ಪೊಲೀಸ್​ ಠಾಣೆ ಮೆಟ್ಟಿಲೇರಿದ ಕುಂಭಮೇಳ ವೈರಲ್​ ಬೆಡಗಿ! ಬೆಕ್ಕಿನ ಕಣ್ಣಿನ ಸುಂದರಿಗೆ ಹೆತ್ತವರಿಂದಲೇ ಕಾಟ | Monalisa

ಮಹಾಕುಂಭಮೇಳದಲ್ಲಿ ವೈರಲ್​ ಆಗಿದ್ದ ಮೊನಾಲಿಸಾ
ಮಹಾಕುಂಭಮೇಳದಲ್ಲಿ ವೈರಲ್​ ಆಗಿದ್ದ ಮೊನಾಲಿಸಾ
Published on

ಪ್ರಮುಖ ಮುಖ್ಯಾಂಶಗಳು

  • 2025ರಲ್ಲಿ ಮಹಾಕುಂಭ ಮೇಳದಲ್ಲಿ ವೈರಲ್ ಆದ ಬೆಡಗಿ ಮೊನಾಲಿಸಾ
  • ವೈರಲ್ ಬೆನ್ನಲ್ಲೇ ಹಿಂದಿ ಸಿನಿಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡ ಬೆಕ್ಕಿನ ಕಣ್ಣಿನ ಸುಂದರಿ
  • ಕೇರಳದಲ್ಲಿ ಪೊಲೀಸ್​ ಠಾಣೆ ಮೆಟ್ಟಿಲೇರಿದ ಮೊನಾಲಿಸಾ
Kumbhmela Monalisa: 2025ರ ಆರಂಭದಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜ್​ನಲ್ಲಿ 144 ವರ್ಷಗಳಿಗೊಮ್ಮೆ ಬರುವ ಅತಿ ಅಪರೂಪದ ಮಹಾಕುಂಭಮೇಳ ನಡೆಯಿತು. ಈ ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮಕ್ಕೆ ಲಕ್ಷಾಂತರ ಭಕ್ತರು ಆಗಮಿಸಿ, ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು. ಈ ಬೃಹತ್ ಮೇಳದಲ್ಲಿ ಸಾಧುಗಳು, ಕಲ್ಪವಾಸಿಗಳು ಸೇರಿದಂತೆ ಹಲವರು ವಿಭಿನ್ನವಾಗಿ ಗಮನ ಸೆಳೆದರು. ಇವರೆಲ್ಲರ ಮಧ್ಯೆ, ಬೆಕ್ಕಿನ ಕಂಗಳ ಹುಡುಗಿಯೊಬ್ಬಳು ಮಾಡಿದ ಮೋಡಿಯನ್ನು ಇಂದಿಗೂ ನೆಟ್ಟಿಗರು ಮರೆತಿಲ್ಲ. ಮಹಾಕುಂಭಮೇಳದಿಂದ ವೈರಲ್ ಆಗಿ ಸ್ಟಾರ್​ ಆದ ಮೊನಾಲಿಸಾ ಎಂಬ ಯುವತಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಮಹಾಕುಂಭಮೇಳದಲ್ಲಿ ಹಾರಗಳನ್ನು ಮಾರಾಟ ಮಾಡುತ್ತಿದ್ದ ಮೊನಾಲಿಸಾ ಭೋಸ್ಲೆ, ವೈರಲ್ ಆಗಿ ಭಾರೀ ಜನಪ್ರಿಯತೆ ಗಿಟ್ಟಿಸಿಕೊಂಡರು. ಹಲವರು ಆಕೆಯನ್ನು ನೋಡಲೆಂದೇ ಮಹಾಕುಂಭಮೇಳಕ್ಕೆ ದೌಡಾಯಿಸಿದರು. ಮೊನಾಲಿಸಾಳ ಕಣ್ಣುಗಳನ್ನು ನೋಡಿ ಫಿದಾ ಆದ ಬಾಲಿವುಡ್​ ನಿರ್ದೇಶಕ, ಆಕೆಗೆ ಸಿನಿಮಾ ಆಫರ್​ ಕೊಟ್ಟಿದ್ದು ಮತ್ತೊಂದು ವಿಶೇಷ. ಚಿತ್ರದಲ್ಲಿನ ನಟನೆಗೆ ಸಿಕ್ಕ ಹಣವನ್ನು ಸದ್ಭಳಕೆ ಮಾಡುವುದಾಗಿಯೂ ಹೇಳಿಕೊಂಡಿದ್ದ ಮೊನಾಲಿಸಾ ಸದ್ಯ ತಮ್ಮ ಮದುವೆ ವಿಷಯದಿಂದ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದಾರೆ.
ಮಲಯಾಳಂ ಹೊಸ ಚಿತ್ರದ ಶೂಟಿಂಗ್​ಗಾಗಿ ತಿರುವನಂತಪುರಂಗೆ ಆಗಮಿಸಿದ್ದ ಮೊನಾಲಿಸಾ, ತನಗೆ ಬಲವಂತದ ಮದುವೆ ಮಾಡಿಸಲು ಹೆತ್ತವರು ಮುಂದಾಗಿದ್ದಾರೆ ಎಂದು ಥಂಪನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಇಂದು ಬೆಳಗ್ಗೆ ತನ್ನ ಪ್ರಿಯಕರನೊಂದಿಗೆ ಠಾಣೆಗೆ ಬಂದ ಯುವತಿ, ತನ್ನ ತಂದೆ ವಿಜಯ್ ಸಿಂಗ್ ಭೋಸ್ಲೆ, ನನಗೆ ಇಷ್ಟವಿಲ್ಲದ ವಿವಾಹಕ್ಕೆ ನನ್ನನ್ನು ಒತ್ತಾಯಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಅವರು ನೋಡಿರುವ ಹುಡುಗನನ್ನೇ ನಾನು ಮದುವೆ ಆಗಬೇಕು ಎಂದು ತಂದೆ ಬಲವಂತ ಮಾಡುತ್ತಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. ಥಳಿಸಿದ್ದಾಗಲಿ ಅಥವಾ ದೈಹಿಕ ಹಲ್ಲೆ ಬಗ್ಗೆ ಮಾಹಿತಿ ನೀಡಿಲ್ಲ. ಬಲವಂತದ ಮದುವೆಗೆ ಮುಂದಾದ ಪೋಷಕರ ನಡೆಗೆ ಆಕೆ ವಿರೋಧಿಸಿದ್ದಾಳೆ. ತನ್ನ ತಂದೆ ಪದೇ ಪದೇ ಒತ್ತಾಯಿಸುತ್ತಿರುವುದಕ್ಕೆ ತುಂಬ ಕಷ್ಟವಾಗುತ್ತಿದೆ. ಇದಕ್ಕೆ ನಿಮ್ಮ ಮಧ್ಯಸ್ಥಿಕೆಯ ಅವಶ್ಯಕತೆಯಿದೆ ಎಂದು ಹೇಳಿಕೊಂಡಳು. ಇಲ್ಲಿಯವರೆಗೆ, ನಾವು ಯಾವುದೇ ಕೇಸ್​ ರಿಜಿಸ್ಟರ್​ ಮಾಡಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಲಿವುಡ್​ ನಿರ್ದೇಶಕ ಸರೋಜ್​ ಮಿಶ್ರಾ ಅವರು ತಮ್ಮ ಮುಂಬರುವ 'ದಿ ಡೈರಿ ಆಫ್​ ಮಣಿಪುರ' ಚಿತ್ರದಲ್ಲಿ ನಟಿಸಲು ಮೊನಾಲಿಸಾಗೆ ಅವಕಾಶ ನೀಡಿದರು. ಅಂತೆಯೇ, ಈ ಸಿನಿಮಾದಲ್ಲಿ ಅಭಿನಯಿಸಿರುವ ಬೆಕ್ಕಿನ ಕಣ್ಣಿನ ಚೆಲುವೆಗೆ ಈಗ ಮಲಯಾಳಂ ಆಫರ್ ಸಿಕ್ಕಿದೆ. ಈ ಹೊಸ ಚಿತ್ರದ ಶೂಟಿಂಗ್​​ಗಾಗಿ ಮೊನಾಲಿಸಾ ತನ್ನ ತಂದೆಯ ಜೊತೆಗೆ ತಿರುವನಂತಪುರಂ ಪೂವರ್​ಗೆ ಆಗಮಿಸಿದ್ದರು. ಈ ವೇಳೆ, ಘಟನೆ ನಡೆದಿರುವುದಾಗಿ ವರದಿಯಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net