ತಾರೆಯರ ಅಮ್ಮಂದಿರ ದಿನ: ನನ್ನ ಏಳಿಗೆಯಲ್ಲಿ ಅಮ್ಮ ಇದ್ದಾಳೆ

amma 2
Published on

ಚಿಕ್ಕಂದಿನಲ್ಲಿ ನಾನು ಕ್ರೀಡೆಯಲ್ಲಿ ಜಾಸ್ತಿ ತೊಡಗಿಸಿಕೊಳ್ಳುತ್ತಿದ್ದೆ. ಅದರಲ್ಲೂ ಸ್ಮಿಮ್ಮಿಂಗ್​ನಲ್ಲಿ ಮುಂದು. ಆವಾಗಿನಿಂದಲೂ ಅಮ್ಮ ನನ್ನ ಜತೆಯಲ್ಲೇ ಇರುತ್ತಿದ್ದರು. ನಮ್ಮ ಮನೆ ಅಕ್ಕಪಕ್ಕದವರೆಲ್ಲ ‘ಏನು ಬರೀ ಮಕ್ಕಳ ಜತೆಯಲ್ಲೇ ಇರುತ್ತೀಯಲ್ಲ ಬೇಜಾರಾಗಲ್ವಾ?’ ಎನ್ನುತ್ತಿದ್ದರು.

ಈಗಲೂ ಅಮ್ಮ ನನ್ನ ಜತೆಯಲ್ಲೇ ಇರುತ್ತಾರೆ. ಸಿನಿಮಾ ಶೂಟಿಂಗ್ ಇದ್ದಾಗಲೂ ನನ್ನ ಜತೆಯಲ್ಲೇ ಇರುತ್ತಾರೆ. ಒಟ್ಟಿನಲ್ಲಿ ನನ್ನ ಕರಿಯರ್​ನ ಪ್ರತಿ ಸೋಲು ಗೆಲುವಿನಲ್ಲೂ ಅಮ್ಮ ಜತೆಗಿದ್ದಾರೆ. ಮುಂದೆಯೂ ಇರುತ್ತಾರೆ. ಅದೇ ರೀತಿ ಒಬ್ಬ ವ್ಯಕ್ತಿಯನ್ನು ನೀವು ಇಷ್ಟಪಡುತ್ತೀರಿ ಎಂದರೆ ಅದು ಒಂದೇ ದಿನಕ್ಕೆ ಸೀಮಿತವಾಗಬಾರದು. ಪ್ರತಿನಿತ್ಯ ಆ ಪ್ರೀತಿಯನ್ನು ತೋರಿಸುತ್ತಲೇ ಇರಬೇಕು.

| ಮಿಲನಾ ನಾಗರಾಜ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net