಗೆ ನೋಡಿದರೆ, ಹಲವು ನಟಿಯರಿಗೆ ಅವರ ಅಮ್ಮಂದಿರೇ ಬೆಸ್ಟ್ ಫ್ರೆಂಡ್ಸ್. ಏಕೆಂದರೆ, ಮಕ್ಕಳ ಜತೆಗೆ ಚಿತ್ರೀಕರಣಕ್ಕೆ ಬರುವುದರ ಜತೆಗೆ, ಅವರ ಬೇಕು-ಬೇಡಗಳನ್ನು ನೋಡಿಕೊಳ್ಳುವುದೇ ತಾಯಂದಿರು. ಹೀಗೆ ಸಲಹುವ ತಾಯಂದಿರ ಬಗ್ಗೆ ನಮ್ಮ ಸ್ಯಾಂಡಲ್​ವುಡ್​ನ ನಟಿಯರು ಏನಂತಾರೆ.

ನನಗೆ ನಿಜವಾಗಲೂ ದೊಡ್ಡ ಸ್ಪೂರ್ತಿ ಎಂದರೆ ನಮ್ಮಮ್ಮ. ಯಾವತ್ತೂ ಕೊರತೆ ಇಲ್ಲದೆ ನನ್ನ ಮತ್ತು ನನ್ನಕ್ಕನನ್ನು ಬೆಳೆಸಿದವರು ಅವರು. ಅವರು ಶಿಸ್ತು ಮತ್ತು ಸ್ನೇಹದ ಅದ್ಭುತ ಕಾಂಬಿನೇಶನ್ ಎಂದರೆ ತಪ್ಪಿಲ್ಲ. ಇನ್ನು ನಾನು ಮಾಡಲಿಂಗ್ ಮತ್ತು ಚಿತ್ರರಂಗಕ್ಕೆ ಬಂದಿದ್ದಿಕ್ಕೆ ಮುಖ್ಯ ಕಾರಣವೇ ನಮ್ಮಮ್ಮ. ಅವರು ನನ್ನ ಜೀವನದಲ್ಲಿ ದೊಡ್ಡ ಪಿಲ್ಲರ್. ಅವರು ಇನ್ನೊಂದು ಸ್ಪೆಷಾಲಿಟಿ ಅಂದರೆ, ಅವರು ಯಾವತ್ತೂ ಬರೀ ಒಂದು ವಿಷಯಕ್ಕೆ ಮಾತ್ರ ಒತ್ತು ಕೊಡಲಿಲ್ಲ. ಒಟ್ಟಾರೆ ಬೆಳವಣಿಗೆ ಬಗ್ಗೆ ಹೆಚ್ಚು ಒತ್ತು ಕೊಟ್ಟರು. ಅವರ ಸಪೋರ್ಟ್ ಇಲ್ಲದಿದ್ದರೆ, ನಾನು ಇಷ್ಟು ದೂರ ಬರೋದಕ್ಕೆ ಸಾಧ್ಯವೇ ಇಲ್ಲ. | ಆಶಾ ಭಟ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net