ಆದರೆ, ಇನ್ನೊಂದು ವರ್ಗದ ನೆಟ್ಟಿಗರು ಇದನ್ನು ಕೇವಲ ತಮಾಷೆಗಾಗಿ ಹಾಕಿದ ಪೋಸ್ಟ್ ಅಷ್ಟೇ, ಇದರಲ್ಲಿ ಯಾವುದೇ ಗಂಭೀರ ವಿಷಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದಾಗ್ಯೂ, ಈ ಚರ್ಚೆಯು ನಜ್ರಿಯಾ ಅವರ ವೈಯಕ್ತಿಕ ಜೀವನದ ಕಡೆಗೂ ತಿರುಗಿದ್ದು, ಫಹಾದ್ ಫಾಸಿಲ್ ಜೊತೆಗಿನ ಅವರ ಸಂಬಂಧದ ಹಳೆಯ ವದಂತಿಗಳನ್ನು ಲಿಂಕ್ ಮಾಡಿ ಕೆಲವರು ಮಾತನಾಡಲಾರಂಭಿಸಿದ್ದಾರೆ. ದಂಪತಿ ನಡುವೆ ವೈಮನಸ್ಸು ಮೂಡಿರಬಹುದು ಮತ್ತು ಇಬ್ಬರು ಡಿವೋರ್ಸ್ಪಡೆಯಬಹುದು ಎಂಬ ಚರ್ಚೆಯನ್ನೂ ಮಾಡುತ್ತಿದ್ದಾರೆ.